ಬಹಿರಂಗವಾಗಿಯೇ ಬಿಜೆಪಿಗೆ ಜೈ ಜೈ ಎಂದ ರೋಷನ್ ಬೇಗ್
ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಕಾವು ಜೋರಾಗಿದ್ದು, ಬಹಿರಂಗವಾಗಿಯೇ ರೋಷನ್ ಬೇಗ್ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದೆಯೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಬೇಗ್ ಘೋಷಿಸಿದ್ದರು. ಆದ್ರೂ ಕೊನೆಯ ಗಳಿಗೆಯಲ್ಲಿ ಬಿಜೆಪಿಯಿಂದ ವಿಮುಖರಾಗಿದ್ದರು. ಆದ್ರೆ ಇಂದು ಶಿವಾಜಿನಗರ ವಾರ್ಡ್ನ ರಸಲ್ ಮಾರುಕಟ್ಟೆ ಹಿಂಭಾಗ ಬಿಜೆಪಿ ಕಚೇರಿ ಉದ್ಘಾಟನೆಯಲ್ಲಿ ರೋಷನ್ ಬೇಗ್ ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾದ್ರೆ ಮೋದಿ ನೇತೃತ್ವದಲ್ಲಿ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರು ಭಾಗಿಯಾಗಬೇಕು ಎಂದು ಕರೆ ನೀಡಿದ್ದಾರೆ. […]
ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಕಾವು ಜೋರಾಗಿದ್ದು, ಬಹಿರಂಗವಾಗಿಯೇ ರೋಷನ್ ಬೇಗ್ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದೆಯೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಬೇಗ್ ಘೋಷಿಸಿದ್ದರು. ಆದ್ರೂ ಕೊನೆಯ ಗಳಿಗೆಯಲ್ಲಿ ಬಿಜೆಪಿಯಿಂದ ವಿಮುಖರಾಗಿದ್ದರು.
ಆದ್ರೆ ಇಂದು ಶಿವಾಜಿನಗರ ವಾರ್ಡ್ನ ರಸಲ್ ಮಾರುಕಟ್ಟೆ ಹಿಂಭಾಗ ಬಿಜೆಪಿ ಕಚೇರಿ ಉದ್ಘಾಟನೆಯಲ್ಲಿ ರೋಷನ್ ಬೇಗ್ ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾದ್ರೆ ಮೋದಿ ನೇತೃತ್ವದಲ್ಲಿ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರು ಭಾಗಿಯಾಗಬೇಕು ಎಂದು ಕರೆ ನೀಡಿದ್ದಾರೆ.
ಮುಸಲ್ಮಾನರು ಬಿಜೆಪಿ ಜತೆ ಒಂದಾಗಿರಲು ಬಯಸುತ್ತಾರೆ. ಈ ಹಿಂದೆ, ನಮ್ಮನ್ನ ತೋರಿಸಿ ಬೇವಕೂಫ್ ಮಾಡಿ ವೋಟ್ ಪಡೆಯುತ್ತಿದ್ರು. ಬೇವಕೂಫ್ ಮಾಡಿ ವೋಟ್ ಪಡೆಯೋ ಕಾಲ ಹೋಗಿದೆ. ನಾವು ಕೂಡ ದೇಶದ ಉನ್ನತಿಯಲ್ಲಿ ಮೋದಿಜಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಸಾಥ್ ನೀಡುತ್ತೇವೆ ಎಂದರು.