ಬಹಿರಂಗವಾಗಿಯೇ ಬಿಜೆಪಿಗೆ ಜೈ ಜೈ ಎಂದ ರೋಷನ್ ಬೇಗ್

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಕಾವು ಜೋರಾಗಿದ್ದು, ಬಹಿರಂಗವಾಗಿಯೇ ರೋಷನ್ ಬೇಗ್ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದೆಯೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಬೇಗ್ ಘೋಷಿಸಿದ್ದರು. ಆದ್ರೂ ಕೊನೆಯ ಗಳಿಗೆಯಲ್ಲಿ ಬಿಜೆಪಿಯಿಂದ ವಿಮುಖರಾಗಿದ್ದರು. ಆದ್ರೆ ಇಂದು ಶಿವಾಜಿನಗರ ವಾರ್ಡ್​ನ ರಸಲ್ ಮಾರುಕಟ್ಟೆ ಹಿಂಭಾಗ ಬಿಜೆಪಿ ಕಚೇರಿ ಉದ್ಘಾಟನೆಯಲ್ಲಿ ರೋಷನ್ ಬೇಗ್ ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾದ್ರೆ ಮೋದಿ ನೇತೃತ್ವದಲ್ಲಿ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರು ಭಾಗಿಯಾಗಬೇಕು ಎಂದು ಕರೆ ನೀಡಿದ್ದಾರೆ. […]

ಬಹಿರಂಗವಾಗಿಯೇ ಬಿಜೆಪಿಗೆ ಜೈ ಜೈ ಎಂದ ರೋಷನ್ ಬೇಗ್
ಮಾಜಿ ಸಚಿವ ರೋಷನ್​ ಬೇಗ್
ಸಾಧು ಶ್ರೀನಾಥ್​

Updated on: Nov 25, 2019 | 7:09 PM

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಕಾವು ಜೋರಾಗಿದ್ದು, ಬಹಿರಂಗವಾಗಿಯೇ ರೋಷನ್ ಬೇಗ್ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದೆಯೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಬೇಗ್ ಘೋಷಿಸಿದ್ದರು. ಆದ್ರೂ ಕೊನೆಯ ಗಳಿಗೆಯಲ್ಲಿ ಬಿಜೆಪಿಯಿಂದ ವಿಮುಖರಾಗಿದ್ದರು.

ಆದ್ರೆ ಇಂದು ಶಿವಾಜಿನಗರ ವಾರ್ಡ್​ನ ರಸಲ್ ಮಾರುಕಟ್ಟೆ ಹಿಂಭಾಗ ಬಿಜೆಪಿ ಕಚೇರಿ ಉದ್ಘಾಟನೆಯಲ್ಲಿ ರೋಷನ್ ಬೇಗ್ ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾದ್ರೆ ಮೋದಿ ನೇತೃತ್ವದಲ್ಲಿ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರು ಭಾಗಿಯಾಗಬೇಕು ಎಂದು ಕರೆ ನೀಡಿದ್ದಾರೆ.

ಮುಸಲ್ಮಾನರು ಬಿಜೆಪಿ ಜತೆ ಒಂದಾಗಿರಲು ಬಯಸುತ್ತಾರೆ. ಈ ಹಿಂದೆ, ನಮ್ಮನ್ನ ತೋರಿಸಿ ಬೇವಕೂಫ್ ಮಾಡಿ ವೋಟ್ ಪಡೆಯುತ್ತಿದ್ರು. ಬೇವಕೂಫ್ ಮಾಡಿ ವೋಟ್ ಪಡೆಯೋ ಕಾಲ ಹೋಗಿದೆ. ನಾವು ಕೂಡ ದೇಶದ ಉನ್ನತಿಯಲ್ಲಿ ಮೋದಿಜಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಸಾಥ್ ನೀಡುತ್ತೇವೆ ಎಂದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us