ಕೋವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿಗೆ ರಕ್ತಸ್ರಾವ ಆಗಿದ್ದರೂ ಸ್ಪಂದಿಸದ ವೈದ್ಯರು! ಮುಂದೇನಾಯ್ತು?

| Updated By:

Updated on: Jun 08, 2020 | 3:55 PM

ರಾಯಚೂರು: ಗರ್ಭಿಣಿಗೆ ತೀವ್ರ ರಕ್ತಸ್ರಾವ ಆಗಿದ್ದರೂ ವೈದ್ಯರು ಮಾನವೀಯತೆ ಮರೆತಿರುವ ಘಟನೆ ರಾಯಚೂರಿನ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ನರಳಾಡುತ್ತಿದ್ದರೂ, ಆಸ್ಪತ್ರೆ ವೈದ್ಯರು ಸ್ಪಂದಿಸಲಿಲ್ಲ ಎಂದು ಗಂಭೀರ ಆರೋಪ ಕೇಳಿಬಂದಿದೆ. ಗರ್ಭಿಣಿ ನೆರವಿಗೆ ಬಾರದ ವೈದ್ಯರ ವಿರುದ್ಧ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಪೆಕ್ ಆಸ್ಪತ್ರೆಯಲ್ಲಿದ್ದ ಕೊರೊನಾ ಸೋಂಕಿತರು ಒಂದೆಡೆ ಸೇರಿ ಮಧ್ಯಾಹ್ನದ ಊಟ ಬಹಿಷ್ಕರಿಸಿದ್ದಾರೆ. ಕೊನೆಗೆ ಪ್ರತಿಭಟನೆಗೆ ಮಣಿದು ಗರ್ಭಿಣಿಯನ್ನ ರಿಮ್ಸ್ ಆಸ್ಪತ್ರೆಗೆ ಆಸ್ಪತ್ರೆ ಸಿಬ್ಬಂದಿ ರವಾನಿಸಿದರು.

ಕೋವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿಗೆ ರಕ್ತಸ್ರಾವ ಆಗಿದ್ದರೂ ಸ್ಪಂದಿಸದ ವೈದ್ಯರು! ಮುಂದೇನಾಯ್ತು?
Follow us on

ರಾಯಚೂರು: ಗರ್ಭಿಣಿಗೆ ತೀವ್ರ ರಕ್ತಸ್ರಾವ ಆಗಿದ್ದರೂ ವೈದ್ಯರು ಮಾನವೀಯತೆ ಮರೆತಿರುವ ಘಟನೆ ರಾಯಚೂರಿನ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ನರಳಾಡುತ್ತಿದ್ದರೂ, ಆಸ್ಪತ್ರೆ ವೈದ್ಯರು ಸ್ಪಂದಿಸಲಿಲ್ಲ ಎಂದು ಗಂಭೀರ ಆರೋಪ ಕೇಳಿಬಂದಿದೆ.

ಗರ್ಭಿಣಿ ನೆರವಿಗೆ ಬಾರದ ವೈದ್ಯರ ವಿರುದ್ಧ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಪೆಕ್ ಆಸ್ಪತ್ರೆಯಲ್ಲಿದ್ದ ಕೊರೊನಾ ಸೋಂಕಿತರು ಒಂದೆಡೆ ಸೇರಿ ಮಧ್ಯಾಹ್ನದ ಊಟ ಬಹಿಷ್ಕರಿಸಿದ್ದಾರೆ. ಕೊನೆಗೆ ಪ್ರತಿಭಟನೆಗೆ ಮಣಿದು ಗರ್ಭಿಣಿಯನ್ನ ರಿಮ್ಸ್ ಆಸ್ಪತ್ರೆಗೆ ಆಸ್ಪತ್ರೆ ಸಿಬ್ಬಂದಿ ರವಾನಿಸಿದರು.