ರಾಜ್ಯಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿ ಲಿಂಗಸಗೂರು ಮೂಲದ ಗಸ್ತಿ ಹಿನ್ನೆಲೆ
ಆಶ್ಚರ್ಯಕರ ಬೆಳವಣಿಗೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರ ಮೂಲದ ಅಶೋಕ್ ಗಸ್ತಿ ಅವರನ್ನು ಬಿಜೆಪಿ ಹೈಕಮಾಂಡ್ ಇದೇ 19ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ರಾಜ್ಯ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಸ್ತಿ, ಎಬಿವಿಪಿ ಮತ್ತು ಸಂಘ ಪರಿವಾರದ ಚಟುವಟಿಕೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯ ಸಂತೋಷಜಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರಿಗೆ ರಾಜ್ಯಸಭೆ ಟಿಕೇಟ್ ಘೋಷಣೆಯಾಗಿದ್ದು ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರಲ್ಲೆ ಆಶ್ಚರ್ಯ ಮೂಡಿಸಿದೆ. ಎರಡು ಬಾರಿ ರಾಯಚೂರ ಜಿಲ್ಲಾ ಬಿಜೆಪಿ ಪ್ರಧಾನ […]
ಆಶ್ಚರ್ಯಕರ ಬೆಳವಣಿಗೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರ ಮೂಲದ ಅಶೋಕ್ ಗಸ್ತಿ ಅವರನ್ನು ಬಿಜೆಪಿ ಹೈಕಮಾಂಡ್ ಇದೇ 19ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ರಾಜ್ಯ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಸ್ತಿ, ಎಬಿವಿಪಿ ಮತ್ತು ಸಂಘ ಪರಿವಾರದ ಚಟುವಟಿಕೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯ ಸಂತೋಷಜಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರಿಗೆ ರಾಜ್ಯಸಭೆ ಟಿಕೇಟ್ ಘೋಷಣೆಯಾಗಿದ್ದು ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರಲ್ಲೆ ಆಶ್ಚರ್ಯ ಮೂಡಿಸಿದೆ. ಎರಡು ಬಾರಿ ರಾಯಚೂರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಸ್ತಿ ರಾಯಚೂರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು.