AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ‘ಮಣಿಪಾಲ್’ ಆಗಲಿದೆಯಾ RCB?

RCB on sale; : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್​ಸಿಬಿ ಫ್ರಾಂಚೈಸಿಯನ್ನು ಹೊಂದಿದೆ. ಇದೀಗ ಡಿಯಾಜಿಯೋ ಕಂಪೆನಿಯು ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

IPL 2026: 'ಮಣಿಪಾಲ್' ಆಗಲಿದೆಯಾ RCB?
Rcb - Manipal
ಝಾಹಿರ್ ಯೂಸುಫ್
|

Updated on:Mar 18, 2026 | 10:03 AM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕೆಲ ಪ್ರಮುಖ ಕಂಪೆನಿಗಳು ಬಿಡ್ಡಿಂಗ್​ನಿಂದ ಹಿಂದೆ ಸರಿದಿದ್ದು, ಇದೀಗ ಉಳಿದಿರುವುದು ಎರಡು ಗ್ರೂಪ್​ಗಳು ಮಾತ್ರ ಎಂದು ವರದಿಯಾಗಿದೆ. ಆ ಗ್ರೂಪ್​ಗಳೆಂದರೆ ರಂಜನ್ ಪೈ ಮತ್ತು ಕೆಕೆಆರ್ ಮತ್ತು EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್.

ಮಣಿಪಾಲ್ ಗ್ರೂಪ್‌ನ ಅಧ್ಯಕ್ಷ ಡಾ. ರಂಜನ್ ಪೈ ಅವರು ಈ ಹಿಂದೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದರು. ಇದೀಗ ಅವರು ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಜೊತೆಗೂಡಿ ಆರ್​ಸಿಬಿ ತಂಡವನ್ನು ಖರೀದಿಸಲು ಮುಂದಾಗಿದ್ದಾರೆ.

ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕನ್ನಡಿಗ ರಂಜನ್ ಪೈ ಅವರ ಪಾಲಾದರೆ ತಂಡದ ಹೆಸರಿನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಪ್ರಸ್ತುತ ಇರುವ ಲೋಗೋ ಹಾಗೂ ಹೆಸರು ಬದಲಾಯಿಸಬಹುದು. ಏಕೆಂದರೆ ಆರ್​ಸಿಬಿಗೆ ರಾಯಲ್ ಚಾಲೆಂಜರ್ಸ್ ಎಂಬ ಹೆಸರು ನೀಡಿದ್ದು ಮದ್ಯದ ಬ್ರಾಂಡ್​ನ ಪಚಾರಕ್ಕಾಗಿ.

ಹೀಗಾಗಿ ರಂಜನ್ ಪೈ ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಿದರೆ  ಮಹತ್ವದ ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ. ಇಲ್ಲಿ ಯಾವೆಲ್ಲಾ ಬದಲಾವಣೆ ಕಂಡು ಬರಲಿದೆ ಎಂದು ನೋಡುವುದಾದರೆ…

ತಂಡದ ಹೆಸರು ಮತ್ತು ಲೋಗೋ:

  • ಹೆಸರು: ತಂಡದ ಹೆಸರಿನಲ್ಲಿ ‘ಬೆಂಗಳೂರು’ ಎಂಬ ಹೆಸರು ಮುಂದುವರಿಯಲಿದೆ. ಆದರೆ, ಹೊಸ ಮಾಲೀಕರು ತಮ್ಮ ಕಂಪನಿಯ ಹೆಸರನ್ನು (ಉದಾಹರಣೆಗೆ: EQT ಅಥವಾ ‘Manipal’) ಸೇರಿಸುವ ಸಾಧ್ಯತೆಯಿದೆ.
  • ಲೋಗೋ: ಹೊಸ ಮಾಲೀಕರು ಬಂದಾಗ ಬ್ರ್ಯಾಂಡ್ ಅನ್ನು ರೀಫ್ರೆಶ್ ಮಾಡಲು ಹೊಸ ಲೋಗೋ ವಿನ್ಯಾಸಗೊಳಿಸುವುದು ವಾಡಿಕೆ. ಡಿಯಾಜಿಯೊ ಅವರ ಲೋಗೋ ಬದಲಾಗಿ ಹೊಸ ಇನ್ವೆಸ್ಟರ್‌ಗಳ ಲೋಗೋ ಬರಲಿದೆ.

ನಿರ್ವಹಣಾ ಮಂಡಳಿ:

  • ಪ್ರಸ್ತುತ ಇರುವ ‘ಯುನೈಟೆಡ್ ಸ್ಪಿರಿಟ್ಸ್’ ಪ್ರತಿನಿಧಿಗಳ ಬದಲಾಗಿ, ಹೊಸ ಮಾಲೀಕತ್ವದ ಬೋರ್ಡ್ ಆಫ್ ಡೈರೆಕ್ಟರ್ಸ್ ನೇಮಕವಾಗಲಿದ್ದಾರೆ. ಆದರೆ, ಕ್ರಿಕೆಟ್ ಕಾರ್ಯಾಚರಣೆಗಳ ಮೇಲೆ ತಕ್ಷಣವೇ ದೊಡ್ಡ ಬದಲಾವಣೆ ಇರುವುದಿಲ್ಲ.
  • ಪ್ರಸ್ತುತ ಇರುವ ಕೋಚಿಂಗ್ ಸ್ಟಾಫ್ ಮತ್ತು ಮ್ಯಾನೇಜ್‌ಮೆಂಟ್ 2026ರ ಸೀಸನ್ ಮುಗಿಯುವವರೆಗೆ ಮುಂದುವರಿಯುವ ಸಾಧ್ಯತೆ ಹೆಚ್ಚು.

ವಿರಾಟ್ ಕೊಹ್ಲಿಯೇ ಬ್ರ್ಯಾಂಡ್:

  • ಹೊಸ ಮಾಲೀಕರಿಗೆ ವಿರಾಟ್ ಕೊಹ್ಲಿ ಅವರೇ ತಂಡದ ಅತಿದೊಡ್ಡ ಆಸ್ತಿ. ಆದ್ದರಿಂದ, ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಮತ್ತು ಪ್ರಮುಖ ಆಟಗಾರನಾಗಿ ಉಳಿಸಿಕೊಳ್ಳಲು ಹೊಸ ಮಾಲೀಕರು ಹೆಚ್ಚಿನ ಒತ್ತು ನೀಡಲಿದ್ದಾರೆ.
  • ಮಾರ್ಚ್ ಅಂತ್ಯದ ವೇಳೆಗೆ ಅಧಿಕೃತವಾಗಿ ಹೊಸ ಮಾಲೀಕರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಹೊಸ ಜೆರ್ಸಿ ಅಥವಾ ಲೋಗೋ ಅನಾವರಣಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: 42 ಸಿಕ್ಸ್, 30 ಫೋರ್: ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ ಸ್ಯಾಮ್ ಚೀಕ್

RCB ಖರೀದಿ ರೇಸ್​ನಲ್ಲಿರುವವರು:

  • EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್: ಸ್ವೀಡನ್ ಮೂಲದ ಇಕ್ವಿಟಿ ಸಂಸ್ಥೆ ‘EQT’ ಮತ್ತು ಅಝೀಂ ಪ್ರೇಮ್‌ಜಿ ಅವರ ‘ಪ್ರೇಮ್‌ಜಿ ಇನ್ವೆಸ್ಟ್’ ಜಂಟಿಯಾಗಿ ಸುಮಾರು $2.1 ಬಿಲಿಯನ್ ಬಿಡ್ ಮಾಡಿವೆ ಎಂದು ವರದಿಯಾಗಿದೆ.
  • ರಂಜನ್ ಪೈ ಮತ್ತು ಕೆಕೆಆರ್: ಮಣಿಪಾಲ್ ಗ್ರೂಪ್‌ನ ಡಾ. ರಂಜನ್ ಪೈ ನೇತೃತ್ವದ ತಂಡದಲ್ಲಿ ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಕೂಡ ಅಂತಿಮ ರೇಸ್​ನಲ್ಲಿದೆ.

RCB ಫ್ರಾಂಚೈಸಿಯ ಆರಂಭಿಕ ಬಿಡ್ಡಿಂಗ್ ಮೊತ್ತ ಸುಮಾರು $2 ಬಿಲಿಯನ್ (ಅಂದಾಜು ₹18,500 ಕೋಟಿ) ಎಂದು ಘೋಷಿಸಲಾಗಿದೆ. EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್ ಕಂಪೆನಿಯು $2.1 ಬಿಲಿಯನ್ ಬಿಡ್ ಮಾಡಿದೆ ಎಂದು ವರದಿಯಾಗಿದೆ. ಇನ್ನು ರಂಜನ್ ಪೈ ಮತ್ತು ಕೆಕೆಆರ್ (KKR) ಕೂಡ ಇದೇ ಮೊತ್ತದ ಅಸುಪಾಸಿನಲ್ಲಿ ಬಿಡ್ ಸಲ್ಲಿಸಿರುವ ಸಾಧ್ಯತೆಯಿದೆ. ಹೀಗಾಗಿ ಅಂತಿಮವಾಗಿ ಆರ್​​ಸಿಬಿ ಯಾರ ಪಾಲಾಗಲಿದೆ ಎಂಬುದೇ ಈಗ ಕುತೂಹಲ.

Published On - 10:02 am, Wed, 18 March 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ