ನಟ ಚಿರಂಜೀವಿಗೆ ಸಂತಾಪ ಸೂಚಿಸಿ, ಸೇಡು ತೀರಿಸಿಕೊಂಡ ನಟಿ ಶ್ರೀ ರೆಡ್ಡಿ!
ಕನ್ನಡದ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿಗೆ ಇಡೀ ರಾಜ್ಯ ಮಮ್ಮಲಮರುಗಿದೆ. ಇದೇ ವೇಳೆ ಚಿರಂಜೀವಿ ಹೆಸರು ಕೆಲ ಅಚಾತುರ್ಯಗಳಿಗೂ ಕಾರಣವಾಗಿದೆ. ಮೊದಲಿಗೆ ಸ್ವತಃ ಆ ಯಮಧರ್ಮರಾಯನೇ ಚಿರಂಜೀವಿ ಅನ್ನೋ ಹೆಸರಿದ್ದರೂ ಕನ್ಫ್ಯೂಸ್ ಮಾಡಿಕೊಂಡು ಕನ್ನಡದ ಕಂದನನ್ನು ಬೇಗನೇ ಕರೆಯಿಸಿಕೊಂಡಿದ್ದಾನೆ. ಇದೇ ವೇಳೆ ಮುಂಬೈನಲ್ಲಿ ವಾಸವಾಗಿರುವ ಖ್ಯಾತ ಅಂಕಣಕಾರ್ತಿ ಶೋಭಾ ಡೆ ಚಿರಂಜೀವಿ ಹೆಸರನ್ನು ಕನ್ಫ್ಯೂಸ್ ಮಾಡಿಕೊಂಡು ತೆಲುಗು ಮೆಗಾಸ್ಟಾರ್ ಚಿರಂಜೀವಿಯ ಫೋಟೋ ಹಾಕಿ, ಸಂತಾಪ ಸೂಚಿಸಿದ್ದಾರೆ! ಇನ್ನು, ಇದೇ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೂ ಮತ್ತು […]
ಕನ್ನಡದ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿಗೆ ಇಡೀ ರಾಜ್ಯ ಮಮ್ಮಲಮರುಗಿದೆ. ಇದೇ ವೇಳೆ ಚಿರಂಜೀವಿ ಹೆಸರು ಕೆಲ ಅಚಾತುರ್ಯಗಳಿಗೂ ಕಾರಣವಾಗಿದೆ. ಮೊದಲಿಗೆ ಸ್ವತಃ ಆ ಯಮಧರ್ಮರಾಯನೇ ಚಿರಂಜೀವಿ ಅನ್ನೋ ಹೆಸರಿದ್ದರೂ ಕನ್ಫ್ಯೂಸ್ ಮಾಡಿಕೊಂಡು ಕನ್ನಡದ ಕಂದನನ್ನು ಬೇಗನೇ ಕರೆಯಿಸಿಕೊಂಡಿದ್ದಾನೆ.
ಇದೇ ವೇಳೆ ಮುಂಬೈನಲ್ಲಿ ವಾಸವಾಗಿರುವ ಖ್ಯಾತ ಅಂಕಣಕಾರ್ತಿ ಶೋಭಾ ಡೆ ಚಿರಂಜೀವಿ ಹೆಸರನ್ನು ಕನ್ಫ್ಯೂಸ್ ಮಾಡಿಕೊಂಡು ತೆಲುಗು ಮೆಗಾಸ್ಟಾರ್ ಚಿರಂಜೀವಿಯ ಫೋಟೋ ಹಾಕಿ, ಸಂತಾಪ ಸೂಚಿಸಿದ್ದಾರೆ!
ಇನ್ನು, ಇದೇ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೂ ಮತ್ತು ತೆಲುಗು ವಿವಾದಾತ್ಮಕ ನಟಿ ಶ್ರೀ ರೆಡ್ಡಿ ನಡುವೆ ಹಾವು-ಮುಂಗಿಸಿ ಆಟ ನಡೆದೇ ಇದೆ. ಸುಮಾರು 2 ವರ್ಷಗಳ ಹಿಂದೆ ಚಿರಂಜೀವಿ ಕಿರಿಯ ಸೋದರ ಪವನ್ ಕಲ್ಯಾಣ್ ತನಗೆ ತುಂಬಾ ಕಿರಿಕಿರಿ ಮಾಡಿದ್ದಾನೆ ಎಂದು ಆರೋಪಿಸಿ, ನಟಿ ಶ್ರೀ ರೆಡ್ಡಿ ಅರೆಬೆತ್ತಲೆಯಾಗಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದರು.
ಅಲ್ಲಿಂದ ಶ್ರೀ ರೆಡ್ಡಿ ಅನುಕ್ಷಣವೂ ಚಿರು ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದೆ. ಸಿಕ್ಕಿದ ಯಾವುದೇ ಅವಕಾಶವನ್ನೂ ಅವರು ಮಿಸ್ ಮಾಡಿಕೊಳ್ಳುತ್ತಿಲ್ಲ. ನಿನ್ನೆಯೂ ಹಾಗೆಯೇ ಮಾಡಿದ್ದಾರೆ.. ಇಲ್ಲಿ ಕನ್ನಡದ ನಟ ಚಿರಂಜೀವಿ ಸರ್ಜಾ ಹಠಾತ್ತಾಗಿ ಸಾವಿಗೀಡಾಗುತ್ತಿದ್ದಂತೆ ಅತ್ತ ಶ್ರೀರೆಡ್ಡಿ, Rest in peace Chiranjeevi ji ಎಂದು ಒಂದು ವಾಕ್ಯದ ‘ಶ್ರದ್ಧಾಂಜಲಿ’ ಅರ್ಪಿಸಿಯೇ ಬಿಟ್ಟರು! ಚಿರಂಜೀವಿ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಶ್ರೀರೆಡ್ಡಿಗೆ ಕ್ಲಾಸ್ ತೆಗೆದುಕೊಂಡಿದ್ದರೆ, ಶ್ರೀರೆಡ್ಡಿ ಅಪ್ಪಟ ಅಭಿಮಾನಿಗಳು ಭಲೇ ಶ್ರೀ, ಇಲ್ಲೂ ನಿನ್ನ ಸೇಡು ವಿಜೃಂಭಿಸಿದೆ ಎಂದು ನಗೆಯಾಡಿದ್ದಾರೆ. ಅತ್ತ ಚಿರಂಜೀವಿ ಬ್ರದರ್ಸ್ ಮಾತ್ರ…