ಪತ್ನಿಯ ಹೊಟ್ಟೆಯಲ್ಲಿರುವ ಮಗುವನ್ನ ನೋಡಲೇ ಇಲ್ಲ ಚಿರಂಜೀವಿ ಸರ್ಜಾ
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರು ಸೇರಿದಂತೆ ಇಡೀ ಚಿತ್ರರಂಗ ಚಿರು ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಎರಡು ವರ್ಷದ ಹಿಂದಷ್ಟೇ ವೈವಾಹಕ ಜೀವನಕ್ಕೆ ಚಿರಂಜೀವಿ ಸರ್ಜಾ ಕಾಲಿಟ್ಟಿದ್ದರು. 2017ರ ಅಕ್ಟೋಬರ್ನಲ್ಲಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ನಿಶ್ಚಿತಾರ್ಥವಾಗಿತ್ತು. ಮುಂದಿನ ವರ್ಷ ಅಂದ್ರೆ 2018ರ ಮೇ 2ರಂದು ಅದ್ದೂರಿಯಾಗಿ ಮೇಘನಾ-ಚಿರು ವಿವಾಹ ಕಾರ್ಯಕ್ರಮ ನಡೆದಿತ್ತು. ಇದೀಗ ಮೇಘನಾ-ಚಿರು ಪ್ರೀತಿಯ ಕುಡಿ ಚಿಗುರುತ್ತಿದೆ. ಹೌದು, ಚಿರಂಜೀವಿ ಸರ್ಜಾ ಪತ್ನಿ ಮೇಘನಾ […]
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರು ಸೇರಿದಂತೆ ಇಡೀ ಚಿತ್ರರಂಗ ಚಿರು ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಎರಡು ವರ್ಷದ ಹಿಂದಷ್ಟೇ ವೈವಾಹಕ ಜೀವನಕ್ಕೆ ಚಿರಂಜೀವಿ ಸರ್ಜಾ ಕಾಲಿಟ್ಟಿದ್ದರು. 2017ರ ಅಕ್ಟೋಬರ್ನಲ್ಲಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ನಿಶ್ಚಿತಾರ್ಥವಾಗಿತ್ತು. ಮುಂದಿನ ವರ್ಷ ಅಂದ್ರೆ 2018ರ ಮೇ 2ರಂದು ಅದ್ದೂರಿಯಾಗಿ ಮೇಘನಾ-ಚಿರು ವಿವಾಹ ಕಾರ್ಯಕ್ರಮ ನಡೆದಿತ್ತು. ಇದೀಗ ಮೇಘನಾ-ಚಿರು ಪ್ರೀತಿಯ ಕುಡಿ ಚಿಗುರುತ್ತಿದೆ.
ಹೌದು, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರು ಇದೀಗ 4 ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ ಮಗುವಿನ ಮುಖ ನೋಡದೆ ತಂದೆಯೇ ಇಹಲೋಕ ತ್ಯಜಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿನಿಂದ ಸರ್ಜಾ ಕುಟುಂಬಕ್ಕೆ ಸೂತಕದ ಛಾಯೆ ಆವರಿಸಿದೆ.