ಉಡುಪಿ: ರಕ್ಷಿತಾ ನಾಯಕ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಗೆಳೆಯ ಪ್ರಶಾಂತ್ ಮೊಗವೀರ ಬಂಧನವಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ರಕ್ಷಿತಾ ಮೃತಪಟ್ಟಿದ್ದಳು. ಆಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆತಂದು, ರಕ್ಷಿತಾ ಮೃತಪಟ್ಟ ಬಳಿಕ ಪ್ರಶಾಂತ್ ಕಣ್ಮರೆಯಾಗಿದ್ದ. ಪ್ರಶಾಂತ್ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಾಗಿತ್ತು.
ಇದೀಗ, ನಗರ ಪೊಲೀಸರಿಂದ ಪ್ರಶಾಂತ್ ಬಂಧನವಾಗಿದೆ. ಆರೋಪಿ ಕೊಲ್ಲೂರು ಸಮೀಪದ ಜಡ್ಕಲ್ ನಿವಾಸಿ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗೆ ದಾಖಲಿಸಿ ಯುವಕ ಪರಾರಿ ಮುಂದೇನಾಯ್ತು?