ಎಸ್.ಎಸ್. ರಾಜಮೌಳಿ (SS Rajamouli) ಜತೆ ಸಿನಿಮಾ ಮಾಡಿದರೆ ದುರಾದೃಷ್ಟ ಕೈ ಹಿಡಿಯುತ್ತದೆ ಎಂಬ ಒಂದು ವಿಚಿತ್ರ ನಂಬಿಕೆ ಒಂದಷ್ಟು ಜನರಲ್ಲಿ ಇದೆ. ಇದು ಅನೇಕ ಬಾರಿ ಸಾಬೀತು ಆಗಿರುವುದರಿಂದ ಈ ಮಾತು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ರಾಜಮೌಳಿ ಜತೆ ಸಿನಿಮಾ ಮಾಡಿದ ನಂತರ ಬೇರೆ ಯಾರ ಜತೆ ಸಿನಿಮಾ ಮಾಡಿದರೂ ಆ ಚಿತ್ರ ಸೋಲುತ್ತದೆ ಎಂಬುದು ಸಾಬೀತಾಗಿದೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಫ್ಯಾನ್ಸ್ಗೆ ಇದೇ ರೀತಿಯ ಭಯ ಕಾಡುತ್ತಿದೆ. ಹೀಗಿರುವಾಗಲೇ ರಾಮ್ ಚರಣ್ (Ram Charan) ಫ್ಯಾನ್ಸ್ಗೆ ಬೇಸರದ ಸುದ್ದಿ ಒಂದು ಸಿಕ್ಕಿದೆ.
ರಾಮ್ ಚರಣ್ ಸದ್ಯ ಶಂಕರ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್ಸಿ 15’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಇದರ ಜತೆಗೆ ರಾಮ್ ಚರಣ್ ಅವರು 16ನೇ ಸಿನಿಮಾ ಒಪ್ಪಿಕೊಂಡಿದ್ದರು. ಸೂಪರ್ ಹಿಟ್ ಸಿನಿಮಾ ‘ಜೆರ್ಸಿ’ ನಿರ್ದೇಶಕ ಗೌತಮ್ ತಿಣ್ಣನುರಿ ಜತೆ ರಾಮ್ ಚರಣ್ ಕೆಲಸ ಮಾಡಬೇಕಿತ್ತು. ಆದರೆ, ಈ ಸಿನಿಮಾ ಅರ್ಧಕ್ಕೆ ನಿಲ್ಲುವ ಸೂಚನೆ ಸಿಕ್ಕಿದೆ.
ರಾಮ್ ಚರಣ್ ಹಾಗೂ ಗೌತಮ್ ಮಧ್ಯೆ ಒಂದು ಹಂತದ ಮಾತುಕತೆ ನಡೆದಿತ್ತು. ಕಥೆಯ ಎಳೆಯನ್ನು ಗೌತಮ್ ಅವರು ರಾಮ್ ಚರಣ್ಗೆ ಹೇಳಿದ್ದರು. ಈಗ ಸ್ಕ್ರಿಪ್ಟ್ನ ಅಂತಿಮ ವರ್ಷನ್ಅನ್ನು ರಾಮ್ ಚರಣ್ ಕೇಳಿದ್ದಾರೆ. ಆದರೆ, ಇದು ಅವರಿಗೆ ಖುಷಿ ನೀಡಲಿಲ್ಲ. ಈ ಕಾರಣಕ್ಕೆ ಕಥೆಯಲ್ಲಿ ಮತ್ತೆ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಸಿನಿಮಾದ ಕೆಲಸಗಳು ಮುಂದಕ್ಕೆ ಹೋಗಿವೆ. ಕಥೆಯಲ್ಲಿ ಬದಲಾವಣೆ ಮಾಡಿದ ನಂತರವೂ ರಾಮ್ ಚರಣ್ಗೆ ಇಷ್ಟವಾಗದಿದ್ದರೆ ಸಿನಿಮಾ ನಿಂತೇ ಹೋಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಇದನ್ನೂ ಓದಿ: Salman Khan: ರಾಮ್ ಚರಣ್ ಮನೆಯಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ; ಅತಿಥಿಗಳ ಜತೆಯಲ್ಲಿ ಪೋಸ್ ನೀಡಿದ ಉಪಾಸನಾ
ರಾಮ್ ಚರಣ್ ಅವರ 16ನೇ ಸಿನಿಮಾಗೆ ಯುವಿ ಕ್ರಿಯೇಷನ್ಸ್ ಬಂಡವಾಳ ಹೂಡಬೇಕಿತ್ತು. ಪಾತ್ರವರ್ಗದ ಆಯ್ಕೆ ಕೂಡ ಪ್ರಗತಿಯಲ್ಲಿತ್ತು. ಹೀಗಿರುವಾಗಲೇ ಸಿನಿಮಾ ನಿಂತಿರುವ ಸುದ್ದಿ ಹರಿದಾಡುತ್ತಿದೆ. ಒಂದು ವರ್ಗದ ಫ್ಯಾನ್ಸ್ ಇದಕ್ಕೆ ರಾಜಮೌಳಿ ಅವರನ್ನು ದೂಷಿಸುತ್ತಿದ್ದಾರೆ. ರಾಜಮೌಳಿ ಜತೆ ರಾಮ್ ಚರಣ್ ಸಿನಿಮಾ ಮಾಡಿದ ಕಾರಣಕ್ಕೇ ಈ ರೀತಿ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಸಿನಿಮಾ ತಂಡದವರೇ ಅಪ್ಡೇಟ್ ನೀಡಬೇಕಿದೆ.