ಡಾ. ಬಸವರಾಜ ಗುರೂಜಿಯಿಂದ ರಮೇಶ್ ಜಾರಕಿಹೊಳಿ ಜಾತಕ ವಿಶ್ಲೇಷಣೆ: ಸದ್ಯಕ್ಕೆ ಸಂಕಷ್ಟ, ಏಪ್ರಿಲ್ ನಂತರ ಗುರು ಬಲ

| Updated By: ಆಯೇಷಾ ಬಾನು

Updated on: Mar 03, 2021 | 1:52 PM

ಜಲಸಂಪನ್ಮೂಲ ಸಚಿವ- ಗೋಕಾಕ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಸುದ್ದಿಯಲ್ಲಿದ್ದು, ಸ್ಥಾನ ಕಳೆದುಕೊಳ್ಳುವ ಯೋಗ ಇದೆ. ಇದಕ್ಕೆ ಜ್ಯೋತಿಷ ಫಲ ಕಾರಣ ಎಂದು ಡಾ ಬಸವರಾಜ ಗುರೂಜಿ ಹೇಳಿದ್ದಾರೆ.

ಡಾ. ಬಸವರಾಜ ಗುರೂಜಿಯಿಂದ ರಮೇಶ್ ಜಾರಕಿಹೊಳಿ ಜಾತಕ ವಿಶ್ಲೇಷಣೆ: ಸದ್ಯಕ್ಕೆ ಸಂಕಷ್ಟ, ಏಪ್ರಿಲ್ ನಂತರ ಗುರು ಬಲ
ರಮೇಶ್ ಜಾರಕಿಹೊಳಿ
Follow us on

ಮಾರ್ಚ್ 2ನೇ ತಾರೀಕಿನಿಂದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಬಗ್ಗೆ ಸುದ್ದಿ ಎಲ್ಲ ಕಡೆಗೆ ಹರಿದಾಡುತ್ತಿದೆ. ಅವರ ಇಂದಿನ ಸ್ಥಿತಿಗೆ ಕಾರಣವನ್ನು ತಿಳಿಸುವಂಥ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ. ರಮೇಶ್ ಜಾರಕಿಹೊಳಿ ಅವರ ಜನ್ಮದಿನ 1-5-1960. ಆ ಪ್ರಕಾರ ಅವರದು ಮಿಥುನ ರಾಶಿ ಹಾಗೂ ವೃಷಭ ಲಗ್ನ ಆಗುತ್ತದೆ. ವೃಷಭ ಲಗ್ನದ ಪ್ರಕಾರ ಗುರು ಬಲ ಇದೆಯಾದರೂ ಮಿಥುನ ರಾಶಿಗೆ ಎಂಟನೇ ಮನೆಯಲ್ಲಿ ಗುರು- ಶನಿ ಸಂಚಾರ ಆಗುತ್ತಿದೆ. ಇನ್ನು ಕೇತು ಮಹರ್ದಶೆ ನಡೆಯುತ್ತಿದೆ. ವೃಷಭ ರಾಶಿಯಲ್ಲೇ ಕುಜ- ರಾಹು ಸಂಯೋಗ ಆಗಿದ್ದು, ಫೆಬ್ರವರಿ 22ರಿಂದ ಆ ರಾಶಿಗೆ ಕುಜ ಪ್ರವೇಶ ಆಗಿದೆ. ಏಪ್ರಿಲ್ 14ನೇ ತಾರೀಕಿನ ತನಕ ಇದೇ ರಾಶಿಯಲ್ಲಿ ಕುಜ- ರಾಹು ಸಂಯೋಗ ಇರುತ್ತದೆ.

ಈ ಹಿಂದೆ ಷಷ್ಟಗ್ರಹ ಕೂಟದ ಬಗ್ಗೆ ಭವಿಷ್ಯ ಹೇಳುವಾಗ, ಪ್ರಭಾವಿ ರಾಜಕಾರಣಿಯೊಬ್ಬರಿಗೆ ಕಂಟಕ ಇದೆ. ಇದರಿಂದ ಮುಖ್ಯಮಂತ್ರಿಗೆ ಸಂಕಟ ಎದುರಾಗುತ್ತದೆ ಎಂದು ಭವಿಷ್ಯ ನುಡಿದಿದ್ದೆವು. ಈಗಿನ ಬೆಳವಣಿಗೆಯು ಹಿಂದಿನ ಭವಿಷ್ಯಕ್ಕೆ ಪುಷ್ಟಿ ನೀಡುವಂತೆಯೇ ಇದೆ. ರಮೇಶ ಜಾರಕಿಹೊಳಿ ಅವರದು ಮಿಥುನ ರಾಶಿ. ಅವರ ರಾಶಿಯಿಂದ ಆರನೇ ಮನೆಯಲ್ಲಿ ಅಂದರೆ, ಶತ್ರು ಅಥವಾ ರಿಪು ಸ್ಥಾನದಲ್ಲಿ ಕೇತು ಗ್ರಹ ಸದ್ಯಕ್ಕೆ ಸಂಚಾರ ಆಗುತ್ತಿದೆ. ಪಾಪ ಸ್ಥಾನದಲ್ಲಿ ಪಾಪ ಗ್ರಹಗಳು ಉತ್ತಮ ಫಲಗಳು ನೀಡುತ್ತವೆ. ಇನ್ನು ವೃಷಭ ಲಗ್ನದಿಂದ ಏಳನೇ ಮನೆಯಾಗುವುದರಿಂದ ಸ್ನೇಹದಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಳ್ಳುತ್ತದೆ.

ರಮೇಶ ಜಾರಕಿಹೊಳಿ ಅವರಿಗೆ ತಾತ್ಕಾಲಿಕವಾಗಿ ಈ ಸಮಸ್ಯೆ ಆಗಲಿದೆ. ಏಪ್ರಿಲ್ 6ರ ನಂತರ ಗುರು ಗ್ರಹ ಕುಂಭ ರಾಶಿ ಪ್ರವೇಶಿಸಿದ ಮೇಲೆ ಹಾಗೂ ಕುಜ ಗ್ರಹ ಏಪ್ರಿಲ್ 14ರಂದು ವೃಷಭದಿಂದ ಮಿಥುನಕ್ಕೆ ಹೋದ ನಂತರ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಇನ್ನು ಕೇತು ದಶೆ ಮುಗಿದ ಮೇಲೆ ಶುಕ್ರ ದಶೆ ಶುರುವಾಗುತ್ತದೆ. ಅದು ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎಂಬುದನ್ನು ಕಾದುನೋಡಬೇಕು. ಆದರೆ ಸದ್ಯಕ್ಕಂತೂ ಬಹಳ ಕಷ್ಟದ ಸನ್ನಿವೇಶ ರಮೇಶ್ ಜಾರಕಿಹೊಳಿ ಅವರ ಪಾಲಿಗಿದೆ.

ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

ಇದನ್ನೂ ಓದಿ:  ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ; ಸಿಎಂ ಬಿ.ಎಸ್​.ಯಡಿಯೂರಪ್ಪಗೆ ಪತ್ರ ರವಾನೆ

Published On - 1:07 pm, Wed, 3 March 21