ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್..

ರಾಮನಗರ: ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್! ಗ್ರಾಮೀಣ ಭಾಗದಲ್ಲಿ ಕೆರೆ, ಕಲ್ಯಾಣಿ, ಕಾಲುದಾರಿ ವೀಕ್ಷಣೆ, ಸಿಬ್ಬಂದಿಗಳ ಕಾರ್ಯವೈಖರಿ. ಹೀಗೆ ಹತ್ತಾರು ಕಾಮಗಾರಿಗಳನ್ನು ಕುಳಿತ್ತಲ್ಲಿಯೇ ವೀಕ್ಷಿಸಲೂ ಸಹ ಈ ಡ್ರೋನ್ ಎಂಬ ಪಕ್ಷಿನೋಟ ಬಳಕೆಯಾಗುತ್ತಿದೆ. ಡ್ರೋನ್ ಹದ್ದಿನಕಣ್ಣು! ಹೌದು ಇಂತಹ ಆಧುನಿಕ ತಂತ್ರಜ್ಞಾನವನ್ನು ರಾಮನಗರ ಜಿಲ್ಲಾ ಪಂಚಾಯತಿ ಅಳವಡಿಸಿಕೊಂಡಿದೆ. ಮೊದಲ ಬಾರಿಗೆ ಸುಮಾರು 1.90 ಲಕ್ಷ ಮೌಲ್ಯದ ಡ್ರೋನ್ ಅನ್ನು ಜಿಲ್ಲಾ ಪಂಚಾಯತಿ ಖರೀದಿ ಮಾಡಿದೆ. ಈ ಮೂಲಕ ತಮ್ಮ ಇಲಾಖೆಗಳ ಮೇಲೆ ಡ್ರೋನ್ […]

ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್..
Follow us
ಸಾಧು ಶ್ರೀನಾಥ್​
|

Updated on:May 30, 2020 | 4:43 PM

ರಾಮನಗರ: ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್! ಗ್ರಾಮೀಣ ಭಾಗದಲ್ಲಿ ಕೆರೆ, ಕಲ್ಯಾಣಿ, ಕಾಲುದಾರಿ ವೀಕ್ಷಣೆ, ಸಿಬ್ಬಂದಿಗಳ ಕಾರ್ಯವೈಖರಿ. ಹೀಗೆ ಹತ್ತಾರು ಕಾಮಗಾರಿಗಳನ್ನು ಕುಳಿತ್ತಲ್ಲಿಯೇ ವೀಕ್ಷಿಸಲೂ ಸಹ ಈ ಡ್ರೋನ್ ಎಂಬ ಪಕ್ಷಿನೋಟ ಬಳಕೆಯಾಗುತ್ತಿದೆ.

ಡ್ರೋನ್ ಹದ್ದಿನಕಣ್ಣು! ಹೌದು ಇಂತಹ ಆಧುನಿಕ ತಂತ್ರಜ್ಞಾನವನ್ನು ರಾಮನಗರ ಜಿಲ್ಲಾ ಪಂಚಾಯತಿ ಅಳವಡಿಸಿಕೊಂಡಿದೆ. ಮೊದಲ ಬಾರಿಗೆ ಸುಮಾರು 1.90 ಲಕ್ಷ ಮೌಲ್ಯದ ಡ್ರೋನ್ ಅನ್ನು ಜಿಲ್ಲಾ ಪಂಚಾಯತಿ ಖರೀದಿ ಮಾಡಿದೆ. ಈ ಮೂಲಕ ತಮ್ಮ ಇಲಾಖೆಗಳ ಮೇಲೆ ಡ್ರೋನ್ ಕಣ್ಣಿಡಲು ಜಿಪಂ ಸಿಇಓ ಯೋಜನೆ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಂದರಂತೆ ಇನ್ನೂ ಮೂರು ಡ್ರೋನ್ ಖರೀದಿ ಮಾಡಲು ಮುಂದಾಗಿದೆ. ಅಂದಹಾಗೆ ಕುಳಿತಲ್ಲಿಯೇ ಡ್ರೋನ್ ಮೂಲಕ ನರೇಗಾ ಕಾಮಗಾರಿಗಳ ವೀಕ್ಷಿಸುವುದು, ರಸ್ತೆ ಬದಿ ಕಾಮಗಾರಿ, ಕಲ್ಯಾಣಿ, ಕೆರೆ-ಕುಂಟೆಗಳ ವೀಕ್ಷಣೆ ಮೂಲಕ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಡ್ರೋನ್ ಬಳಕೆ ಮಾಡಲಾಗುವುದು.

ಇದರೊಂದಿಗೆ ಏಕಾಏಕಿ ಗ್ರಾಪಂಗಳ ಮೇಲೆ ಡ್ರೋನ್ ಹಾರಿಸುವ ಮೂಲಕ ಗ್ರಾಪಂ ಸಿಬ್ಬಂದಿಯ ಕಾರ್ಯವೈಖರಿಯ ಪರಿಶೀಲನೆಗೂ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಡ್ರೋನ್ ನೀಡುವ ಮೂಲಕ ಆಯಾ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಯನ್ನು ಜಿಪಂ ಇಸಿಓ ಇಕ್ರಮ್ ಅವರು ಕುಳಿತಲ್ಲಿಯೇ ಪರಿಶೀಲನೆ ನಡೆಸಲಿದ್ದಾರೆ.

ಡ್ರೋನ್ ವಿಶೇಷ 1.90 ಲಕ್ಷ ಮೌಲ್ಯದ ಡ್ರೋನ್ ಇದಾಗಿದ್ದು, 120 ಡಿಗ್ರಿ ವರೆಗು ಕ್ಯಾಮಾರಾ ತಿರುಗಲಿದೆ. ಸುಮಾರು ಒಂದು ಸಾವಿರ ಅಡಿ ಎತ್ತರ ಹಾರಲಿರುವ ಡ್ರೋನ್ ಇದಾಗಿದ್ದು, 8 ಕಿ.ಮಿ ದೂರ ಸಂಚರಿಸಲಿದೆ.

ಆದರೆ, ಇದರ ಬ್ಯಾಟರಿ ಕೇವಲ 15 ನಿಮಿಷವಷ್ಟೆ ಬರಲಿದೆ. ಹೀಗಾಗಿ 5 ಬ್ಯಾಟರಿಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ 1 ಗಂಟೆಗಳ ಕಾಲ ಡ್ರೋನ್ ಹಾರಾಟ ನಡೆಸಲು ಸಿದ್ದಂತೆ ನಡೆಸಲಾಗಿದೆ.

Published On - 4:39 pm, Sat, 30 May 20

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್