AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್‌ ಕಸ್ಟಡಿಯಲ್ಲಿರುವ ‘ಟಗರು’ಗಳು ಮಾಡಿದ ಅಪರಾಧವಾದ್ರೂ ಏನು ಗೊತ್ತಾ?

ಹಾವೇರಿ: ರಾಜ್ಯದ್ಯಂತ ಇವತ್ತು ಲಾಕ್‌ಡೌನ್‌ ಇದೆ. ಆದ್ರೂ ನಮಗ್ಯಾರು ಹೇಳೋರು ಅಂತಾ ಭಂಡ ದೈರ್ಯದಲ್ಲಿ ಯುವಕರ ಗುಂಪೊಂದು ಟಗರಿನ ಕಾಳಗಕ್ಕೆ ಶುರುಮಾಡಿದೆ. ಪರಿಣಾಮ ಈ ಟಗರು ವೀರರನ್ನ ಪೊಲೀಸರು ಕಂಬಿ ಹಿಂದೆ, ಟಗರುಗಳನ್ನು ಪೊಲೀಸ್‌ ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ. ಹೌದು ಹಾವೇರಿ ಜಿಲ್ಲೆಯಲ್ಲಿ ಟಗರು ಕಾಳಗ, ಹೋರಿ ಹಾಯಿಸೋದು ಅಂದ್ರೆ ಭಾರೀ ಪಾಪುಲರ್‌. ಆದ್ರೆ ಅದಕ್ಕೆ ಸಮಯ ಸಂದರ್ಭ ಗೊತ್ತಿರಬೇಕಲ್ವಾ. ಇವತ್ತು ಎಲ್ಲೆಡೆ ಸಂಡೇ ಲಾಕ್‌ಡೌನ್‌ ಇದ್ರೂ ರಾಣೆಬೆನ್ನೂರು ತಾಲೂಕು ಹುಣಸೀಕಟ್ಟಿ ಗ್ರಾಮದ […]

ಪೊಲೀಸ್‌ ಕಸ್ಟಡಿಯಲ್ಲಿರುವ 'ಟಗರು'ಗಳು ಮಾಡಿದ ಅಪರಾಧವಾದ್ರೂ ಏನು ಗೊತ್ತಾ?
Guru
| Updated By: |

Updated on:Jul 27, 2020 | 8:56 PM

Share

ಹಾವೇರಿ: ರಾಜ್ಯದ್ಯಂತ ಇವತ್ತು ಲಾಕ್‌ಡೌನ್‌ ಇದೆ. ಆದ್ರೂ ನಮಗ್ಯಾರು ಹೇಳೋರು ಅಂತಾ ಭಂಡ ದೈರ್ಯದಲ್ಲಿ ಯುವಕರ ಗುಂಪೊಂದು ಟಗರಿನ ಕಾಳಗಕ್ಕೆ ಶುರುಮಾಡಿದೆ. ಪರಿಣಾಮ ಈ ಟಗರು ವೀರರನ್ನ ಪೊಲೀಸರು ಕಂಬಿ ಹಿಂದೆ, ಟಗರುಗಳನ್ನು ಪೊಲೀಸ್‌ ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ.

ಹೌದು ಹಾವೇರಿ ಜಿಲ್ಲೆಯಲ್ಲಿ ಟಗರು ಕಾಳಗ, ಹೋರಿ ಹಾಯಿಸೋದು ಅಂದ್ರೆ ಭಾರೀ ಪಾಪುಲರ್‌. ಆದ್ರೆ ಅದಕ್ಕೆ ಸಮಯ ಸಂದರ್ಭ ಗೊತ್ತಿರಬೇಕಲ್ವಾ. ಇವತ್ತು ಎಲ್ಲೆಡೆ ಸಂಡೇ ಲಾಕ್‌ಡೌನ್‌ ಇದ್ರೂ ರಾಣೆಬೆನ್ನೂರು ತಾಲೂಕು ಹುಣಸೀಕಟ್ಟಿ ಗ್ರಾಮದ ಕೆಲ ಯುವಕರು ಟಗರಿನ ಕಾಳಗ ನಡೆಸಲು ಶುರುಮಾಡಿದ್ದಾರೆ. ಇದ್ರಲ್ಲಿ ದಾವಣೆಗೆರೆ, ಹರಿಹರ ಮತ್ತು ಹಾವೇರಿಯಿಂದಲೂ ಬಂದ ಕೆಲ ಜನರು ಬಂದಿದ್ದಾರೆ.

ಆದ್ರೆ ಈ ವಿಷಯ ಅದೇಗೋ ಪೊಲೀಸರಿಗೆ ಮುಟ್ಟಿದೆ. ಅಷ್ಟೇ, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಟಗರಿನ ಕಾಳಗ ನಡೆಸ್ತಿದ್ದ ದಾವಣಗೆರೆ, ಹರಿಹರ ಮತ್ತು ಹಾವೇರಿ ಮೂಲದ ಎಂಟು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಎರಡು ಟಗರುಗಳನ್ನು ಕೂಡಾ ವಶಕ್ಕೆ ಪಡಿದಿದ್ದಾರೆ. ನಂತರ ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

Published On - 6:56 pm, Sun, 26 July 20