ತಡರಾತ್ರಿವರೆಗೆ ಓದುತ್ತಿದ್ದ SSLC ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಕಲಬುರಗಿ: SSLC ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ರಠಕಲ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಜೂನ್ 24ರ ರಾತ್ರಿ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೂನ್​ 24ರಂದು ತಡರಾತ್ರಿವರೆಗೆ ಓದುತ್ತಿದ್ದ ವಿದ್ಯಾರ್ಥಿನಿಯ ಬಾಯಿಮುಚ್ಚಿ ಸ್ಥಳೀಯ ಯುವಕನೊಬ್ಬ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದಿದ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆದರೆ, ಕಷ್ಟಪಟ್ಟು ತಪ್ಪಿಸಿಕೊಂಡ ಬಾಲಕಿ ಕೂಗಿಕೊಂಡಾಗ ಸ್ಥಳೀಯರು ಸ್ಥಳಕ್ಕೆ ಓಡಿಬಂದರು. ಇದನ್ನು ಗಮನಿಸಿ ಯುವಕ ಅಲ್ಲಿಂದ ಪರಾರಿಯಾಗಿದ್ದ. ಧೃತಿಗೆಡದ ಇಂದು ಪರೀಕ್ಷೆಗೆ ಹಾಜರಾಗಿರುವ ಬಾಲಕಿ ಯುವಕನು […]

ತಡರಾತ್ರಿವರೆಗೆ ಓದುತ್ತಿದ್ದ SSLC ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ
Edited By:

Updated on: Jun 27, 2020 | 10:23 AM

ಕಲಬುರಗಿ: SSLC ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ರಠಕಲ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಜೂನ್ 24ರ ರಾತ್ರಿ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜೂನ್​ 24ರಂದು ತಡರಾತ್ರಿವರೆಗೆ ಓದುತ್ತಿದ್ದ ವಿದ್ಯಾರ್ಥಿನಿಯ ಬಾಯಿಮುಚ್ಚಿ ಸ್ಥಳೀಯ ಯುವಕನೊಬ್ಬ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದಿದ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆದರೆ, ಕಷ್ಟಪಟ್ಟು ತಪ್ಪಿಸಿಕೊಂಡ ಬಾಲಕಿ ಕೂಗಿಕೊಂಡಾಗ ಸ್ಥಳೀಯರು ಸ್ಥಳಕ್ಕೆ ಓಡಿಬಂದರು. ಇದನ್ನು ಗಮನಿಸಿ ಯುವಕ ಅಲ್ಲಿಂದ ಪರಾರಿಯಾಗಿದ್ದ.

ಧೃತಿಗೆಡದ ಇಂದು ಪರೀಕ್ಷೆಗೆ ಹಾಜರಾಗಿರುವ ಬಾಲಕಿ
ಯುವಕನು ಇತ್ತೀಚೆಗೆ ಮುಂಬೈನಿಂದ ಹಿಂದಿರುಗಿದ್ದ. ಅಂದು ರಾತ್ರಿಯೇ ವಿದ್ಯಾರ್ಥಿನಿ ನೀಡಿದ ದೂರಿನ ಮೇಲೆ ನಿರಠಕಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಘಟನೆಯಿಂದ ಧೃತಿಗೆಡದ ಬಾಲಕಿ ಇಂದು ಪರೀಕ್ಷೆಗೆ ಹಾಜರಾಗಿದ್ದಾಳೆ.