ಬಾಗಲಕೋಟೆ ಜಮೀನಿನಲ್ಲಿ ದೀಢಿರನೆ ಪ್ರತ್ಯಕ್ಷವಾದ ಅಪರೂಪದ ನಕ್ಷತ್ರ ಆಮೆ

ನಕ್ಷತ್ರ ಆಮೆ ಒಂದು ಅಪರೂಪದ ಆಮೆ ಆಗಿದ್ದು, ರಚನೆ ಮತ್ತು ಆಕಾರ ನಕ್ಷತ್ರದಂತೆ ಇರುತ್ತದೆ. ಇದು ಆಮೆ ಸಂತತಿಯ ಮೊದಲ ಮೂಲ ಪೀಳಿಗೆಯಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳಿತಾಗುತ್ತದೆ ಎನ್ನುವ ಕಲ್ಪನೆಯೂ ಕೂಡ ಇದೆ.

ಬಾಗಲಕೋಟೆ ಜಮೀನಿನಲ್ಲಿ ದೀಢಿರನೆ ಪ್ರತ್ಯಕ್ಷವಾದ ಅಪರೂಪದ ನಕ್ಷತ್ರ ಆಮೆ
ನಕ್ಷತ್ರ ಆಮೆ
preethi shettigar

|

Dec 14, 2020 | 10:15 AM

ಬಾಗಲಕೋಟೆ: ಅವಸಾನದ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯೊಂದು ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಜಮೀನೊಂದರಲ್ಲಿ ಪತ್ತೆ ಆಗಿದೆ. ಬಯಲು ಸೀಮೆಯಲ್ಲಿ ಈ ಆಮೆ ಕಂಡು ಬರುತ್ತದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಇದು ಅಳಿವಿನಂಚಿನಲ್ಲಿದೆ ಎಂದು ಹೇಳಲಾಗುತ್ತಿದೆ.

ಕೆರೂರ ಪಟ್ಟಣದ ಬಳಿ ಸಹಾಯಕ ಕೃಷಿ ಅಧಿಕಾರಿ ಶಂಕರ ನಾಯಕ್ ಅವರ ಜಮೀನಿನಲ್ಲಿ ಈ ಅಪರೂಪದ ಆಮೆ ಕಂಡುಬಂದಿದ್ದು, ಶಂಕರ ನಾಯಕ್‌ ಅವರು ನಕ್ಷತ್ರ ಆಮೆಯನ್ನು ಬಾದಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಬಾದಾಮಿ ವಲಯ ಅರಣ್ಯ ಅಧಿಕಾರಿ ಪಿ.ಎಸ್. ಖೇಡಗಿ ಹಾಗೂ ಸಿಬ್ಬಂದಿ ಆಮೆಯ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಈ ಆಮೆಯನ್ನು ಕಾಡಿಗೆ ಹೋಗಿ ಬಿಟ್ಟು ಬಂದಿದ್ದಾರೆ.

ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ

ಇಂಡಿಯನ್ ಸ್ಟಾರ್ ಟಾರ್ಟೈಸ್ ಅಳಿವಿನಂಚಿನಲ್ಲಿದ್ದು, ಇದು ನೋಡಲು ಕಲ್ಲಿನಂತೆ ಕಾಣುತ್ತದೆ. ಕಲ್ಲುಗಳ ಮಧ್ಯದಲ್ಲಿ ಈ ನಕ್ಷತ್ರದ ಆಮೆ ಇದ್ದರೆ ಇದನ್ನು ಗುರುತಿಸುವುದು ಬಹಳ ಕಷ್ಟ. ಕೆರೂರ ಭಾಗದಲ್ಲಿ ಇದೀಗ ಆಮೆ ಪತ್ತೆಯಾಗಿದ್ದರಿಂದ ಈ ಭಾಗದ ಅರಣ್ಯ ಪ್ರದೇಶದಲ್ಲಿ ಇದರ ಸಂತತಿ ಇರಬಹುದು ಎಂದು ಊಹಿಸಲಾಗಿದೆ.

ನಕ್ಷತ್ರ ಆಮೆ ಒಂದು ಅಪರೂಪದ ಆಮೆ ಆಗಿದ್ದು, ರಚನೆ ಮತ್ತು ಆಕಾರ ನಕ್ಷತ್ರದಂತೆ ಇರುತ್ತದೆ. ಇದು ಆಮೆ ಸಂತತಿಯ ಮೊದಲ ಮೂಲ ಪೀಳಿಗೆಯಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳಿತಾಗುತ್ತದೆ ಎನ್ನುವ ಕಲ್ಪನೆಯೂ ಕೂಡ ಇದ್ದು, ಇದು ಅದೃಷ್ಟದ ಸಂಕೇತ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಇದಕ್ಕೆ  ಲಕ್ಷಗಟ್ಟಲೆ ಹಣ ಕೊಟ್ಟು ಖರೀಧಿಸಲು ಜನ ಮುಂದಾಗುತ್ತಾರೆ ಎಂದು ತಿಳಿದು ಬಂದಿದೆ.

ಈ ಆಮೆ ಸೇವಿಸುವುದರಿಂದ, ತೈಲ ತೆಗೆದು ಕುಡಿಯುವುದರಿಂದ ಬಾರಿ ಪ್ರಮಾಣದ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ನಿಶಕ್ತಿ ಇದ್ದವರು ಇದನ್ನು ಸೇವಿಸಿದರೆ ಸದೃಢರಾಗುತ್ತಾರೆ ಎಂಬ ನಂಬಿಕೆ  ಇದೆ. ಆ ಕಾರಣಕ್ಕೆ ಒಂದು ನಕ್ಷತ್ರ ಆಮೆಗೆ 2 ಲಕ್ಷದವರೆಗೂ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಕ್ಷತ್ರ ಆಮೆ ಸಸ್ಯಾಹಾರಿಯಾಗಿದ್ದು ರೇಷ್ಮೆ ತೊಪ್ಪಲು, ದಾಸವಾಳ ಎಲೆ, ತರಕಾರಿ ಪದಾರ್ಥ ಮಾತ್ರ ಸೇವಿಸುತ್ತದೆ. ಒಟ್ಟಿನಲ್ಲಿ ಅಪರೂಪದ ಅವಸಾನದ ಅಂಚಿನಲ್ಲಿರುವ ನಕ್ಷತ್ರ ಆಮೆ ಈಗ ದಿಢೀರ್ ಪತ್ತೆಯಾಗುವ ಮೂಲಕ ತಾನು ಇನ್ನು ಅಸ್ತಿತ್ವದಲ್ಲಿದ್ದೇನೆ ಎಂದು ತೋರಿಸಿಕೊಟ್ಟಿದೆ.

-ರವಿ ಮೂಖಿ

ಕಂದು ಮೀನು ಗೂಬೆ, ನಕ್ಷತ್ರ ಆಮೆ ಮಾರಲು ಯತ್ನಿಸಿದ ಕಿರಾತಕರು ಅಂದರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada