ಎಚ್​ಡಿಎಫ್​ಸಿ ಬ್ಯಾಂಕ್​ನ ಹೊಸ ಡಿಜಿಟಲ್ ಕೊಡುಗೆಗಳು, ಕ್ರೆಡಿಟ್​ ಕಾರ್ಡ್​ ಗ್ರಾಹಕರ ನೋಂದಣಿಗೆ ಆರ್​ಬಿಐ ನಿರ್ಬಂಧ

|

Updated on: Dec 03, 2020 | 12:51 PM

ಎಚ್​ಡಿಎಫ್​ಸಿ ಬ್ಯಾಂಕ್​ನ ಹೊಸ ಡಿಜಿಟಲ್ ಕೊಡುಗೆಗಳು ಮತ್ತು ಹೊಸದಾಗಿ ಕ್ರೆಡಿಟ್​ ಕಾರ್ಡ್​ ಗ್ರಾಹಕರ ನೋಂದಣಿಗೆ ಆರ್​ಬಿಐ ನಿರ್ಬಂಧ ವಿಧಿಸಿದೆ. ಕಳೆದ ಎರಡು ವರ್ಷಗಳಿಂದ ಬ್ಯಾಂಕ್​ನ ಗ್ರಾಹಕರು ದೂರುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಆರ್​ಬಿಐ ಗಂಭೀರವಾಗಿ ಪರಿಗಣಿಸಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ನ ಹೊಸ ಡಿಜಿಟಲ್ ಕೊಡುಗೆಗಳು, ಕ್ರೆಡಿಟ್​ ಕಾರ್ಡ್​ ಗ್ರಾಹಕರ ನೋಂದಣಿಗೆ ಆರ್​ಬಿಐ ನಿರ್ಬಂಧ
ಎಚ್​ಡಿಎಫ್​ಸಿ ಬ್ಯಾಂಕ್ (ಸಂಗ್ರಹ ಚಿತ್ರ)
Follow us on

ಮುಂಬೈ: ಎಚ್​ಡಿಎಫ್​ಸಿ ಬ್ಯಾಂಕ್​ನ ಹೊಸ ಡಿಜಿಟಲ್ ಕೊಡುಗೆಗಳು ಮತ್ತು ಹೊಸದಾಗಿ ಕ್ರೆಡಿಟ್​ ಕಾರ್ಡ್​ ಗ್ರಾಹಕರ ನೋಂದಣಿಗೆ ಆರ್​ಬಿಐ ನಿರ್ಬಂಧ ವಿಧಿಸಿದೆ. ಕಳೆದ ಎರಡು ವರ್ಷಗಳಿಂದ ಬ್ಯಾಂಕ್​ನ ಗ್ರಾಹಕರು ದೂರುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಆರ್​ಬಿಐ ಗಂಭೀರವಾಗಿ ಪರಿಗಣಿಸಿದೆ.

‘ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಪೇಮೆಂಟ್​ ಸೇವೆಗಳಲ್ಲಿ ಕಳೆದ 2 ವರ್ಷಗಳಲ್ಲಿ ಹಲವು ಬಾರಿ ತೊಂದರೆ ಕಾಣಿಸಿಕೊಂಡಿತ್ತು. ಇತ್ತೀಚೆಗೆ, ಅಂದರೆ ನವೆಂಬರ್​ 21ರಂದು ಸಹ ಎಚ್​ಡಿಎಫ್​ಸಿ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಪೇಮೆಂಟ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆರ್​ಬಿಐ ಇಂಟರ್ನೆಟ್​ ಬ್ಯಾಂಕಿಂಗ್​ನ ಹೊಸ ಕೊಡುಗೆಗಳು​ ಮತ್ತು ಕ್ರೆಡಿಟ್​ ಕಾರ್ಡ್​ ವಿತರಣೆಗೆ ಕೆಲ ನಿರ್ಬಂಧಗಳನ್ನು ವಿಧಿಸಿದೆ’ ಎಂದು ಷೇರು ಮಾರುಕಟ್ಟೆ ನಿಯಂತ್ರಕರಿಗೆ ನೀಡಿರುವ ಮಾಹಿತಿಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​ ತಿಳಿಸಿದೆ.

ಆರ್​ಬಿಐ ರೂಪಿಸಿರುವ ನಿಗಾ ವ್ಯವಸ್ಥೆಯಿಂದ ಹಾಲಿ ಕ್ರೆಡಿಟ್​ ಕಾರ್ಡ್ ಹೊಂದಿರುವ ಮತ್ತು ಡಿಜಿಟಲ್​ ಮಾಧ್ಯಮಗಳ ಮೂಲಕ ವ್ಯವಹರಿಸತ್ತಿರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ವ್ಯವಸ್ಥೆ ಸರಿಯಾಗಿದೆ ಎಂದು ಮನವರಿಕೆಯಾದ ನಂತರ ಆರ್​ಬಿಐ ನಿರ್ಬಂಧಗಳನ್ನು ತೆರವುಗೊಳಿಸಲಿದೆ. ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ಕಂಡುಕೊಂಡು ತಕ್ಷಣ ಸರಿಪಡಿಸುವಂತೆ ಎಚ್​ಡಿಎಫ್​ಸಿ ಆಡಳಿತ ಮಂಡಳಿಗೆ ಆರ್​ಬಿಐ ಸೂಚಿಸಿದೆ ಎಂದು ಬ್ಯಾಂಕ್​ ಸ್ಪಷ್ಟಪಡಿಸಿದೆ.

ವಿದ್ಯುತ್​ ವ್ಯತ್ಯಯದಿಂದಾಗಿ ನ.21ರಂದು ಮುಂಬೈನಲ್ಲಿರುವ ಬ್ಯಾಂಕ್​ನ ಪ್ರಮುಖ ದತ್ತಾಂಶ ಕೇಂದ್ರದ ಸೇವೆಯಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಎಟಿಎಂ, ಕಾರ್ಡ್​ಗಳು, ಇಂಟರ್ನೆಟ್​ ಬ್ಯಾಂಕಿಂಗ್, ಯುಪಿಐ ಮತ್ತು ಐಎಂಪಿಎಸ್​ ಸೇವೆಗಳು ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಸಾವಿರಾರು ಗ್ರಾಹಕರು ಟ್ವಿಟರ್​ನಲ್ಲಿ ತಮಗೆ ಆಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು.

ಈ ಹಿಂದೆಯೂ ಎಚ್​ಡಿಎಫ್​ಸಿ ಡಿಜಿಟಲ್ ಸೇವೆಗಳಲ್ಲಿ ವ್ಯತ್ಯಯಗಳು ಉಂಟಾಗಿದ್ದವು. ಎಚ್​ಡಿಎಫ್​ಸಿ ಗ್ರಾಹಕರಿಗೆ ಆಗಾಗ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಆರ್​ಬಿಐ ಇದೀಗ ನಿರ್ಬಂಧದ ಬಿಸಿ ಮುಟ್ಟಿಸಿದೆ.

ಯಾವುದಕ್ಕೆ ನಿರ್ಬಂಧ
ಡಿಜಿಟಲ್ 2.0 ಯೋಜನೆಯಡಿ ಹೊಸದಾಗಿ ವ್ಯಾಪಾರ ವೃದ್ಧಿ ಚಟುವಟಿಕೆಗಳು
ಪ್ರಸ್ತಾವಿತ ವ್ಯಾಪಾರ ವೃದ್ಧಿಗಾಗಿನ ಮಾಹಿತಿ ತಂತ್ರಜ್ಞಾನ (ಐಟಿ) ಉಪಕ್ರಮ
ಹೊಸ ಕ್ರೆಡಿಟ್ ಕಾರ್ಡ್​ ಗ್ರಾಹಕರ ನೋಂದಣಿ

Published On - 12:18 pm, Thu, 3 December 20