RBI Grade B 2021 Result: ಆರ್​ಬಿಐ ಗ್ರೇಡ್ ಬಿ ಪರೀಕ್ಷಾ ಫಲಿತಾಂಶ ಪ್ರಕಟ; ವಿವರಗಳು ಇಲ್ಲಿದೆ

| Updated By: ganapathi bhat

Updated on: Apr 06, 2022 | 7:12 PM

RBI Grade-B Phase 2 (ಎರಡನೇ ಹಂತ) ಪರೀಕ್ಷೆಯು ಏಪ್ರಿಲ್ 1, 2021ರಂದು ನಡೆಯಲಿದೆ. DEPR ಮತ್ತು DSIM-2021ಗೆ ಮಾರ್ಚ್ 31, 2021ರಂದು ಪರೀಕ್ಷೆಗಳು ನಡೆಯಲಿವೆ.

RBI Grade B 2021 Result: ಆರ್​ಬಿಐ ಗ್ರೇಡ್ ಬಿ ಪರೀಕ್ಷಾ ಫಲಿತಾಂಶ ಪ್ರಕಟ; ವಿವರಗಳು ಇಲ್ಲಿದೆ
ಆರ್​ಬಿಐ ಪರೀಕ್ಷಾ ಫಲಿತಾಂಶ ಪ್ರಕಟ
Follow us on

RBI Grade-B Phase 1 results 2021: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು (ಮಾರ್ಚ್ 13) RBI Grade-B Phase 1 ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನ ಅಧಿಕೃತ ವೆಬ್​ಸೈಟನ್​ನಲ್ಲಿ ಫಲಿತಾಂಶ ಲಭ್ಯವಿದ್ದು, ಅಭ್ಯರ್ಥಿಗಳು ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. RBI Grade-B Phase 1 ನೇಮಕಾತಿ ಪರೀಕ್ಷೆ 2021ರಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶ ನೋಡಲು rbi.org.inಗೆ ಭೇಟಿ ನೀಡಬಹುದು. ಆನ್​ಲೈನ್ ಮೂಲಕವೇ ಫಲಿತಾಂಶ ಪಡೆದುಕೊಳ್ಳಬಹುದು.

RBI Grade-B Phase 2 (ಎರಡನೇ ಹಂತ) ಪರೀಕ್ಷೆಯು ಏಪ್ರಿಲ್ 1, 2021ರಂದು ನಡೆಯಲಿದೆ. DEPR ಮತ್ತು DSIM-2021ಗೆ ಮಾರ್ಚ್ 31, 2021ರಂದು ಪರೀಕ್ಷೆಗಳು ನಡೆಯಲಿವೆ. ಶಾರ್ಟ್​ಲಿಸ್ಟ್​ ಆಗಿರುವ ಎಲ್ಲಾ ಅಭ್ಯರ್ಥಿಗಳು ಕೆಳಗೆ ಪಟ್ಟಿ ಮಾಡಿರುವ ದಾಖಲಾತಿಗಳನ್ನು ಮಾರ್ಚ್ 22, 2021ರ ಒಳಗಾಗಿ ಸಲ್ಲಿಸಬೇಕಾಗಿದೆ. RBISBಯ ಇಮೈಲ್ ವಿಳಾಸ documentsrbisb@rbi.org.in ಗೆ ಈ ಕೆಳಗಿನ ದಾಖಲೆಗಳನ್ನು ನೀಡಬೇಕು.

  • ಬಯೋ ಡೇಟಾ
  • ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ದಿನಾಂಕದ ಪುರಾವೆಗಾಗಿ ಸೂಕ್ತ ದಾಖಲೆ
  • ಶೈಕ್ಷಣಿಕ ಅರ್ಹತೆಗಳ ಪ್ರಮಾಣ ಪತ್ರ
  • ಎಸ್​ಸಿ/ಎಸ್​ಟಿ/ಒಬಿಸಿ/ಇಡಬ್ಲ್ಯುಎಸ್/ಪಿಡಬ್ಲ್ಯುಡಿ ಅಭ್ಯರ್ಥಿಗಳು ತಮ್ಮ ಜಾತಿ/ಆದಾಯ/ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡಬೇಕು

RBI Grade-B Phase 1 2021 ಫಲಿತಾಂಶ ಪರಿಶೀಲಿಸುವುದು ಹೇಗೆ?

  • ಮೊದಲು ಅಧಿಕೃತ ವೆಬ್​ಸೈಟ್, opportunities.rbi.org.in ಗೆ ಭೇಟಿ ನೀಡಿ
  • ಅದರ ಮುಖ್ಯಪುಟದಲ್ಲಿ Current Vacancies, Results ಎಂದು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
  • Result of Phase-1/Paper-1 examination for Recruitment of Officers in Grade B – DR (General), DEPR/DSIM – 2021 ಎಂದು ಇರುವ ಲಿಂಕ್ ಒತ್ತಿರಿ
  • ಹೊಸ ಪುಟವು ತೆರೆದುಕೊಳ್ಳುತ್ತದೆ
  • ಫಲಿತಾಂಶ ನೋಡುವ ಲಿಂಕ್ ಮೇಲೆ ಕ್ಲಿಕ್ ಮಾಡಿ
  • RBI Grade-B Phase-1 results 2021 ಫಲಿತಾಂಶವು ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ಸಿಗುತ್ತದೆ. ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬಹುದು
  • ಫಲಿತಾಂಶವನ್ನು ಡೌನ್​ಲೋಡ್ ಮಾಡಿ, ಪ್ರಿಂಟ್ ತೆಗೆದಿಟ್ಟುಕೊಳ್ಳಬಹುದು

ಇದನ್ನೂ ಓದಿ: GATE 2021 Result Date: ಗೇಟ್ ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟ; ಹೆಚ್ಚಿನ ವಿವರಗಳು ಇಲ್ಲಿವೆ

ತನ್ನ ಬದಲು ಬೇರೆಯೊಬ್ಬನನ್ನು ಪರೀಕ್ಷೆ ಬರೆಯಲು ಕಳಸಿದ ‘ಮನೋಹರ್ ಭಾಯಿ ಎಮ್​ಬಿಬಿಎಸ್’ ಪೊಲೀಸರಿಗೆ ಸಿಕ್ಕಿಬಿದ್ದ!

Published On - 10:03 pm, Sat, 13 March 21