AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​ ಸಾಕಾಗಿದೆ.. ನನಗೆ ಮನೆಯಿಂದ ಹೊರಬರಬೇಕು ಅನಿಸ್ತಾ ಇದೆ’

ನನಗೆ ಶೋನಿಂದ ಹೊರ ಬರೋ ಆಲೋಚನೆ ಬರುತ್ತಿದೆ. ಇದು ಸರಿಯಲ್ಲ. ನನಗೆ ಲೋನ್ಲಿ ಫೀಲ್​ ಆಗ್ತಿದೆ ಎಂದು ರಘು ಬೇಸರ ಹೊರ ಹಾಕಿದ್ದಾರೆ.

'ಬಿಗ್​ ಬಾಸ್​ ಸಾಕಾಗಿದೆ.. ನನಗೆ ಮನೆಯಿಂದ ಹೊರಬರಬೇಕು ಅನಿಸ್ತಾ ಇದೆ'
ರಘು ಗೌಡ - ಬಿಗ್​ ಬಾಸ್
ರಾಜೇಶ್ ದುಗ್ಗುಮನೆ
|

Updated on:Mar 13, 2021 | 10:04 PM

Share

ಸೋಶಿಯಲ್​ ಮೀಡಿಯಾದಲ್ಲಿ ಖ್ಯಾತಿ ಪಡೆದು, ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವ ಅವಕಾಶ ಗಿಟ್ಟಿಸಿಕೊಂಡ ರಘು ಮೇಲೆ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ, ಅವರು ಅಂದುಕೊಂಡ ಮಟ್ಟಕ್ಕೆ ಆಟ ಆಡುತ್ತಿಲ್ಲ. ಈಗ ಅವರು ಬಿಗ್​ ಬಾಸ್​ ಮನೆಯಿಂದ ಹೊರಬರಬೇಕು ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ! ಈ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡಿದ್ದಾರೆ ರಘು. ನಾನು ಯಾಕೋ ಒಂದು ರೀತಿ ಡಿಸ್ಟರ್ಬ್​ ಆಗ್ತಾ ಇದೀನಿ. ನನಗೆ ಇಲ್ಲಿ ಹಿಂಸೆ ಅನಸ್ತಾ ಇದೆ. ನನಗೆ ನಾನೇ ಮಾತಾಡಿಕೊಂಡು ಇದೆಲ್ಲದರಿಂದ ಹೊರಗೆ ಬರುವ ಪ್ರಯತ್ನ ಮಾಡುತ್ತಾ ಇದೀನಿ. ನನ್ನ ವಿರುದ್ಧ ನಾನೇ ಹೋರಾಡುತ್ತಾ ಇದೀನಿ ಎಂದಿದ್ದಾರೆ ಅವರು.

ನನಗೆ ಶೋನಿಂದ ಹೊರ ಬರೋ ಆಲೋಚನೆ ಬರುತ್ತಿದೆ. ಇದು ಸರಿಯಲ್ಲ. ನನಗೆ ಲೋನ್ಲಿ ಫೀಲ್​ ಆಗ್ತಿದೆ. ಫ್ಯಾಮಿಲಿ ಮಿಸ್​ ಮಾಡಿಕೊಳ್ಳುತ್ತಾ ಇದೀನಿ. ದೊಡ್ಡ ಶೋಗೆ ಬಂದಿದೀನಿ. ಅವಕಾಶ ಮಿಸ್​ ಮಾಡಿಕೊಳ್ಳಬಾರದೂ ಅನ್ನಿಸುತ್ತಿದೆ ಎಂದಿದ್ದಾರೆ ರಘು.

ಸಿಕ್ಕಾಪಟ್ಟೆ ದೈಹಿಕ ಸಾಮರ್ಥ್ಯ ಬೇಡುವ ಟಾಸ್ಕ್​ಗಳನ್ನು ಈಗ ಬಿಗ್​ ಬಾಸ್​ ನೀಡುತ್ತಿದ್ದಾರೆ. ಅದು ರಘು ಆತಂಕಕ್ಕೆ ಕಾರಣ ಆಗಿತ್ತು. ಇತ್ತೀಚೆಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ನಲ್ಲಿ ಅದು ರಘು ಗಮನಕ್ಕೆ ಬಂದಿತ್ತು. ಟಾಸ್ಕ್​ ನಡುವಿನ ಬಿಡುವಿನಲ್ಲಿ ತಮ್ಮ ದೌರ್ಬಲ್ಯದ ಬಗ್ಗೆ ಹಿರಿಯ ನಟ ಶಂಕರ್​ ಅಶ್ವತ್​ ಬಳಿ ರಘು ಬಾಯಿ ಬಿಟ್ಟಿದ್ದರು.

‘ಇಲ್ಲಿ ನನಗೊಂದು ಸಮಸ್ಯೆ ಆಗುತ್ತಿದೆ. ನಾನು ದೈಹಿಕವಾಗಿ ಅಷ್ಟೊಂದು ಫಿಟ್​ ಆಗಿಲ್ಲ. ಜೀವನದಲ್ಲಿ ಯಾವುದೇ ಫಿಜಿಕಲ್​ ಚಟುವಟಿಕೆಗಳೇ ಇಲ್ಲ. ಎಲ್ಲರೂ ನನ್ನನ್ನು ವೀಕ್​ ಅಂದುಕೊಳ್ಳುತ್ತಾರೆ. ಯಾರಾದರೂ ಬಂದು ನೀನು ಟಾಸ್ಕ್​ನಲ್ಲಿ ವೀಕ್​ ಎಂದರೆ ಬೇಜಾರಾಗುತ್ತದೆ’ ಎಂದು ಮುಖ ಬಾಡಿಸಿಕೊಂಡು ಮಾತನಾಡಿದ್ದರು ರಘು.

ವೀಕೆಂಡ್​ನಲ್ಲಿ ಸುದೀಪ್​ ಕೂಡ ಈ ವಿಚಾರ ಚರ್ಚೆ ಮಾಡಿದ್ದಾರೆ. ರಘು ಅವರೇ ನೀವು ಮನೆಯಿಂದ ಹೊರಬರಬೇಕು ಎಂದರೆ ನಾನು ಗೇಟ್​ ಓಪನ್​ ಮಾಡಿಸಿಕೊಡ್ತೇನೆ. ನೀವು ಮನೆಯಿಂದ ಹೊರಗೆ ಬರಲ್ಲ ಅಂತಾದ್ರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ರಘು, ನಾನು ಲೂಸರ್​ ಎನಿಸಿಕೊಳ್ಳಲ ಎಂದಿದ್ದಾರೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

Published On - 9:45 pm, Sat, 13 March 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ