ಲಾಕ್​ಡೌನ್​ ನಡುವೆಯೂ ಜಾತ್ರೆಗೆ ಸಿದ್ಧತೆ, ಬೋರ್ ವೆಲ್ ಮಂಜನಿಗಾಗಿ ಪೊಲೀಸ್ ಹುಡುಕಾಟ

| Updated By:

Updated on: Jul 26, 2020 | 3:58 PM

ಬೆಂಗಳೂರು: ಕಮಲ ನಗರದಲ್ಲಿ ಲಾಕ್​​ಡೌನ್​ ಉಲ್ಲಂಘಿಸಿ ಮಾರಮ್ಮ ಜಾತ್ರೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ರಾತ್ರಿಯಿಡಿ ದೇವಸ್ಥಾನದ ಮುಂದೆ ಪೊಲೀಸರು ಜಮಾವಣೆಗೊಂಡಿದ್ದಾರೆ. ಸಚಿವ ಗೋಪಾಲಯ್ಯ, ಸ್ಥಳೀಯ ಶಾಸಕ ಜಾತ್ರೆ ಮಾಡುವುದು ಬೇಡ ಎಂದಿದ್ದರು. ಆದರೆ ಸಚಿವರ ಮಾತನ್ನು ದಿಕ್ಕರಿಸಿ ಜಾತ್ರೆ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ಮಂಜ ಅಲಿಯಾಸ್​ ಬೋರ್ ವೆಲ್ ಮಂಜ ಜಾತ್ರೆ ಮಾಡೇ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಪೊಲೀಸರ ವಿರೋಧದ‌ ನಡುವೆಯೂ ಸ್ಥಳೀಯರು ಜಾತ್ರೆಗೆ ತಯಾರಿ ಮಾಡಿಕೊಂಡಿದ್ದಾರೆ. ಕರಗ ಮತ್ತು ಕೋಳಿ ಬಲಿ ಕೊಡುವ […]

ಲಾಕ್​ಡೌನ್​ ನಡುವೆಯೂ ಜಾತ್ರೆಗೆ ಸಿದ್ಧತೆ,  ಬೋರ್ ವೆಲ್ ಮಂಜನಿಗಾಗಿ ಪೊಲೀಸ್ ಹುಡುಕಾಟ
Follow us on

ಬೆಂಗಳೂರು: ಕಮಲ ನಗರದಲ್ಲಿ ಲಾಕ್​​ಡೌನ್​ ಉಲ್ಲಂಘಿಸಿ ಮಾರಮ್ಮ ಜಾತ್ರೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ರಾತ್ರಿಯಿಡಿ ದೇವಸ್ಥಾನದ ಮುಂದೆ ಪೊಲೀಸರು ಜಮಾವಣೆಗೊಂಡಿದ್ದಾರೆ.

ಸಚಿವ ಗೋಪಾಲಯ್ಯ, ಸ್ಥಳೀಯ ಶಾಸಕ ಜಾತ್ರೆ ಮಾಡುವುದು ಬೇಡ ಎಂದಿದ್ದರು. ಆದರೆ ಸಚಿವರ ಮಾತನ್ನು ದಿಕ್ಕರಿಸಿ ಜಾತ್ರೆ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ಮಂಜ ಅಲಿಯಾಸ್​ ಬೋರ್ ವೆಲ್ ಮಂಜ ಜಾತ್ರೆ ಮಾಡೇ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ.

ಪೊಲೀಸರ ವಿರೋಧದ‌ ನಡುವೆಯೂ ಸ್ಥಳೀಯರು ಜಾತ್ರೆಗೆ ತಯಾರಿ ಮಾಡಿಕೊಂಡಿದ್ದಾರೆ. ಕರಗ ಮತ್ತು ಕೋಳಿ ಬಲಿ ಕೊಡುವ ಪದ್ದತಿ ಇರುವ ಮಾರಮ್ಮ ದೇವಾಲಯದ ಮುಂದೆ ಕಂಬ ನೆಟ್ಟು ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ಸದ್ಯ ಈಗ ಮಂಜನಿಗಾಗಿ ಬಸವೇಶ್ವರನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Published On - 9:26 am, Sun, 26 July 20