3 ದಿನಗಳಿಂದ 3 ಪ್ರಮುಖ ದೇಗುಲಗಳಲ್ಲಿ ಕಳ್ಳತನ.. ಎಲ್ಲಿ?

3 ದಿನಗಳಿಂದ 3 ಪ್ರಮುಖ ದೇಗುಲಗಳಲ್ಲಿ ಕಳ್ಳತನ.. ಎಲ್ಲಿ?

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕು ಭೀತಿ ನಡುವೆಯೇ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ 3 ದಿನಗಳಿಂದ ಮೂರು ಪ್ರಮುಖ ದೇಗುಲಗಳನ್ನು ಕಳ್ಳರು ದೋಚಿದ್ದಾರೆ. ಕೆ.ಆರ್​.ನಗರದ ಅರ್ಕೆಶ್ವರಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇಗುಲದ ಲಿಂಗದ ಮೇಲಿನ ತಾಮ್ರದ 1 ಧಾರಾ ಪಾತ್ರೆ, ಮಿನಾಕ್ಷಮ್ಮ ದೇವರ 1.5 ಅಡಿ ಎತ್ತರದ ತ್ರಿಶೂಲ ಮತ್ತು ಬೆಳ್ಳಿಯ ವಸ್ತು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ […]

Ayesha Banu

| Edited By:

Jul 26, 2020 | 4:03 PM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕು ಭೀತಿ ನಡುವೆಯೇ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ 3 ದಿನಗಳಿಂದ ಮೂರು ಪ್ರಮುಖ ದೇಗುಲಗಳನ್ನು ಕಳ್ಳರು ದೋಚಿದ್ದಾರೆ.

ಕೆ.ಆರ್​.ನಗರದ ಅರ್ಕೆಶ್ವರಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇಗುಲದ ಲಿಂಗದ ಮೇಲಿನ ತಾಮ್ರದ 1 ಧಾರಾ ಪಾತ್ರೆ, ಮಿನಾಕ್ಷಮ್ಮ ದೇವರ 1.5 ಅಡಿ ಎತ್ತರದ ತ್ರಿಶೂಲ ಮತ್ತು ಬೆಳ್ಳಿಯ ವಸ್ತು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ 3 ದಿನದಲ್ಲಿ ಮೂರು ಪ್ರಮುಖ ದೇಗುಲಗಳಲ್ಲಿ ಕಳ್ಳತನ ನಡೆದಿದೆ. ಇತ್ತೀಚೆಗೆ ಚುಂಚನಕಟ್ಟೆ ಶ್ರೀರಾಮ ದೇಗುಲದಲ್ಲಿ ಕಳ್ಳತನ ನಡೆದಿತ್ತು. ಭೇರ್ಯದ ದೊಡ್ಡಮ್ಮ ಕರಿಯಮ್ಮ ದೇಗುಲದಲ್ಲೂ ಖದೀಮರು ತಮ್ಮ ಕೈಚಳಕ ತೋರಿಸಿದ್ದರು. ಸದ್ಯ ಕಳ್ಳತ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada