ವಾಯವ್ಯ ಸಾರಿಗೆಯಿಂದ ಬಾರದ ಹಣ: ಬೇಸತ್ತ ನಿವೃತ್ತ ಚಾಲಕ ಆತ್ಮಹತ್ಯೆ

|

Updated on: Sep 02, 2020 | 11:22 AM

ಹಾವೇರಿ:ಇಲಾಖೆಯಿಂದ ಬರಬೇಕಾದ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದೇದ್ದಕ್ಕೆ ಬೇಸತ್ತು, ವಾಯವ್ಯ ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಾವೇರಿ ನಗರದ ಹೊರವಲಯದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆ ಡಿಪೋ ಬಳಿ ಈ ಘಟನೆ ಸಂಭವಿಸಿದ್ದು, ಶಿವಪ್ರಕಾಶ ಹೂಗಾರ (62) ನೇಣಿಗೆ ಶರಣಾದ ನಿವೃತ್ತ ನೌಕರ. ಹಾವೇರಿ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಡ್ರೈವರ್ ಕೆಲಸ ಮಾಡಿ ಶಿವಪ್ರಕಾಶ್​ ನಿವೃತ್ತರಾಗಿದ್ದರು. ಇಲಾಖೆಯಿಂದ ಬರಬೇಕಾದ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದ್ದಕ್ಕೆ ಬೇಸತ್ತು ಡಿಪೋ ಮುಂಭಾಗದಲ್ಲಿನ ಹೊಟೇಲ್​ನಲ್ಲಿ ನೇಣಿಗೆ […]

ವಾಯವ್ಯ ಸಾರಿಗೆಯಿಂದ ಬಾರದ ಹಣ: ಬೇಸತ್ತ ನಿವೃತ್ತ ಚಾಲಕ ಆತ್ಮಹತ್ಯೆ
Follow us on

ಹಾವೇರಿ:ಇಲಾಖೆಯಿಂದ ಬರಬೇಕಾದ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದೇದ್ದಕ್ಕೆ ಬೇಸತ್ತು, ವಾಯವ್ಯ ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಹಾವೇರಿ ನಗರದ ಹೊರವಲಯದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆ ಡಿಪೋ ಬಳಿ ಈ ಘಟನೆ ಸಂಭವಿಸಿದ್ದು, ಶಿವಪ್ರಕಾಶ ಹೂಗಾರ (62) ನೇಣಿಗೆ ಶರಣಾದ ನಿವೃತ್ತ ನೌಕರ. ಹಾವೇರಿ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಡ್ರೈವರ್ ಕೆಲಸ ಮಾಡಿ ಶಿವಪ್ರಕಾಶ್​ ನಿವೃತ್ತರಾಗಿದ್ದರು.

ಇಲಾಖೆಯಿಂದ ಬರಬೇಕಾದ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದ್ದಕ್ಕೆ ಬೇಸತ್ತು ಡಿಪೋ ಮುಂಭಾಗದಲ್ಲಿನ ಹೊಟೇಲ್​ನಲ್ಲಿ ನೇಣಿಗೆ ಶರಣಾಗಿದ್ದಾರೆ. ಆದರೆ ಶಿವಪ್ರಕಾಶ ಹೂಗಾರರ ಸಾವಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶಿಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.