ಸುಪಾರಿ ಕೇಸ್: ರೌಡಿಶೀಟರುಗಳ ವಿಚಾರಣೆ, ಗಡಿ ಪಾರಿಗೆ SP ಚನ್ನಣ್ಣವರ್ ಸೂಚನೆ ಸಾಧ್ಯತೆ

ಸುಪಾರಿ ಕೇಸ್: ರೌಡಿಶೀಟರುಗಳ ವಿಚಾರಣೆ, ಗಡಿ ಪಾರಿಗೆ SP ಚನ್ನಣ್ಣವರ್ ಸೂಚನೆ ಸಾಧ್ಯತೆ

ನೆಲಮಂಗಲ:ಕಾಂಗ್ರೆಸ್ ಮುಖಂಡನ ಹತ್ಯೆಗೆ 60 ಲಕ್ಷ ಸುಪಾರಿ ಪ್ರಕರಣಕ್ಕೆ ಸಂಬಂದಿಸಿದ್ದಂತೆ ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಹಲವು ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್​ಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನನ್ನ ಹತ್ಯೆಗೆ 60ಲಕ್ಷ ಸುಪಾರಿ ನೀಡಿದ್ದಾರೆ ಎಂದು ಗೋಪಾಲಪುರ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಡೇರಹಳ್ಳಿ ಜಯರಾಮಯ್ಯ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣವರ್ ಸೂಚನೆ ಮೇರೆಗೆ ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್​ಗಳಾದ ಬೆತ್ತನಗೆರೆ ಮಂಜ, ಮುನಿರಾಜು, ಹುಸ್ಕೂರು ಶಿವನನ್ನು ಮಾದನಾಯಕನಹಳ್ಳಿ ಪೋಲಿಸರು ವಿಚಾರಣೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸಿರುವ ಪೊಲೀಸರು ಜಯರಾಮಯ್ಯನ ಹತ್ಯೆಗೆ ಸಂಚು ರೂಪಿಸಿದ್ದ ರೌಡಿಶೀಟರ್​ಗಳನ್ನು ಗಡಿ ಪಾರು ಮಾಡುವ ಸಾಧ್ಯತೆಗಳಿವೆ.

ನನ್ನ ಕೊಲೆಗೆ 60 ಲಕ್ಷ ಸುಪಾರಿ: SR ವಿಶ್ವನಾಥ್​ ವಿರುದ್ಧ ವಡೇರಹಳ್ಳಿ ಜಯರಾಮ್ ಆರೋಪ

Published On - 10:56 am, Wed, 2 September 20

Click on your DTH Provider to Add TV9 Kannada