ಧನುರ್ಮಾಸಕ್ಕೂ ಪ್ರವಾಹಕ್ಕೂ ಏನು ಸಂಬಂಧ? ತಹಶೀಲ್ದಾರ್​ಗೆ ಅಶೋಕ್ ತರಾಟೆ

|

Updated on: Dec 23, 2019 | 4:08 PM

ಮಂಡ್ಯ: ಧನುರ್ಮಾಸಕ್ಕೂ ಪ್ರವಾಹಕ್ಕೂ ಏನು ಸಂಬಂಧ? ಕಾನೂನು ಓದಿದ್ದೀಯಾ ಎಂದು ನೆರೆಯಿಂದ ಹಾನಿಗೊಳಗಾಗಿದ್ದ ಮನೆಗಳ ಮರುನಿರ್ಮಾಣ ತಡವಾಗಿದ್ದಕ್ಕೆ ಧನುರ್ಮಾಸದ ಕಾರಣ ಕೊಟ್ಟ ತಹಶೀಲ್ದಾರ್​ಗೆ ಸಚಿವ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಿದ್ದೆ? ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಆರ್.ಅಶೋಕ್ ಭಾಗಿಯಾಗಿದ್ರು. ನೆರೆಯಿಂದ ಹಾನಿಗೊಳಗಾಗಿದ್ದ ಮನೆಗಳ ಮರುನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ಕೆ.ಆರ್.ಪೇಟೆ ತಹಶೀಲ್ದಾರ್ ಶಿವಮೂರ್ತಿ ಧನುರ್ಮಾಸದ ಕಾರಣ ನೀಡಿದ್ದಾರೆ. ಧನುರ್ಮಾಸ ಶುರುವಾಗಿದ್ದು 3 ದಿನದ […]

ಧನುರ್ಮಾಸಕ್ಕೂ ಪ್ರವಾಹಕ್ಕೂ ಏನು ಸಂಬಂಧ? ತಹಶೀಲ್ದಾರ್​ಗೆ ಅಶೋಕ್ ತರಾಟೆ
Follow us on

ಮಂಡ್ಯ: ಧನುರ್ಮಾಸಕ್ಕೂ ಪ್ರವಾಹಕ್ಕೂ ಏನು ಸಂಬಂಧ? ಕಾನೂನು ಓದಿದ್ದೀಯಾ ಎಂದು ನೆರೆಯಿಂದ ಹಾನಿಗೊಳಗಾಗಿದ್ದ ಮನೆಗಳ ಮರುನಿರ್ಮಾಣ ತಡವಾಗಿದ್ದಕ್ಕೆ ಧನುರ್ಮಾಸದ ಕಾರಣ ಕೊಟ್ಟ ತಹಶೀಲ್ದಾರ್​ಗೆ ಸಚಿವ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಷ್ಟು ದಿನ ಏನ್ ಮಾಡ್ತಿದ್ದೆ?
ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಆರ್.ಅಶೋಕ್ ಭಾಗಿಯಾಗಿದ್ರು. ನೆರೆಯಿಂದ ಹಾನಿಗೊಳಗಾಗಿದ್ದ ಮನೆಗಳ ಮರುನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ಕೆ.ಆರ್.ಪೇಟೆ ತಹಶೀಲ್ದಾರ್ ಶಿವಮೂರ್ತಿ ಧನುರ್ಮಾಸದ ಕಾರಣ ನೀಡಿದ್ದಾರೆ. ಧನುರ್ಮಾಸ ಶುರುವಾಗಿದ್ದು 3 ದಿನದ ಹಿಂದೆ. ಇಷ್ಟು ದಿನ ಏನ್ ಮಾಡ್ತಿದ್ದೆ? ಕಾನೂನು ಓದಿದ್ಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಕೆ.ಆರ್.ಪೇಟೆ ಉಪ‌ಚುನಾವಣೆ ನೀತಿ ಸಂಹಿತೆ ಇತ್ತು ಸರ್ ಎಂದು ತಹಶೀಲ್ದಾರ್ ಉತ್ತರಿಸಿದ್ದಾರೆ.

ಉಪ ಚುನಾವಣೆಗೂ ಪ್ರವಾಹಕ್ಕು ಏನು ಸಂಬಂಧ? ಒಂದು ತಿಂಗಳಲ್ಲಿ ಕೆಲಸ ಮುಗಿಸುವಂತೆ ತಹಶೀಲ್ದಾರ್​ಗೆ ಅಶೋಕ್ ಸೂಚಿಸಿದ್ದಾರೆ. ನೆರೆಯಿಂದ ಕೆ.ಆರ್.ಪೇಟೆ ತಾಲೂಕಿನಲ್ಲಿ 27ಮನೆಗಳು ಹಾನಿಯಾಗಿವೆ. ಈಗಾಗಲೇ 10 ಮನೆಗಳ ನಿರ್ಮಾಣ ಕಾರ್ಯ ಶುರುವಾಗಿದೆ. ಇನ್ನ 4-5ದಿನಗಳಲ್ಲಿ ಉಳಿದ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿ ಪೂರ್ಣಗೊಳಿಸುವುದಾಗಿ ತಹಶೀಲ್ದಾರ್ ಹೇಳಿದ್ದಾರೆ.

Published On - 3:58 pm, Mon, 23 December 19