ಸಿ.ಟಿ. ರವಿ ವಿರುದ್ಧ ಹರಿಹಾಯ್ದ ಕಾಳಿಮಠದ ಋಷಿಕುಮಾರ ಸ್ವಾಮೀಜಿ
ಎಲೆಕ್ಷನ್ ವೇಳೆಗೆ ಕೇಸರಿ ಶಲ್ಯ, ದತ್ತಮಾಲೆ ಹಾಕಿಕೊಳ್ಳುವ ಸಿ.ಟಿ.ರವಿ ಅವರಿಗೆ ದತ್ತಪೀಠವನ್ನು ಮುಸ್ಲಿಮರಿಗೆ ಕೊಡುವ ಯೋಚನೆ ಇದೀಗ ಬಂದಿರಬಹುದು ಎಂದು ಅನುಮಾನಿಸಿದರು.
ಚಿಕ್ಕಮಗಳೂರು: ಚಿಕ್ಕಮಗಳೂರಿನ ಹಿಂದೂಗಳನ್ನು ಮೊದಲು ಕಾಪಾಡಿ, ಆಮೇಲೆ ತಮಿಳುನಾಡಿನತ್ತ ನಿಮ್ಮ ಕಾಳಜಿ ವಹಿಸಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಾಳಿಮಠದ ಋಷಿಕುಮಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬಾಬುಬುಡನ್ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ ನಡೆದ ದತ್ತಮಾಲ ಅಭಿಯಾನದಲ್ಲಿ ಮಾತನಾಡಿದ ಋಷಿಕುಮಾರ್ ಸ್ವಾಮೀಜಿ, ತಮಿಳುನಾಡಿನಲ್ಲಿ ನಾವು ಹಿಂದುಗಳು ಎಂದು ಭಾಷಣ ಮಾಡೋದು ಬಿಟ್ಟು, ಮೊದಲು ನಿಮ್ಮ ಊರಿನತ್ತ ಗಮನಹಿರಿಸಿ ಎಂದು ಸಿ.ಟಿ ರವಿ ವಿರುದ್ಧ ಹರಿಹಾಯ್ದರು.
ಎಲೆಕ್ಷನ್ ವೇಳೆಗೆ ಕೇಸರಿ ಶಲ್ಯ, ದತ್ತಮಾಲೆ ಹಾಕಿಕೊಳ್ಳುವ ಸಿ.ಟಿ.ರವಿ ಅವರಿಗೆ ದತ್ತಪೀಠವನ್ನು ಮುಸ್ಲಿಮರಿಗೆ ಕೊಡುವ ಯೋಚನೆ ಇದೀಗ ಬಂದಿರಬಹುದು ಎಂದು ಅನುಮಾನಿಸಿದರು. ಚಳಿಗಾಲದ ಅಧಿವೇಶದ ಒಳಗೆ ದತ್ತಪೀಠ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟಕ್ಕೆ ಇಳಿಯುತ್ತೀವೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಕ್ಕೆ ಬರುವ ಮುನ್ನ ಹಿಂದು ಧರ್ಮದ ಮೇಲೆ ಪ್ರಮಾಣ ಮಾಡಿದ್ದ ರಾಜ್ಯ ಸರ್ಕಾರಕ್ಕೆ, ಹಿಂದು ಧರ್ಮದ ಮೇಲೆ ನಡೆಯುವ ದೌರ್ಜನ್ಯ ಕಣ್ಣಿಗೆ ಕಾಣುವುದಿಲ್ಲ ಎಂದು ಕಟುವಾಗಿ ನುಡಿದರು.
ಇದನ್ನೂ ಓದಿ: ‘ಸಿಎಂ ಕುರ್ಚಿ ಏರಿದ್ಮೇಲೆ BSY ಪೂರ್ಣಾವಧಿ ಅಧಿಕಾರ ಮಾಡಿಲ್ಲ; ಇದಕ್ಕೆ ಕಾರಣ.. ದತ್ತಾತ್ರೇಯನ ಶಾಪ’
Published On - 10:46 am, Fri, 27 November 20