ಟಾಸ್ ವಿಷಯದಲ್ಲಿ ನಮಗೆ ಚಿಂತೆಯಿಲ್ಲ: ರೋಹಿತ್ ಶರ್ಮಾ

| Updated By: ಝಾಹಿರ್ ಯೂಸುಫ್

Updated on: Nov 14, 2023 | 9:46 PM

India vs New Zealand: ವಾಂಖೆಡೆಯಲ್ಲಿ ಟಾಸ್ ನಿರ್ಣಾಯಕವಲ್ಲ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲ್ಲುತ್ತದೆ, ಅಥವಾ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡಿದರೆ ಸೋಲುತ್ತದೆ ಎನ್ನುವುದು ಸರಿಯಲ್ಲ. ಹೀಗಾಗಿ ನಾನು ಟಾಸ್ ಬಗ್ಗೆ ಚಿಂತಿಸುವುದಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಟಾಸ್ ವಿಷಯದಲ್ಲಿ ನಮಗೆ ಚಿಂತೆಯಿಲ್ಲ: ರೋಹಿತ್ ಶರ್ಮಾ
Rohit Sharma
Follow us on

ಏಕದಿನ ವಿಶ್ವಕಪ್​ನಲ್ಲಿ ಫೈನಲ್​ಗೇರಲು ಟೀಮ್ ಇಂಡಿಯಾಗೆ ಒಂದು ಗೆಲುವಿನ ಅಗತ್ಯತೆಯಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಮಣಿಸಿದರೆ 2011ರ ಬಳಿಕ ಮತ್ತೊಮ್ಮೆ ಭಾರತ ತಂಡ ಫೈನಲ್ ಆಡಲಿದೆ.

ಆದರೆ ಟೀಮ್ ಇಂಡಿಯಾ ಪಾಲಿನ ಈ ನಿರ್ಣಾಯಕ ಪಂದ್ಯ ನಡೆಯುತ್ತಿರುವುದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎಂಬುದು ವಿಶೇಷ. ಇಲ್ಲಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸುತ್ತದೆ. ಆದರೆ ಈ ವಿಷಯದಲ್ಲಿ ನಮಗೆ ಯಾವುದೇ ಚಿಂತೆಯಿಲ್ಲ ಎಂದಿದ್ದಾರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ.

ಸೆಮಿಫೈನಲ್​ ಪಂದ್ಯಕ್ಕೂ ಮುನ್ನದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ವಾಂಖೆಡೆಯಲ್ಲಿ ಟಾಸ್ ಪ್ರಮುಖ ಅಂಶ ಎಂಬುದನ್ನು ನಾನು ಪರಿಗಣಿಸುತ್ತಿಲ್ಲ. ಏಕೆಂದರೆ ನಾನು ಈ ಮೈದಾನದಲ್ಲಿ ಅನೇಕ ಪಂದ್ಯಗಳನ್ನಾಡಿದ್ದೇನೆ.

ಇಲ್ಲಿ ಆಡಲಾದ ಪಂದ್ಯಗಳಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಿದೆ ಎಂಬ ವಿಶ್ಲೇಷಣೆ ಗಮನಿಸಿದ್ದೇನೆ. ಆದರೆ ವಾಂಖೆಡೆಯಲ್ಲಿ ಟಾಸ್ ನಿರ್ಣಾಯಕವಲ್ಲ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲ್ಲುತ್ತದೆ, ಅಥವಾ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡಿದರೆ ಸೋಲುತ್ತದೆ ಎನ್ನುವುದು ಸರಿಯಲ್ಲ. ಹೀಗಾಗಿ ನಾನು ಟಾಸ್ ಬಗ್ಗೆ ಚಿಂತಿಸುವುದಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಸೆಮಿಫೈನಲ್​ನಲ್ಲಿ ನ್ಯೂಝಿಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ನಾಯಕ, ಕಿವೀಸ್ ಪಡೆ ಚಾಣಾಕ್ಷ ಆಟಕ್ಕೆ ಹೆಸರುವಾಸಿ. ಅವರು ಎದುರಾಳಿ ತಂಡದ ಮನಸ್ಥಿತಿಯನ್ನು ಚೆನ್ನಾಗಿ ಅರಿತು ಆಡುತ್ತಾರೆ. ಇದಾಗ್ಯೂ ನಾವು ಅವರ ವಿರುದ್ಧ ಮೇಲುಗೈ ಸಾಧಿಸಲಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಅಂದಹಾಗೆ ಈ ಬಾರಿಯ ವಿಶ್ವಕಪ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಾದ 4 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ 3 ತಂಡಗಳು ಗೆದ್ದಿವೆ. ಹೀಗಾಗಿಯೇ ವಾಂಖೆಡೆ ಮೈದಾನದಲ್ಲಿ ಟಾಸ್ ಪಾತ್ರ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ. ಇದಾಗ್ಯೂ ತವರು ಮೈದಾನದಲ್ಲಿ ಚೇಸಿಂಗ್ ಮಾಡುವ ಮೂಲಕ ಕೂಡ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಂದಿದೆ ಮೂರು ವಿಶ್ವ ದಾಖಲೆಗಳು

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.