AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ವಿಶ್ವಕಪ್ ಸೆಮಿಫೈನಲ್​ ವೇಳಾಪಟ್ಟಿ ಇಲ್ಲಿದೆ

World Cup 2023 Semi Final Schedule: ಪ್ರಸ್ತುತ ಪಾಯಿಂಟ್ಸ್​​ ಟೇಬಲ್​ನಲ್ಲಿ 8 ಪಂದ್ಯಗಳಲ್ಲಿ ಗೆದ್ದು 16 ಅಂಕಗಳನ್ನು ಕಲೆಹಾಕಿರುವ ಭಾರತ ತಂಡವು ಅಗ್ರಸ್ಥಾನದಲ್ಲಿದ್ದರೆ, 9 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ಸೌತ್ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಇನ್ನು 9 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ 14 ಅಂಕಗಳೊಂದಿಗೆ ತೃತೀಯ ಸ್ಥಾನ ಅಲಂಕರಿಸಿದೆ.

ಏಕದಿನ ವಿಶ್ವಕಪ್ ಸೆಮಿಫೈನಲ್​ ವೇಳಾಪಟ್ಟಿ ಇಲ್ಲಿದೆ
ICC World Cup 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on:Nov 11, 2023 | 10:09 PM

ಏಕದಿನ ವಿಶ್ವಕಪ್​ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ 44 ಲೀಗ್​ ಪಂದ್ಯಗಳು ಮುಗಿದಿದೆ. ಇನ್ನುಳಿದಿರುವುದು ಭಾರತ ಮತ್ತು ನೆದರ್​ಲೆಂಡ್ಸ್​ ತಂಡದ ಮ್ಯಾಚ್ ಮಾತ್ರ. ಇದಕ್ಕೂ ಮುನ್ನವೇ ಈ ಬಾರಿಯ ವಿಶ್ವಕಪ್​ನಲ್ಲಿ ಸೆಮಿಫೈನಲ್ಸ್ ಆಡಲಿರುವ 4 ತಂಡಗಳು ಖಚಿತವಾಗಿದೆ. ಪ್ರಸ್ತುತ ವಿಶ್ವಕಪ್​ ಪಾಯಿಂಟ್ಸ್​​ ಟೇಬಲ್​ನಲ್ಲಿ 8 ಪಂದ್ಯಗಳಲ್ಲಿ ಗೆದ್ದು 16 ಅಂಕಗಳನ್ನು ಕಲೆಹಾಕಿರುವ ಭಾರತ ತಂಡವು ಅಗ್ರಸ್ಥಾನದಲ್ಲಿದ್ದರೆ, 9 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ಸೌತ್ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ.

ಇನ್ನು 9 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ 14 ಅಂಕಗಳೊಂದಿಗೆ ತೃತೀಯ ಸ್ಥಾನ ಅಲಂಕರಿಸಿದೆ. ಹಾಗೆಯೇ 9 ಮ್ಯಾಚ್​ಗಳಲ್ಲಿ 5 ಜಯ ಸಾಧಿಸಿರುವ ನ್ಯೂಝಿಲೆಂಡ್ 10 ಪಾಯಿಂಟ್ಸ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅದರಂತೆ ಈ ಬಾರಿಯ ಸೆಮಿಫೈನಲ್ಸ್​ನಲ್ಲಿ ಭಾರತ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ.

ಇಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ನಾಲ್ಕನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ಅನ್ನು ಎದುರಿಸಲಿದೆ. ಹಾಗೆಯೇ 2ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡದ ಎದುರಾಳಿ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ. ಅದರಂತೆ ಮೊದಲ ಸೆಮಿಫೈನಲ್​ ಭಾರತ ಮತ್ತು ನ್ಯೂಝಿಲೆಂಡ್ ನಡುವೆ ನಡೆಯಲಿದೆ.

ಏಕದಿನ ವಿಶ್ವಕಪ್​ ಸೆಮಿಫೈನಲ್ಸ್ ವೇಳಾಪಟ್ಟಿ ಹೀಗಿದೆ:

ಮೊದಲ ಸೆಮಿಫೈನಲ್​: ನವೆಂಬರ್ 15 (ಬುಧವಾರ)ಭಾರತ vs ನ್ಯೂಝಿಲೆಂಡ್(ವಾಂಖೆಡೆ ಸ್ಟೇಡಿಯಂ, ಮುಂಬೈ)

ಎರಡನೇ ಸೆಮಿಫೈನಲ್: ನವೆಂಬರ್ 16 (ಗುರುವಾರ)ಸೌತ್ ಆಫ್ರಿಕಾ vs ಆಸ್ಟ್ರೇಲಿಯಾ (ಈಡನ್ ಗಾರ್ಡನ್ಸ್​ ಸ್ಟೇಡಿಯಂ, ಕೊಲ್ಕತ್ತಾ)

ಫೈನಲ್ ಪಂದ್ಯ: ನವೆಂಬರ್ 19 (ಭಾನುವಾರ)- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆ ಉಡೀಸ್

ಸೆಮಿಫೈನಲ್ ಆಡಲಿರುವ 4 ತಂಡಗಳು:

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.

ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ತಬ್ರೇಝ್ ಶಂಸಿ, ಕಗಿಸೊ ರಬಾಡ, ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಝಾಡ್ ವಿಲಿಯಮ್ಸ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

Published On - 10:08 pm, Sat, 11 November 23

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ