ಬೆಂಗಳೂರು: IMA ವಂಚನೆ ಕೇಸ್ನಲ್ಲಿ ಮಾಜಿ ಸಚಿವ ರೋಷನ್ ಬೇಗ್ನನ್ನು ಸಿಬಿಐ ಬಂಧಿಸಿತ್ತು. ಸದ್ಯ ನಿನ್ನೆ ಜಾಮೀನಿನ ಮೇಲೆ ಹೊರಬಂದಿದ್ದು ರೋಷನ್ ಬೇಗ್‌ಗೆ ರೌಡಿಶೀಟರ್ ವೆಲ್‌ಕಮ್ ಮಾಡಿದ್ದಾನೆ.
ಬೇಗ್‌ಗೆ ನಿನ್ನೆ ರೌಡಿಶೀಟರ್ ತನ್ವೀರ್ ಸ್ವಾಗತ ಮಾಡಿದ್ದಾನೆ. ತಡರಾತ್ರಿ ಮಾಜಿ ಸಚಿವ ಬೇಗ್ ನಿವಾಸದಲ್ಲಿ ಶಾಲು, ಹಾರ ಹಾಕಿ ಸ್ವಾಗತಿಸಿದ್ದಾರೆ. ಭೂಗತ ಲೋಕದಲ್ಲಿ ಶಿವಾಜಿನಗರದ ಡಾನ್ ಅಂತಲೇ ಕುಖ್ಯಾತಿ ಪಡೆದಿರುವ ರೌಡಿ ತನ್ವೀರ್ ಬೇಗ್ ಬೆಂಬಲಿಗರ ಪೈಕಿ ಪ್ರಮುಖ ವ್ಯಕ್ತಿ.
ಬೇಗ್ ಬಿಜೆಪಿ ಸೇರ್ಪಡೆ ಬಳಿಕ ತಾನೂ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಘೋಷಿಸಿದ್ದ. ನಿನ್ನೆ ಷರತ್ತುಬದ್ಧ ಜಾಮೀನಿನ ಮೇಲೆ ತನ್ನ ನಾಯಕ ರೋಷನ್ ಬೇಗ್ ಬಿಡುಗಡೆಯಾಗಿದ ಹಿನ್ನೆಲೆಯಲ್ಲಿ ಮನೆಗೆ ಭೇಟಿ ಕೊಟ್ಟು ಶಾಲು, ಹಾರ ಹಾಕಿ ಬಿಡುಗಡೆಗೆ ಸಂತೋಷ ವ್ಯಕ್ತಪಡಿಸಿದ್ದಾನೆ.