BBMP ಎಡವಟ್ಟಿನಿಂದ ಕಮಲಾನಗರ ನಿವಾಸಿಗಳಿಗೆ ಆತಂಕ.. ಸೇತುವೆ ಕಾಮಗಾರಿ, ಬಿರುಕು ಬಿಟ್ಟ ಮನೆಗಳು
ಬಿಬಿಎಂಪಿ ಎಡವಟ್ಟಿನಿಂದ ಬೆಂಗಳೂರಿನ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಏನೋ ಮಾಡಲು ಹೋಗಿ ಮತ್ತೇನೋ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕಮಲಾನಗರದಲ್ಲಿ ಬಿಬಿಎಂಪಿ ಕಾಮಗಾರಿಯಿಂದ ಜನ ಕಣ್ಣೀರು ಹಾಕುತ್ತಿದ್ದಾರೆ.
ಬೆಂಗಳೂರು: ಬಿಬಿಎಂಪಿ ಎಡವಟ್ಟಿನಿಂದ ಬೆಂಗಳೂರಿನ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಏನೋ ಮಾಡಲು ಹೋಗಿ ಮತ್ತೇನೋ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕಮಲಾನಗರದಲ್ಲಿ ಬಿಬಿಎಂಪಿ ಕಾಮಗಾರಿಯಿಂದ ಜನ ಕಣ್ಣೀರು ಹಾಕುತ್ತಿದ್ದಾರೆ.
ಸೇತುವೆ ನಿರ್ಮಿಸಲು ಹೋಗಿ ಬಿಬಿಎಂಪಿಯ ದೊಡ್ಡ ಎಡವಟ್ಟು ಮಾಡಿಟ್ಟಿದೆ. ಕಮಲಾನಗರದಲ್ಲಿ BBMP ಸೇತುವೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದು ಅದರಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿ ಉಂಟಾಗಿದೆ. ಹೀಗಾಗಿ ಬಿಬಿಎಂಪಿ ಎಡವಟ್ಟು ಕಾಮಗಾರಿಯಿಂದ ಜನ ಆತಂಕಕ್ಕೆ ಒಳಗಾಗಿದ್ದು ಕಾಲುವೆ ಅಕ್ಕಪಕ್ಕದಲ್ಲಿ ಹಾನಿಯಾಗಿರೋ ಮನೆ ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.
ಒಂದು ವರ್ಷದ ಹಿಂದೆ ಬಿಬಿಎಂಪಿ ಸೇತುವೆ ಕಾಮಗಾರಿ ಆರಂಭಿಸಿತ್ತು. ಈಗ ಏಕಾಏಕಿ ಸೇತುವೆ ನಿರ್ಮಾಣ ಕಾಮಗಾರಿ ನಿಲ್ಲಿಸಿದೆ. ಪಾಲಿಕೆ ಸೇತುವೆ ಕಾಮಗಾರಿ ಮತ್ತೆ ಶುರು ಮಾಡಿದ್ರೆ ಮಹಾ ಎಡವಟ್ಟು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಎರಡು ಮನೆಗಳ ನಿವಾಸಿಗಳು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ಏನಾದ್ರೂ ಅನಾಹುತ ಸಂಭವಿಸಿದ್ರೆ ಬಿಬಿಎಂಪಿ ಹೊಣೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
Published On - 8:17 am, Sun, 6 December 20