ಏಷ್ಯಾದಲ್ಲಿಯೇ ಅತೀ ದೊಡ್ಡ ಕೋಟೆ ಹೊಂದಿರುವ ಜಿಲ್ಲೆ ಪುದಿನ, ಪಾಲಕ್ ಬೆಳೆಯುವುದರಲ್ಲಿ ಮಾದರಿ

ಅದೊಂದು ಪುಟ್ಟ ಊರು. ಅಲ್ಲಿನ ರೈತರು ಪುದಿನಾ ಸೊಪ್ಪು ಬೆಳೆಯುವುದರಲ್ಲಿ ನಿಸ್ಸೀಮರು. ಅವರ ಬೆಳೆಯುವ ಸೊಪ್ಪು ನಷ್ಟದ ರುಚಿ ತೋರಿಸಿಲ್ಲ. ಕೃಷಿಯಲ್ಲಿ ಅವರ ಬುದ್ಧಿವಂತಿಕೆ, ಶ್ರಮ ಹಾಗೂ ಮಾರುಕಟ್ಟೆ ಜ್ಞಾನ ಅವರ ಬದುಕನ್ನೇ ಹಸನಾಗಿಸಿದೆ.

ಏಷ್ಯಾದಲ್ಲಿಯೇ ಅತೀ ದೊಡ್ಡ ಕೋಟೆ ಹೊಂದಿರುವ ಜಿಲ್ಲೆ ಪುದಿನ, ಪಾಲಕ್ ಬೆಳೆಯುವುದರಲ್ಲಿ ಮಾದರಿ
ಬೀದರ್
Ayesha Banu

|

Dec 06, 2020 | 7:21 AM

ಬೀದರ್: ಜಿಲ್ಲೆಯ ಕೋಟೆ ಇಡೀ ಏಷ್ಯಾದಲ್ಲಿಯೇ ಅತೀ ದೊಡ್ಡ ಕೋಟೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಈ ಕೋಟೆಯ ಆವರಣದಲ್ಲಿ ಒಂದು ಪುಟ್ಟದಾದ ಗ್ರಾಮವಿದೆ. ಆ ಗ್ರಾಮದ ಹೆಸರು ಒಳಕೋಟೆ ಅಂತಾ. ಈ ಗ್ರಾಮದಲ್ಲಿ 25 ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿದ್ದಾರೆ.

ಪುದಿನ, ಪಾಲಕ್ ಬೆಳೆಯೇ ಜೀವನಾಧಾರ ಈ ಗ್ರಾಮದಲ್ಲಿ ಕೇವಲ 25 ಎಕರೆ ಜಮೀನಿದ್ದು, ಸೊಪ್ಪಿನ ಬೆಳೆಯೇ ಇವರ ಜೀವನಾಧಾರವಾಗಿದೆ. ಇಲ್ಲಿ ಅತಿಹೆಚ್ಚಾಗಿ ಪುದಿನಾ ಸೊಪ್ಪು, ಪಾಲಕ್ ಬೆಳೆಯಲಾಗುತ್ತೆ. ಇಲ್ಲಿ ಬೆಳೆಸಲಾದ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ವಿಶೇಷ ಅಂದ್ರೆ ಈ ಒಂದೇ ಒಂದು ಭಾವಿಯ ನೀರು ಇಲ್ಲಿನ 25 ಎಕರೆಗೆ ನೀರಾವರಿ ಸೌಲಭ್ಯವನ್ನ ಕಲ್ಪಿಸಿಕೊಟಿದ್ದೆಯಂತೆ.

ನಸುಕಿನಲ್ಲಿಯೇ ಏಳುವ ಮಹಿಳೆಯರು ಹೊಲಕ್ಕೆ ತೆರಳಿ ಸೊಪ್ಪು ತರಕಾರಿ ಕೊಯ್ಲು ಮಾಡುತ್ತಾರೆ. ಮನೆಯ ಸದಸ್ಯರೆಲ್ಲ ಸೇರಿ ತರಕಾರಿಯನ್ನು ನೀರಿನಲ್ಲಿ ತೊಳೆದು ಚೀಲಕ್ಕೆ ತುಂಬುತ್ತಾರೆ. ಇಲ್ಲಿ ಬೆಳೆಯುವ ಸೊಪ್ಪು ತರಕಾರಿ ಬೀದರ್, ಹೈದರಾಬಾದ್ ಸುತ್ತಮುತ್ತಲಿನ ಮಾರುಕಟ್ಟೆಗೆ ಹೋಗುತ್ತದೆ. ಈ ಸೊಪ್ಪಿನ ಬೆಳೆಯಲು ಕೂಲಿಕಾರರ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ. ಯಾಕಂದ್ರೆ ಮನೆಯ ಸದಸ್ಯರೇ ಕೆಲಸ ನಿರ್ವಹಿಸುತ್ತಾರೆ.

ಒಟ್ನಲ್ಲಿ ಒಂದು ಚಿಕ್ಕ ಊರು ಇಡೀ ಬೀದರ್ ಜಿಲ್ಲೆಗೆ ಪುದಿನಾ ಸರಬರಾಜು ಮಾಡುತ್ತಿದೆ. ಕೃಷಿಯಲ್ಲಿ ಲಾಭ ಇಲ್ಲ ಅನ್ನೋರಿಗೆ ಒಳಕೋಟೆ ಗ್ರಾಮದ ಪಾಲಕ್ ಸೋಪ್ಪಿನ ಬೆಳೆ ನಿಜಕ್ಕೂ ಮಾದರಿ. -ಸುರೇಶ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada