ಚರಂಡಿ ಸ್ವಚ್ಛತೆ ಮಾಡಿಲ್ಲ ಅಂತ ಕಿಲ್ಲನಕೇರ ಗ್ರಾಮದ ಜನ ಏನ್ ಮಾಡುದ್ರು ಗೊತ್ತಾ?
ಚರಂಡಿ ಸ್ವಚ್ಛತೆ ಮಾಡಿ ತ್ಯಾಜ್ಯವನ್ನ ಗ್ರಾಮ ಪಂಚಾಯತಿ ಕಚೇರಿ ಬಾಗಿಲ ಮುಂದೆ ಸುರಿದಿರುವ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ: ಚರಂಡಿ ಸ್ವಚ್ಛತೆ ಮಾಡಿ ತ್ಯಾಜ್ಯವನ್ನ ಗ್ರಾಮ ಪಂಚಾಯತಿ ಕಚೇರಿ ಬಾಗಿಲ ಮುಂದೆ ಸುರಿದಿರುವ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚರಂಡಿಗಳಲ್ಲಿ ಹುಳು ತುಂಬಿಕೊಂಡು ದುರ್ವಾಸನೆ ಬರ್ತಾಯಿದ್ದು ಗ್ರಾಮಸ್ಥರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದಾರೆ. ಆದ್ರೆ ಪಿಡಿಒ ಮಾತ್ರ ದೂರನ್ನ ಕಿವಿ ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನ ಪಂಚಾಯಿತಿ ಕಚೇರಿ ಬಾಗಿಲ ಮುಂದೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಚುನಾವಣೆಗೆ ಬಹಿಷ್ಕಾರ ಹಾಕಿದ ನಾಲ್ಕು ಗ್ರಾಮ ಪಂಚಾಯಿತಿಗಳು

Published On - 8:48 am, Sun, 6 December 20




