Nitin Gadkari: ಕೆಂಪು ಚಾಪರ್ ನಲ್ಲಿ ರಾಮನಗರಕ್ಕೆ ಆಗಮಿಸಿದ ಸಚಿವರಿಗೆ ಭಾರೀ ಸ್ವಾಗತ

Edited By:

Updated on: Jan 05, 2023 | 2:21 PM

ಕೇಂದ್ರ ಸಚಿವರ ಜೊತೆ ಹೆಲಿಕಾಪ್ಪರ್ ನಲ್ಲಿ ಸಚಿವ ಸಿಸಿ ಪಾಟೀಲ್ ಮತ್ತು ಸಂಸದ ಮುನಿಸ್ವಾಮಿ ಸಹ ಆಗಮಿಸಿದರು. ಸಚಿವ ಎಮ್ ಟಿಬಿ ನಾಗರಾಜ್ ಹಾಗೂ ಇನ್ನೂ ಇತರ ಗಣ್ಯರು ನಿತಿನ್ ಗಡ್ಕರಿ ಅವರನ್ನು ಸ್ವಾಗತಿಸಿದರು.

ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (National Highway) 275 ಕಾಮಗಾರಿ ವೀಕ್ಷಣೆಗಾಗಿ ಕೆಂಪು ಬಣ್ಣದ ಚಾಪರ್ ನಲ್ಲಿ ಆಗಮಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ರಾಮನಗರದ ಜೀಗನಹಳ್ಳಿ ಹೆದ್ದಾರಿ ಮೇಲೆ ಗುರುತಿಸಲಾಗಿದ್ದ ಹೆಲಿಪ್ಯಾಡ್ (helipad) ಬಳಿ ಭವ್ಯವಾಗಿ ಸ್ವಾಗತಿಸಲಾಯಿತು. ಕೇಂದ್ರ ಸಚಿವರ ಜೊತೆ ಹೆಲಿಕಾಪ್ಪರ್ ನಲ್ಲಿ ಸಚಿವ ಸಿಸಿ ಪಾಟೀಲ್ ಮತ್ತು ಸಂಸದ ಮುನಿಸ್ವಾಮಿ ಸಹ ಆಗಮಿಸಿದರು. ಸಚಿವ ಎಮ್ ಟಿಬಿ ನಾಗರಾಜ್ ಹಾಗೂ ಇನ್ನೂ ಇತರ ಗಣ್ಯರು ನಿತಿನ್ ಗಡ್ಕರಿ ಅವರನ್ನು ಸ್ವಾಗತಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ