Shivamogga Trial Blast ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್, ಐಸಿಸ್ ಒಳಸಂಚು ಪತ್ತೆ
ಶಿವಮೊಗ್ಗ ತುಂಗಾತೀರದ ಟ್ರಯಲ್ ಬಾಂಬ್ ಬ್ಲಾಸ್ಟ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, NIA ತಂಡ ಮತ್ತೊಂದು ದೊಡ್ಡ ಬೇಟೆಯಾಡಿದೆ. ರಾಕ್ಷಸರ ಜತೆ ಲಿಂಕ್ ಹೊಂದಿದ್ದ ಮತ್ತಷ್ಟು ಕ್ರಿಮಿಗಳನ್ನ ಬಲೆಗೆ ಕೆಡವಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ತುಂಗಾತೀರದಲ್ಲಿ ಸಂಭವಿಸಿದ್ದ ಟ್ರಯಲ್ ಬಾಂಬ್ ಬ್ಲಾಸ್ಟ್ (Shivamogga Trial Blast) ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್‌ನಲ್ಲಿ ಐಸಿಸ್ ಒಳಸಂಚು ಪತ್ತೆಯಾಗಿದೆ. ಈ ಸಂಬಂಧ ಎನ್ಐಎ (NIA) ಇಂದು(ಜನವರಿ 05) ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಸೇರಿ 6 ಕಡೆ ದಾಳಿ ಮಾಡಿದ್ದು, ಇಬ್ಬರು ಐಸಿಸ್ (I ಸಕ್ರಿಯ ಸದಸ್ಯರನ್ನ ಬಂಧಿಸಿದೆ.
ಇದನ್ನೂ ಓದಿ: Shivamogga News: ಶಿವಮೊಗ್ಗದಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ: ಎನ್ಐಎಯಿಂದ ವಿಚಾರಣೆ
ಶಿವಮೊಗ್ಗದ ಮಂಜುನಾಥ ಬಡಾವಣೆಯ ಉಜೇರ್ ಫರ್ಹಾನ್ ಬೇಗ್ ಮತ್ತು ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ ಎನ್ನುವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ಬಂಧನವಾಗಿರುವ ಆರೋಪಿ ಮಾಜ್ ವಿಚಾರಣೆ ವೇಳೆ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ವಿವಿಧ ಕಡೆ ದಾಳಿ ಮಾಡಿ ಆ ಇಬ್ಬರನ್ನು ಖೆಡ್ಡಕ್ಕೆ ಬೀಳುಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಂಗಾ ತೀರದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಮಾಜ್ ಮುನೀರ್ ಜತೆ ನಂಟು ಆರೋಪದಡಿ, ಮೂವರು ಪಿಯುಸಿ ಕ್ಲಾಸ್ಮೆಟ್ಗಳನ್ನ ವಿಚಾರಣೆ ನಡೆಸಿದೆ. ಶಿವಮೊಗ್ಗದ ತಾಜುದ್ದೀನ್ ಹಾಗೂ ಫರಾನ್, ಹೊನ್ನಾಳಿಯ ನಾವೀದ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ಪೈಕಿ ನಾವೀದ್ನನ್ನು ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ. ಆದ್ರೆ, ತಾಜುದ್ದೀನ್ ಹಾಗೂ ಫರಾನ್ ಎನ್ಐಎ ಅಧಿಕಾರಿಗಳು ಬಂಧಿಸಿ ಮತ್ತಷ್ಟು ತನಿಖೆ ತೀವ್ರಗೊಳಿಸಿದ್ದಾರೆ. ಇವರ ಜತೆ ಮತ್ತಿನ್ಯಾರು ಸಂಪರ್ಕದಲ್ಲಿದ್ರು ಎನ್ನುವುದನ್ನು ಸದ್ದಿಲ್ಲದೆ ತಲಾಶ್ ಮಾಡ್ತಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ