Shivamogga News: ಶಿವಮೊಗ್ಗದಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ: ಎನ್​​ಐಎಯಿಂದ ವಿಚಾರಣೆ

ಜಿಲ್ಲೆಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಉಗ್ರನನ್ನು ಎನ್​​ಐಎ ಅಧಿಕಾರಿಗಳು ವಶಕ್ಕೆ ಪಡೆದಕೊಂಡಿದ್ದಾರೆ.

Shivamogga News: ಶಿವಮೊಗ್ಗದಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ: ಎನ್​​ಐಎಯಿಂದ ವಿಚಾರಣೆ
ಎನ್​ಐಎ (ಸಾಂದರ್ಭಿಕ ಚಿತ್ರ)Image Credit source: prajavani.net
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jan 05, 2023 | 5:48 PM

ಶಿವಮೊಗ್ಗ: ಜಿಲ್ಲೆಯಲ್ಲಿ ಇಬ್ಬರು ಶಂಕಿತ ಉಗ್ರರ (Suspected Terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಉಗ್ರನನ್ನು ಎನ್​​ಐಎ ಅಧಿಕಾರಿಗಳು ವಶಕ್ಕೆ ಪಡೆದಕೊಂಡಿದ್ದಾರೆ. ಶಿವಮೊಗ್ಗ ತುಂಗಾ ನಗರ ತಟದಲ್ಲಿ ಬಂಧಿತ ಶಂಕಿತ ಉಗ್ರ ಯಾಸೀನ್ ಟ್ರಯಲ್ ಬ್ಲಾಸ್ಟ್ ಮಾಡಿದ್ದ. ಈ ಪ್ರಕರಣದ ಎ1 ಆರೋಪಿ ಶಾರೀಕ್ ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ವೇಳೆ ಸಿಕ್ಕಿಬಿದ್ದಿದ್ದ. ಸದ್ಯ NIA ಅಧಿಕಾರಿಗಳು ಶಂಕಿತ ಉಗ್ರನ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ಎಚ್ಚೆತ್ತುಕೊಳ್ಳದ ಪರಿಣಾಮ ‘ಮಂಗಳೂರು ಬಾಂಬ್ ಬ್ಲಾಸ್ಟ್’

ಕದ್ರಿ ಗೋಡೆ ಪ್ರಕರಣವನ್ನು ಎನ್​ಐಎ ಅಥವಾ ರಾಜ್ಯ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದಾಗಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣವಾಯಿತು. ಇದೇ ಗೋಡೆ ಬರಹ ಪ್ರಕರಣದ ಆರೋಪಿ ಶಾರಿಕ್ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿಯಾಗಿದ್ದಾನೆ. ಆರಂಭದಲ್ಲೇ ಶಾರಿಕ್​ನ ಎಲ್ಲ ಉಗ್ರ ಚಟುವಟಿಕೆ ಪತ್ತೆ ಮಾಡಿದ್ದಿದ್ದರೆ ಕರಾವಳಿ ಮತ್ತು ಮಲೆನಾಡಿನಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿತ್ತು. ಆದರೆ ಇದು ಸಾಧ್ಯವಾಗದ ಹಿನ್ನೆಲೆ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಭಯೋತ್ಪಾದನೆ ಚಟುವಟಿಕೆಗಳು ವ್ಯಾಪಿಸಿದೆ.

ಶಾರಿಕ್ ಮತ್ತು ಆತನ ತಂಡ ದಿನೇ ದಿನೇ ದೊಡ್ಡದಾಗಿ ಈಗ ಹೆಮ್ಮರವಾಗಿದೆ. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಪ್ರಕರಣದ ತನಿಖೆಯನ್ನು ಆಳವಾಗಿ ತಳಮಟ್ಟದಿಂದ ಬೇರು ಸಮೇತ ಉಗ್ರ ಚಟುವಟಕೆಯ ಹಿಂದಿರುವ ಶಂಕಿತರನ್ನು ಕಿತ್ತುಹಾಕಬೇಕಿದೆ.

ಇದನ್ನೂ ಓದಿ: ಪತ್ತೆಯಾಗದ ಮೋಸ್ಟ್ ವಾಂಟೆಡ್ ಉಗ್ರ ಮತೀನ್; ಮಲೆನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ

ಬಾಂಬ್​ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಪತ್ರ ರವಾನಿಸಿದ್ದ ಆರೋಪಿ ಅರೆಸ್ಟ್

ಉತ್ತರ ಕನ್ನಡ: ಬಾಂಬ್​ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಪತ್ರ ರವಾನಿಸಿದ್ದ ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ, ಭಟ್ಕಳ ಶಹರ ಠಾಣೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಹನುಮಂತಪ್ಪ ಬಂಧಿತ ಆರೋಪಿಯಾಗಿದ್ದಾನೆ. ಹನುಮಂತಪ್ಪ ಚೆನ್ನೈ ಮೂಲದ ಹೊಸಪೇಟೆ ನಿವಾಸಿಯಾಗಿದ್ದು, ಚೆನ್ನೈ ಕಲೆದಾ- ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್-25 ಎಂಡ್ ಹ್ಯಾಪಿ ನ್ಯೂ ಇಯರ್ 2023 ಬ್ಲಾಸ್ಟ್ ಎಂದು ಇಂಗ್ಲೀಷ್ ಅಕ್ಷರದಲ್ಲಿ ಪತ್ರ ಬರೆದು ರವಾನಿಸಿದ್ದನು. ಸದ್ಯ ಬಂಧಿತ ಆರೋಪಿಯನ್ನು ಚೆನ್ನೈ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಚೆನ್ನೈನಿಂದ ಭಟ್ಕಳಕ್ಕೆ ಕರೆತಂದು ತನಿಖೆ ನಡೆಸುಲು ಪೊಲೀಸರ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಡಿಫರೆಂಟ್ ಆಗಿ ಮನೆಗಳ್ಳತನ ಮಾಡುತ್ತಿದ್ದ ಟಚ್ ಗಣೇಶನನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಇಂಗ್ಲಿಷ್ ಅಕ್ಷರಗಳಲ್ಲಿ ಬರೆದ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಭಟ್ಕಳ ಪೊಲೀಸ್ ಠಾಣೆಗೆ ತಲುಪುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸೂಕ್ಷ್ಮ ಪ್ರಕರಣವನ್ನು ಸದ್ದಿಲ್ಲದೆ ತನಿಖೆ ನಡೆಸುತ್ತಿದ್ದರು. ಈ ನಡುವೆ ಇಂತಹದ್ದೇ ಬೆದರಿಕೆ ಪತ್ರ ಸಂಬಂಧ ತನಿಖೆ ನಡೆಸುತ್ತಿದ್ದ ಚೆನ್ನೈ ಪೊಲೀಸರು ಹನುಮಂತಪ್ಪನನ್ನು ಬಂಧಿಸಿದ್ದು, ಈತನೇ ಭಟ್ಕಳ ಶಹರ ಠಾಣೆಗೆ ಬೆದರಿಕೆ ಪತ್ರ ರವಾನಿಸಿರುವುದಾಗಿ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ