ಪತ್ತೆಯಾಗದ ಮೋಸ್ಟ್ ವಾಂಟೆಡ್ ಉಗ್ರ ಮತೀನ್; ಮಲೆನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ

ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಕೊಲೆಗಳ ಹಿಂದೆ ಶಂಕಿತರ ಉಗ್ರರ ಕೈವಾಡ ಇರುವುದು ಪತ್ತೆಯಾಗಿದೆ. ಹೀಗಾಗಿ ಅಂತಹ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಎನ್​ಐಎ ಹೆಗಲಿಗೆ ನೀಡಲಾಗಿದೆ.

ಪತ್ತೆಯಾಗದ ಮೋಸ್ಟ್ ವಾಂಟೆಡ್ ಉಗ್ರ ಮತೀನ್; ಮಲೆನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ
ಪತ್ತೆಯಾಗದ ಮೋಸ್ಟ್ ವಾಂಟೆಡ್ ಉಗ್ರ ಮತೀನ್; ಮಲೆನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ
TV9kannada Web Team

| Edited By: Rakesh Nayak Manchi

Nov 25, 2022 | 12:49 PM

ಶಿವವಮೊಗ್ಗ: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಕೊಲೆಗಳ ಹಿಂದೆ ಶಂಕಿತ ಉಗ್ರರ ಕೈವಾಡ ಇರುವುದು ಪತ್ತೆಯಾಗಿದೆ. ಹೀಗಾಗಿ ಅಂತಹ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಎನ್​ಐಎ ಹೆಗಲಿಗೆ ನೀಡಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ (NIA)ಕ್ಕೆ ವಹಿಸಲಾಗಿದೆ. ಪ್ರಕರಣಗಳು ಹೆಚ್ಚುತ್ತಾ ಹೋದಂತೆ ಎನ್​ಐಎ ಅಧಿಕಾರಿಗಳ ಮೇಲಿನ ಒತ್ತಡ ಹೆಚ್ಚಾಗಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಮೂರು ವರ್ಷ ಕಳೆದರೂ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಮತೀನ್​ನನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇದರಿಂದಾಗಿ ಕರಾವಳಿ ಹಾಗೂ ಶಿವಮೊಗ್ಗ ಭಾಗದಲ್ಲಿ ಉಗ್ರರ ಚಟುವಟಿಕೆ ಹೆಚ್ಚು ವ್ಯಾಪಿಸಿದ್ದು, ಜನರಲ್ಲಿ ಭೀತಿ ಉಂಟುಮಾಡಿದೆ.

ಎನ್​ಐಎಗೆ ವಹಿಸಿದ ಪ್ರಕರಣಗಳು

  • ಹರ್ಷ ಕೊಲೆ ಪ್ರಕರಣ
  • ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣ
  • ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ
  • ಶಿವಮೊಗ್ಗ ಶಂಕಿತ ಭಯೋತ್ಪಾದಕ ಪ್ರಕರಣ
  • ತೀರ್ಥಹಳ್ಳಿಯ ಮತೀನ್ ಪ್ರಕರಣ

ಎನ್​ಐಎ ಮಾದಿಯಲ್ಲಿ ರಾಜ್ಯಮಟ್ಟದ ವಿಶೇಷ ತನಿಖಾ ದಳದ ಅವಶ್ಯಕತೆ​

ಪ್ರಕರಣಗಳ ಹೆಚ್ಚಿನ ತನಿಖೆಗಾಗಿ ಎನ್​ಐಎ ವಹಿಸಿದ್ದರೂ ಅಧಿಕಾರಿಗಳು ಪ್ರಕರಣದ ಆರೋಪಿಗಳನ್ನು ಬಂಧಿಸಿರುವುದು ಕಡಿಮೆ. ಕಳೆದ ಮೂರು ವರ್ಷಗಳಿಂದ ಮತೀನ್ ಪತ್ತೆ ಮಾಡಲು ಎನ್​ಐಎ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಆತನ ಮೇಲೆ ಎನ್ಐಎ ಅಧಿಕಾರಿಗಳು ಐದು ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲೂ ಎನ್​ಐಎ ಮಾದರಿಯಲ್ಲಿ ಎಟಿಎಸ್ ಅಥವಾ ವಿಶೇಷ ತನಿಖಾ ದಳ ಅಗತ್ಯವಿದೆ. ತೆಲಂಗಾಣ, ಹೈದರಾಬಾದ್, ಮುಂಬಯಿ, ದೆಹಲಿ, ಗುಜರಾತ್ ರಾಜ್ಯಗಳಲ್ಲಿ ಭಯೋತ್ಪಾದನಾ ನಿಗ್ರಹ ದಳ ರಾಜ್ಯ ಮಟ್ಟದಲ್ಲಿವೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲೂ ಎಟಿಎಸ್ ಮಾದರಿಯಲ್ಲಿ ವಿಶೇಷ ತನಿಖಾ ದಳ ರಚನೆ ಮಾಡುವ ಅಗತ್ಯ ಇದೆ.

ಎಲ್ಲಾ ಪ್ರಕರಣಗಳನ್ನು ಎನ್​ಐಎಗೆ ವರ್ಗಾವಣೆ ಮಾಡುತ್ತಿರುವುದರಿಂದ ಭಯೋತ್ಪಾದನೆ ಚಟುವಟಕೆ ಮತ್ತು ಶಂಕಿತರನ್ನು ಪತ್ತೆಹಚ್ಚುವಲ್ಲಿ ಹಿನ್ನಡೆಯಾಗುತ್ತಿದೆ. ಮತೀನ್ ಪ್ರಕರಣ ಎನ್​ಐಎಗೆ ವಹಿಸಿ ಮೂರು ವರ್ಷಗಳು ಆಗಿವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮಲೆನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಮತೀನ್​ ಮೂಲಕ ಹೆಚ್ಚು ಭಯೋತ್ಪಾದನೆ ಚಟುವಟಿಕೆ ಆಗುವ ಭೀತಿ ಎದುರಾಗಿದೆ. ಅದಕ್ಕೆ ಉತ್ತಮ ಉದಾರಣೆ ಶಾರಿಕ್, ಮಾಜ್, ಯಾಸೀನ್, ಅರಾಫತ್ ಅಲಿ ಸೇರಿದಂತೆ ಅನೇಕ ಶಂಕಿತ ಉಗ್ರರ ಜಾಲ ಮಲೆನಾಡಿನಲ್ಲಿ ಬೇರು ಬಿಟ್ಟಿರುವುದು.

ಪೊಲೀಸರು ಎಚ್ಚೆತ್ತುಕೊಳ್ಳದ ಪರಿಣಾಮ ‘ಮಂಗಳೂರು ಬಾಂಬ್ ಬ್ಲಾಸ್ಟ್’

ಕದ್ರಿ ಗೋಡೆ ಪ್ರಕರಣವನ್ನು ಎನ್​ಐಎ ಅಥವಾ ರಾಜ್ಯ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದಾಗಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣವಾಯಿತು. ಇದೇ ಗೋಡೆ ಬರಹ ಪ್ರಕರಣದ ಆರೋಪಿ ಶಾರಿಕ್ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿಯಾಗಿದ್ದಾನೆ. ಆರಂಭದಲ್ಲೇ ಶಾರಿಕ್​ನ ಎಲ್ಲ ಉಗ್ರ ಚಟುವಟಿಕೆ ಪತ್ತೆ ಮಾಡಿದ್ದಿದ್ದರೆ ಕರಾವಳಿ ಮತ್ತು ಮಲೆನಾಡಿನಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿತ್ತು. ಆದರೆ ಇದು ಸಾಧ್ಯವಾಗದ ಹಿನ್ನೆಲೆ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಭಯೋತ್ಪಾದನೆ ಚಟುವಟಿಕೆಗಳು ವ್ಯಾಪಿಸಿದೆ. ಶಾರಿಕ್ ಮತ್ತು ಆತನ ತಂಡ ದಿನೇ ದಿನೇ ದೊಡ್ಡದಾಗಿ ಈಗ ಹೆಮ್ಮರವಾಗಿದೆ. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಪ್ರಕರಣದ ತನಿಖೆಯನ್ನು ಆಳವಾಗಿ ತಳಮಟ್ಟದಿಂದ ಬೇರು ಸಮೇತ ಉಗ್ರ ಚಟುವಟಕೆಯ ಹಿಂದಿರುವ ಶಂಕಿತರನ್ನು ಕಿತ್ತುಹಾಕಬೇಕಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada