ಡಿಫರೆಂಟ್ ಆಗಿ ಮನೆಗಳ್ಳತನ ಮಾಡುತ್ತಿದ್ದ ಟಚ್ ಗಣೇಶನನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಸಣ್ಣ ಪುಟ್ಟ ಐಟಂ ನಿಂದ ಹಿಡಿದು ಯಾವುದೇ ದೊಡ್ಡ ಮಾಲು ಸಿಕ್ಕಿದ್ರು ಬಿಡಲ್ಲ ಈ ನಟೋರಿಯಸ್ ಮನೆಗಳ್ಳ ಗಣೇಶ್ ಅಲಿಯಾಸ್ ಟಚ್ ಗಣೇಶ್. ಸದ್ಯ ಕೋಣನಕುಂಟೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತನ ಕಳ್ಳತನದ ಹಿಸ್ಟರಿ ಕೇಳಿದ್ರೆ ಆಶ್ಚರ್ಯವಾದಿತು.

ಡಿಫರೆಂಟ್ ಆಗಿ ಮನೆಗಳ್ಳತನ ಮಾಡುತ್ತಿದ್ದ ಟಚ್ ಗಣೇಶನನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಆರೋಪಿ ಟಚ್ ಗಣೇಶ್ ಮತ್ತು ಈತನಿಂದ ವಶಕ್ಕೆ ಪಡೆದ ವಸ್ತುಗಳು
Follow us
| Updated By: Rakesh Nayak Manchi

Updated on:Jan 05, 2023 | 2:47 PM

ಬೆಂಗಳೂರು: ಮನೆಗಳಿಗೆ ಕನ್ನ (House burglary) ಹಾಕುತ್ತಿದ್ದ ನಟೋರಿಯಸ್ ಮನೆಗಳ್ಳನನ್ನು ನಗರದ ಕೋಣನಕುಂಟೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟೋರಿಯಸ್ ಮನೆಗಳ್ಳ ಗಣೇಶ್ ಅಲಿಯಾಸ್ ಟಚ್ ಗಣೇಶ್ ಬಂಧಿತ ಆರೋಪಿಯಾಗಿದ್ದಾನೆ. ಬೀಗ ಹಾಕಿರೋ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತ್ತಿದ್ದ ಈತನಿಂದ ಪೊಲೀಸರು 500 ಗ್ರಾಂ ತೂಕದ ಚಿನ್ನಾಭರಣ‌ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ. ಟಚ್ ಗಣೇಶ ಮಾಡುತ್ತಿದ್ದ ಕಳ್ಳತನದ ಹಿಂದೆ ಮಾಸ್ಟರ್ ಪ್ಲಾನ್ ಕೂಡ ಇದೆ. ಈ ಮಾಸ್ಟರ್ ಪ್ಲಾನ್ ಕೊಂಚ ಡಿಫರೆಂಟ್ ಆಗಿದೆ.

ಅತ್ಯಂತ ನಟೋರಿಸಯ್ ಕಳ್ಳನಾಗಿರುವ ಈ ಟಚ್ ಗಣೇಶ, ಸಣ್ಣ ಪುಟ್ಟ ಐಟಂ ನಿಂದ ಹಿಡಿದು ಯಾವುದೇ ದೊಡ್ಡ ಮಾಲು ಸಿಕ್ಕಿದರೂ ಬಿಡುವುದಿಲ್ಲ. ಈತ ಬರೋಬ್ಬರಿ 25ಕ್ಕೂ ಹೆಚ್ಚು ಮನೆಗಳಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿದ್ದು, ಈತನ ಮೇಲೆ 18 ಪ್ರಕರಣಗಳು ದಾಖಲಾಗಿವೆ. ಮನೆಗಳ್ಳತನಕ್ಕೂ ಮುನ್ನ ಆರೋಪಿ ಕಾರ್ ಮೂಲಕ ರೌಂಡ್ ಹಾಕುತ್ತಾನೆ. ಅದರಂತೆ ತನ್ನ ಕಣ್ಣಿಗೆ ಮನೆಯಲ್ಲಿ ಯಾರು ಇಲ್ಲದಿರುವುದು ಕಂಡರೆ ಆ ಮನೆಯನ್ನೇ ಟಾರ್ಗೆಟ್ ಮಾಡುತ್ತಿದ್ದನು.

ಇದನ್ನೂ ಓದಿ: ಶಾಲಾ ಶಿಕ್ಷಕನ ಪುತ್ರ ಅಪಹರಣ: ತಕ್ಷಣ ಕಾರ್ಯಾಚರಣೆಗೆ ಇಳಿದ ಕಲಬುರ್ಗಿ ಇನ್ಸ್ ಪೆಕ್ಟರ್, ಮುಂದೇನಾಯ್ತು?

ಈ ಟಚ್ ಗಣೇಶನ ಕಳ್ಳತನ‌ ಕಹಾನಿಯೇ ಡಿಫರೆಂಟ್ ಆಗಿದೆ. ಹೈಫೈ ಮನೆಗಳ ಸಹವಾಸಕ್ಕೆ ಹೋಗುತ್ತನೇ ಇರಲಿಲ್ಲ. ಇದಕ್ಕೆ ಕಾರಣ ದೊಡ್ಡ ಮನೆಗಳಿಗೆ ಹೋದರೆ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತದೆ. ಮದ್ಯಮವರ್ಗ, ಬಡವರ ಮನೆ ಬಿಡುತ್ತಲೇ ಇರಲಿಲ್ಲ. ಮನೆಗಳಿಗೆ ನುಗ್ಗುವ ಮುನ್ನ ಮನೆಗಳ ಮುಂದೆ ಧೂಳು ಇದೆಯಾ ಎಂದು ನೋಡುತ್ತಾನೆ. ಯಾಕಂದರೆ ಪೇಪರ್ ಮತ್ತು ಹಾಲು ಹಾಕಿಸಲ್ಲ, ಮನೆಯವರು ಇಲ್ಲ ಎಂದು ಈತ ತಿಳಿದುಕೊಳ್ಳುತ್ತಾನೆ.

ಮನೆಗಳ್ಳತನಕ್ಕೂ ಮುನ್ನ ರಂಗೋಲಿ ಪರಿಶೀಲನೆ

ರಂಗೋಲಿ ಹಾಕದೆ ಇರುವ ಮನೆ, ರಂಗೋಲಿ ಹೆಚ್ಚು ಅಳಸಿರುವ ಮನೆಗಳನ್ನ ಕೂಡ ಈತ ಟಾರ್ಗೆಟ್ ಮಾಡುತ್ತಿದ್ದನು. ಒಮ್ಮೆ ಮನೆಗೆ ಹೋದರೆ ಟಿವಿ, ಚಿನ್ನ, ಬೆಳ್ಳಿ ಏನನ್ನೂ ಬಿಡದೆ ದೋಚಿ ಪರಾರಿಯಾಗುತ್ತಿದ್ದನು. ಹೀಗೆ ಒಂದು ದಿನ ಮನೆಗೆ ನುಗ್ಗಿದಾಗ ಕಾರು ಕೀ ಸಿಕ್ಕಿದೆ, ಅದರಂತೆ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೇ ಕದ್ದು ತಂದಿದ್ದನು.

ಇದನ್ನೂ ಓದಿ: ವೇಲ್ಸ್ ನ ಬೆರ್ವಿನ್ ಕಾರಾಗೃಹದಲ್ಲಿನ ಕೈದಿಗಳೊಂದಿಗೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದ ಮೂವರು ಮಹಿಳಾ ಗಾರ್ಡ್​ಗಳಿಗೆ ಸೆರೆವಾಸದ ಶಿಕ್ಷೆ!

ಈತನ ವಿರುದ್ಧ ಜ್ಞಾನಭಾರತಿ, ಆರ್.ಆರ್.ನಗರ, ವಿದ್ಯಾರಣ್ಯಪುರ ಸೇರಿ ಒಟ್ಟು 18 ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಈತ ಮತ್ತೆ ಮೊದಲಿನ ಛಾಳಿಯನ್ನೇ ಮುಂದುವರಿಸಿದ್ದಾನೆ. ಸದ್ಯ ಕೋಣನಗುಂಟೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 3 ಕೆಜಿ ಬೆಳ್ಳಿ ವಸ್ತುಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವಸ್ತುಗಳಲ್ಲಿ ಬೆಳ್ಳಿಯ ಲಕ್ಷ್ಮಿ ಮುಖವಾಡವೂ ಪತ್ತೆಯಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Thu, 5 January 23

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ