ವೇಲ್ಸ್ ನ ಬೆರ್ವಿನ್ ಕಾರಾಗೃಹದಲ್ಲಿನ ಕೈದಿಗಳೊಂದಿಗೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದ ಮೂವರು ಮಹಿಳಾ ಗಾರ್ಡ್ಗಳಿಗೆ ಸೆರೆವಾಸದ ಶಿಕ್ಷೆ!
ಏಪ್ರಿಲ್ 2022 ರಿಂದ ಜುಲೈ 2022 ರವರೆಗೆ ಕೈದಿಗಳೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡಿದ್ದನ್ನು ಗಾವನ್ ಅಂಗೀಕರಿಸಿದ್ದಾಳೆ, ಎಂದು ಬರ್ಮಿಂಗ್ ಹ್ಯಾಮ್ ಲೈವ್ ವರದಿ ಮಾಡಿದೆ. 25-ವರ್ಷ-ವಯಸ್ಸಿನ ಅಲೆಕ್ಸ್ ಕಾಕ್ಸನ್ ಎಂಬ ಕೈದಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಆಕೆಯ ಮೇಲಿದೆ.
ಯುಕೆಯ ಜೈಲುಗಳಲ್ಲಿ ಅದರಲ್ಲೂ ವಿಶೇಷವಾಗಿ ಪುರುಷ ಕೈದಿಗಳನ್ನು (male inmates) ಇಡುವ ಬಂಧಿಖಾನೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ನೇಮಕ ಮಾಡುವುದು ಸರಿಯೋ ತಪ್ಪೋ ಅಂತ ಯುಕೆಯಲ್ಲಿ ಚರ್ಚೆ ಶುರುವಾದರೆ ಆಶ್ಚರ್ಯಪಡಬೇಕಿಲ್ಲ ಮಾರಾಯ್ರೇ. ಮಹಿಳಾ ಸಿಬ್ಬಂದಿ ಪುರುಷ ಕೈದಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪ್ರಕರಣಗಳು ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಉದ್ಭವಿಸಿದೆ. ವೇಲ್ಸ್ ನ ರೆಕ್ಸಾಮ್ ನಲ್ಲಿರುವ ಬೆರ್ವಿನ್ ಕಾರಾಗೃಹ (Wales’ Berwyn Prison) ಯುಕೆಯ ಅತಿದೊಡ್ಡ ಜೈಲು ಎಂಬ ಖ್ಯಾತಿ ಹೊಂದಿದೆ. ಅಲ್ಲಿ ಗಾರ್ಡ್ ಗಳಾಗಿ (guards) ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಜೈಲಿನ ಪುರುಷ ಕೈದಿಗಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಅಪರಾಧದಲ್ಲಿ ಜೈಲು ಶಿಕ್ಷೆಗೆ ಗುರಿಮಾಡಲಾಗಿದೆ. ಅವರನ್ನು ಜೆನ್ನಿಫರ್ ಗಾವನ್ 27, ಐಶಿಯಾ ಗುನ್ 27, ಮತ್ತು ಎಮಿಲಿ ವ್ಯಾಟ್ಸನ್ 26 ಅಂತ ಗುರುತಿಸಲಾಗಿದೆ. ಭ್ರಷ್ಟಾಚಾರ ನಿರೋಧ ಸಂಸ್ಥೆಯು ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ತನಿಖೆ ಆರಂಭಿಸಿದೆ.
ಲಂಚವನ್ನೂ ಸ್ವೀಕರಿಸಿದ್ದರು!
ಏಪ್ರಿಲ್ 2022 ರಿಂದ ಜುಲೈ 2022 ರವರೆಗೆ ಕೈದಿಗಳೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡಿದ್ದನ್ನು ಗಾವನ್ ಅಂಗೀಕರಿಸಿದ್ದಾಳೆ, ಎಂದು ಬರ್ಮಿಂಗ್ ಹ್ಯಾಮ್ ಲೈವ್ ವರದಿ ಮಾಡಿದೆ. 25-ವರ್ಷ-ವಯಸ್ಸಿನ ಅಲೆಕ್ಸ್ ಕಾಕ್ಸನ್ ಎಂಬ ಕೈದಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಆಕೆಯ ಮೇಲಿದೆ. ಜೈಲಿನಲ್ಲಿ ಫೋನ್ ಬಳಸಲು ಅಲೆಕ್ಸ್ ನಿಂದ ಲಂಚದ ರೂಪದಲ್ಲಿ £150 ಪಡೆದ ಮತ್ತು ಅವನೊಂದಿಗೆ ಪೋನಲ್ಲಿ ಮಾತಾಡಿದ ಆರೋಪಗಳನ್ನು ಸಹ ಗಾವನ್ ಎದುರಿಸುತ್ತಿದ್ದಾಳೆ.
ಬೆರ್ವಿನ್ ಹೆಚ್ ಎಮ್ ಪಿ ಜೈಲಿನ ಕೆಲ ಉದ್ಯೋಗಿಗಳು ಗಾವನ್ ಪರ ಮಾತಾಡುತ್ತಿರುವುದು ಮತ್ತು ಬೇರೆ ಉದ್ಯೋಗಿಗಳನ್ನು ಕುರಿತು ಟೀಕೆ ಮಾಡುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಇದು ಬಹಳ ಗಂಭೀರವಾದ ಸಂಗತಿ ಮತ್ತು ಕೂಡಲೇ ಜೈಲು ಅಧಿಕಾರಿಗಳು ಹಾಗೂ ಪ್ರಾಧಿಕಾರದ ಗಮನಕ್ಕೆ ತರುವ ಅವಶ್ಯಕತೆಯಿದೆ’ ಎಂದು ನ್ಯಾಯಾಧೀಶರಾದ ನಿಕ್ಲಾಸ್ ಪ್ಯಾರಿ ಹೇಳಿದ್ದಾರೆ.
ಕುರಮ್ ರಜಾಕ್ನೊಂದಿಗೆ ಸಂಬಂಧ!
ಎರಡನೇ ಆರೋಪಿ ಗುನ್, ದರೋಡೆಗೆ ಸಂಚು ರೂಪಿಸಿದ ಮತ್ತು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿರುವ 29-ವರ್ಷ-ವಯಸ್ಸಿನ ಕುರಮ್ ರಜಾಕ್ನೊಂದಿಗೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದ ಆರೋಪ ಎದುರಿಸುತ್ತಿದ್ದಾಳೆ. ಹಾಗೆಯೇ, ವ್ಯಾಟ್ಸನ್ ಹೆಸರಿನ ಗಾರ್ಡ್ ಜಾನ್ ಮ್ಯಾಕ್ ಗೀ ಹೆಸರಿನ ಕೈದಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಆರೋಪಕ್ಕೊಳಗಾಗಿದ್ದಾಳೆ.
ಜೈಲು ಸೇವೆಗಳ ಬಾತ್ಮೀದರೊಬ್ಬರು, ‘ಜೈಲು ಸಿಬ್ಬಂದಿಯ ಹೆಚ್ಚಿನ ಭಾಗ ಶ್ರಮವಹಿಸಿ ಮತ್ತು ಬದ್ಧತೆಯೊಂದಿಗೆ ಕೆಲಸ ಮಾಡುತ್ತಾರೆ. ಆದರೆ, ನಿಯಾಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಳೆದ 18 ತಿಂಗಳ ಆವಧಿಯಲ್ಲಿ ಹೆಚ್ ಎಮ್ ಪಿ ಬೆರ್ವಿನ್ ಜೈಲಿನ 500 ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಭ್ರಷ್ಟಾಚಾರ ನಿರೋಧ ತರಬೇತಿಯನ್ನು ಪಡೆದಿದೆ. ಅಲ್ಲದೆ ಜೈಲಿನಲ್ಲಿ ಭಧ್ರತೆಯನ್ನು ಹೆಚ್ಚಿಸಿರುವುದರಿಂದ ಹೊರಗಿನಿಂದ ಯಾವುದೇ ವಸ್ತುವನ್ನು ಒಳತರುವುದು ದುಸ್ಸಾಧ್ಯ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru Covid19 Updates: ವಿದೇಶದಿಂದ ಬೆಂಗಳೂರಿಗೆ ಬಂದ 3 ಪ್ರಯಾಣಿಕರಿಗೆ ಕೊರೊನಾ ಸೋಂಕು
ಜೈಲು ಸಿಬ್ಬಂದಿಯನ್ನು ಪ್ರತಿ 10 ವರ್ಷಗಳಿಗೊಮ್ಮೆ ಸಮಗ್ರ ತನಿಖೆಗೊಳಪಡಿಸಲಾಗುತ್ತದೆ, ಹೆಚ್ಚು ರಿಸ್ಕ್ ಗಳಲ್ಲಿ ಕೆಲಸ ಮಾಡುವ ಆಧಿಕಾರಿಗಳ ಸೇವೆಯನ್ನು ಸೋಶಿಯಲ್ ಮಿಡಿಯಾ ಚೆಕ್ ಗಳಿಗೆ ಒಳಪಡಿಸಲಾಗುತ್ತದೆ. ಜೈಲು ಸೇವೆಗಳ ಪ್ರಾಧಿಕಾರವು ವೇಲ್ಸ್ ಹೆಚ್ ಎಮ್ ಪಿ ಬೆರ್ವಿನ್ ಜೈಲಿನ ತಪಾಸಣೆ ಇತ್ತೀಚಿಗೆ ನಡೆಸಿ ಭದ್ರತಾ ವ್ಯವಸ್ಥೆ ಸರಿಯಾಗಿದೆ ಅಂತ ಹೇಳಿತ್ತು.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ