ಸೆನ್ಸೇಷನಲ್ ಕ್ರೈಮ್ ಕತೆಗಳು: ಎರಡು ವರ್ಷಗಳ ಹಿಂದೆ ನಡೆದ ನಿಕಿತಾ ತೋಮರ್ ಕೊಲೆ ಲವ್-ಜಿಹಾದ್​ನ ಭಾಗವಾಗಿತ್ತು ಎನ್ನುತ್ತದೆ ಅವಳ ಕುಟುಂಬ!

ನಿಕಿತಾಳ ಕುಟುಂಬ ಅದು ಲವ್ ಜಿಹಾದ್ ಪ್ರಕರಣ ಎಂದು ಮಾಧ್ಯಮಗಳ ಮುಂದೆ ಹೇಳಿದೆ. ತೌಸೀಫ್ ಹರಿಯಾಣದಲ್ಲಿ ಒಂದು ಪ್ರಭಾವಿ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಹರಿಯಾಣ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕನಾಗಿರುವ ಅಫ್ತಾಬ್ ಆಲಮ್ ತೌಸೀಫ್ ನ ಚಿಕ್ಕಪ್ಪ.

ಸೆನ್ಸೇಷನಲ್ ಕ್ರೈಮ್ ಕತೆಗಳು: ಎರಡು ವರ್ಷಗಳ ಹಿಂದೆ ನಡೆದ ನಿಕಿತಾ ತೋಮರ್ ಕೊಲೆ ಲವ್-ಜಿಹಾದ್​ನ ಭಾಗವಾಗಿತ್ತು ಎನ್ನುತ್ತದೆ ಅವಳ ಕುಟುಂಬ!
ಹಂತಕರು ಮತ್ತು ನಿಕಿತಾ ತೋಮರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2022 | 7:57 AM

ನಿಕಿತಾ ತೋಮರ್ (Nikita Tomar,) ಕೊಲೆ ಪ್ರಕರಣ ನಿಮಗೆ ನೆನಪಿರಬಹುದು. ಯಾಕೆಂದರೆ ಇದು ನಡೆದಿದ್ದು ಕೇವಲ ಎರಡು ವರ್ಷಗಳ ಹಿಂದೆ. ಮತ್ತಷ್ಟು ಸಷ್ಟವಾಗಿ ಹೇಳಬಹುದು ಅಂತಾದ್ರೆ ನಿನ್ನೆಗೆ ಅಂದರೆ ಅಕ್ಟೋಬರ್ 27ಕ್ಕೆ ನಿಕಿತಾಳ ಕೊಲೆ ನಡೆದು ಸರಿಯಾಗಿ ಎರಡು ವರ್ಷಗಳು ಸಂದವು. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ಹಾಡು ಹಗಲೇ ಕಾಲೇಜಿನ ಆವರಣದಲ್ಲಿ ನಡೆದ ನಿಕಿತಾಳ ಕೊಲೆ ಪ್ರಕರಣವನ್ನು ನಿಮಗೆ ಹೇಳುತ್ತೇವೆ. ಅಕ್ಟೋಬರ್ 27, 2020 ರಂದು, 21-ವರ್ಷ ವಯಸ್ಸಿನವಳಾಗಿದ್ದ ನಿಕಿತಾ ಹರಿಯಾಣದ ಫರೀದಾಬಾದ್ ಜಿಲ್ಲೆ ಬಲ್ಲಬ್ ಗಡ್ ನಲ್ಲಿರುವ ಅಗರವಾಲ್ ಕಾಲೇಜಿನಲ್ಲಿ (Agarwal college) ಪರೀಕ್ಷೆ ಬರೆದು ಹೊರಬಂದಾಗ, ಕಾಲೇಜ್ ನ ಆವರಣಕ್ಕೆ ಕಾರೊಂದು ನುಗ್ಗಿ ಅದರಲ್ಲಿದ್ದ ಇಬ್ಬರು ಯುವಕರ ಪೈಕಿ ಒಬ್ಬ ಕೆಳಗಿಳಿದು ಅವಳನ್ನು ಬಲವಂತವಾಗಿ ಕಾರಲ್ಲಿ ನೂಕುವ ಪ್ರಯತ್ನ ಮಾಡುತ್ತಾನೆ. ಅವಳು ಪ್ರತಿಭಟಿಸಿದಾಗ ಅವನು ತೀರ ಹತ್ತಿರದಿಂದ (ಪಾಯಿಂಟ್ ಬ್ಲ್ಯಾಂಕ್ ರೇಂಜ್) (point-blank range) ಅವಳ ಮೇಲೆ ಗುಂಡು ಹಾರಿಸುತ್ತಾನೆ. ಅವಳು ‘ಮಾss…’ ಎಂದು ಚೀತ್ಕರಿಸುತ್ತಾ ನೆಲಕ್ಕುರುಳುತ್ತಾಳೆ.

ಈ ಭಯಾನಕ ಕೃತ್ಯ ಕಾಲೇಜು ಕ್ಯಾಂಪಸ್ ನಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ನಿಕಿತಾಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವಳು ಬದುಕುಳಿಯಲಿಲ್ಲ. ನಿಕಿತಾಳ ಕೊಲೆ ಕೇವಲ ಫರೀದಾಬಾದ್ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಪ್ರಕ್ಷುಬ್ದ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಕಾಲೇಜು ವಿದ್ಯಾರ್ಥಿಗಳು ನಿಕಿತಾಗೆ ಕೂಡಲೇ ನ್ಯಾಯ ಸಿಗಬೇಕು ಮತ್ತು ಕೊಲೆಗಡುಕರನ್ನು ಗಲ್ಲಿಗೇರಿಸಬೇಕೆಂದು ಪ್ರದರ್ಶನಗಳನ್ನು ನಡೆಸಿದರು.

ನಿಕಿತಾಳನ್ನು ಕೊಂದಿದ್ದು ಅವಳಿಗೆ ಪರಿಚಯದವನೇ ಆಗಿದ್ದ ತೌಸೀಫ್ ಹೆಸರಿನ ಯುವಕ. ಅವರ ನಡುವೆ ಪ್ರೇಮ ಸಂಬಂಧವಿರಲಿಲ್ಲ. ಆದರೆ ಗೆಳೆತನಕ್ಕಾಗಿ ತೌಸೀಫ್ ಹಾತೊರೆಯುತ್ತಿದ್ದ.

ನಿಕಿತಾಳ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಹೇಳುವ ಹಾಗೆ ತೌಸೀಫ್, ನಿಕಿತಾಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಅವಳನ್ನು ಮದುವೆಯಾಗಬೇಕೆಂಬ ಯೋಚನೆಯಲ್ಲಿದ್ದ. ಅದೇ ಹಿನ್ನೆಲೆಯಲ್ಲಿ ನಿಕಿತಾ ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದಳಂತೆ! ಅವಳು ಮತಾಂತರಗೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿದಾಗ ತೌಸೀಫ್ ತನ್ನ ಗೆಳೆಯ ರೆಹಾನ್ ನೆರವಿನೊಂದಿಗೆ ಅಪಹರಿಸುವ ಪ್ರಯತ್ನ ಮಾಡಿದ.

ಕೊಲೆ ನಡೆಯುವ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆಗಡುಕ ತೌಸೀಫ್ ಕಾರಿನಿಂದ ಹೊರಬಂದು ತನ್ನ ಜೇಬಿಂದ ಪಿಸ್ಟಲನ್ನು ಹೊರಗೆಳೆಯುತ್ತಾನೆ. ಅವನನ್ನು ನೋಡಿದ ಕೂಡಲೇ ನಿಕಿತಾ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಅವಳ ಬೆನ್ನಟ್ಟುವ ತೌಸೀಫ್ ಹಿಡಿದು ಕಾರೊಳಗಡೆ ನೂಕಲು ಪ್ರಯತ್ನಿಸುತ್ತಾನೆ. ಅವಳು ಪ್ರತಿಭಟಿಸುವುದು ಜಾಸ್ತಿಯಾದಾಗ ಅವನು ತೀರಾ ಸನಿಹದಿಂದ ಅವಳ ಮೇಲೆ ಗುಂಡು ಹಾರಿಸುತ್ತಾನೆ.

ನಿಕಿತಾ ನೆಲಕ್ಕುರುಳಿದ ಕೂಡಲೇ ಎಲ್ಲವನ್ನೂ ಹತ್ತಿರದಿಂದಲೇ ವೀಕ್ಷಿಸುತ್ತಿದ್ದ ಗೆಳತಿಯೊಬ್ಬಳು ಅವಳೆಡೆ ಧಾವಿಸುತ್ತಾಳೆ. ಇತ್ತ ರೆಹಾನ್ ಕಾರಿನಿಂದ ಹೊರಬಂದು ತೌಸೀಫ್ ನನ್ನು ಕಾರಿನತ್ತ ಎಳೆದುಕೊಂಡು ಹೋಗಿ ವಾಹನದೊಳಗೆ ಅವನನ್ನು ದಬ್ಬಿ ಎಂಜಿನ್ ಸ್ಟಾರ್ಟ್ ಮಾಡಿ ಮಿಂಚಿನ ವೇಗದಲ್ಲಿ ಪರಾರಿಯಾಗುತ್ತಾನೆ.

ಆದರೆ ಸಿಸಿಟಿವಿ ಫುಟೇಜ್ ನೆರವಿನಿಂದ ಅವರಿಬ್ಬರನ್ನು ಬಂಧಿಸುವುದು ಪೊಲೀಸರಿಗೆ ಕಷ್ಟವೇನೂ ಆಗುವುದಿಲ್ಲ. ಫರೀದಾ ಬಾದ್ ಕೋರ್ಟ್ ತೌಸೀಫ್ ಮತ್ತು ರೆಹಾನ್ ಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಿದೆ.

ನಿಕಿತಾಳ ಕುಟುಂಬ ಅದು ಲವ್ ಜಿಹಾದ್ ಪ್ರಕರಣ ಎಂದು ಮಾಧ್ಯಮಗಳ ಮುಂದೆ ಹೇಳಿದೆ. ತೌಸೀಫ್ ಹರಿಯಾಣದಲ್ಲಿ ಒಂದು ಪ್ರಭಾವಿ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಹರಿಯಾಣ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕನಾಗಿರುವ ಅಫ್ತಾಬ್ ಆಲಮ್ ತೌಸೀಫ್ ನ ಚಿಕ್ಕಪ್ಪ.

1975 ರಲ್ಲಿ ರಾಜ್ಯದ ನೂಹ್ ಕ್ಷೇತ್ರದಿಂದ ಕಾಂಗ್ರೆಸ್ ಟಕೆಟ್ ನಿಂದ ಅಸೆಂಬ್ಲಿಗೆ ಆಯ್ಕೆಯಾಗಿದ್ದ ಕಬೀರ್ ಖಾನ್ ಅವನ ತಾತ. ಈಗಾಗಲೇ ನಿಧನ ಹೊಂದಿರುವ ಖುರ್ಷೀದ್ ಅಹ್ಮದ್ ತೌಸೀಫ್ ನ ಮತ್ತೊಬ್ಬ ಚಿಕ್ಕಪ್ಪ ಮತ್ತು ಲೋಕ ಸಭಾ ಸದಸ್ಯರಾಗಿದ್ದರು. ಇವರ ಮಗ ಮತ್ತು ತೌಸೀಫ್ ನ ಕಸಿನ್ ಅಫ್ತಾಬ್ ಅಹ್ಮದ್ ಸಹ ಶಾಸಕರಾಗಿದ್ದಾರೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್