Bengaluru Covid19 Updates: ವಿದೇಶದಿಂದ ಬೆಂಗಳೂರಿಗೆ ಬಂದ 3 ಪ್ರಯಾಣಿಕರಿಗೆ ಕೊರೊನಾ ಸೋಂಕು
ಬೆಂಗಳೂರಿಗೆ ಮತ್ತೆ ಕೊರೊನಾ(Corona) ಆತಂಕ ಎದುರಾಗಿದ್ದು, ವಿದೇಶದಿಂದ ಬರುವ ಪ್ರಯಾಣಿಕರು ಕೊರೊನಾವನ್ನು ಹೊತ್ತು ತರುವ ಸಾಧ್ಯತೆ ಹೆಚ್ಚಿದೆ
ಬೆಂಗಳೂರಿಗೆ ಮತ್ತೆ ಕೊರೊನಾ(Corona) ಆತಂಕ ಎದುರಾಗಿದ್ದು, ವಿದೇಶದಿಂದ ಬರುವ ಪ್ರಯಾಣಿಕರು ಕೊರೊನಾವನ್ನು ಹೊತ್ತು ತರುವ ಸಾಧ್ಯತೆ ಹೆಚ್ಚಿದೆ. ವಿದೇಶದಿಂದ ಬೆಂಗಳೂರಿಗೆ ಬಂದ 3 ಮಂದಿ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಜನವರಿ ಮಧ್ಯಭಾಗದ ವೇಳೆಗೆ ಕೊರೊನಾ 4ನೇ ಅಲೆ ಬರುವ ಸಾಧ್ಯತೆ ಇದೆ.
ಈಗಾಗಲೇ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ದೇಶದಿಂದ ಭಾರತಕ್ಕೂ ಜನರು ಭೇಟಿ ನೀಡಬಹುದು, ಅದರಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು ಎನ್ನುವ ಆತಂಕ ಮನೆಮಾಡಿದೆ.ಹೀಗಾಗಿ ಕೊರೊನಾ ಸೋಂಕು ಹೆಚ್ಚಿರುವ ದೇಶಗಳ ಪ್ರಯಾಣಿಕರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ಮಾಡಬೇಕು ಎಂದು ತಜ್ಞರು ಹೇಳುತ್ತಿದ್ದಾರೆ.
ಸದ್ಯಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಶೇ. 2ರಷ್ಟು ಪ್ರಯಾಣಿಕರಿಗೆ ಕೊವಿಡ್ ಪರೀಕ್ಷೆ ಮಾಡಲಾಡಗುತ್ತಿದೆ. ಶೇ. 2ರಷ್ಟು ರ್ಯಾಂಡಮ್ ಕೊವಿಡ್ ಪರೀಕ್ಷೆಯನ್ನ ಕನಿಷ್ಠ 10% ಆದ್ರೂ ಮಾಡುವಂತೆ ಮನವಿ ಮಾಡಲಾಗುತ್ತಿದೆ.
1- ಅಬುದಾಬಿ 1- ದುಬೈ 1- ಹಾಕಾಂಗ್ ನಿಂದ ಬಂದ ಮೂವರಿಗೆ ಸೋಂಕು ರ್ಯಾಂಡಮ್ ಚೆಕ್ ನಲ್ಲಿ ಮೂವರಿಗೆ ಸೋಂಕು ದೃಡ. ಮೂವರಲ್ಲಿ ಇಬ್ಬರು ಬೆಂಗಳೂರು ನಗರದವರು, ಇನ್ನೊರ್ವ ಜಮ್ಮುಕಾಶ್ಮೀರಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಧಿಕಾರಿಗಳಿಂದ ಸೊಂಕಿತನ ಪತ್ತೆಗೆ ಕಾರ್ಯ ಮುಂದುವರೆದಿದೆ.
ಶೇ. 2ರಷ್ಟು ರ್ಯಾಂಡಮ್ ಕೊವಿಡ್ ಟೆಸ್ಟ್ ತುಂಬಾ ಕಡಿಮೆ ಸದ್ಯ ರಾಜ್ಯಕ್ಕೆ ಅಂತಾರಾಷ್ಟ್ರೀಯ ಪ್ರಯಾಣಿಕರಿಂದಲೇ ಆತಂಕ ಹೆಚ್ಚಿದೆ. ಅವರಿಂದಲೇ ಹೊಸ ವೈರಸ್ ಹರಡುವ ಸಾಧ್ಯತೆ ಇದೆ. ಹೀಗಾಗಿ ಕೊವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:27 am, Thu, 29 December 22