AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Election 2023: ತಮ್ಮ ಸಾಧನೆ ತಿಳಿಸಲು ಮನೆ ಮನೆಗೆ ಸಂಪರ್ಕ ಅಭಿಯಾನಕ್ಕೆ ಮುಂದಾದ ಬಿಜೆಪಿ

ಜ.21ರಿಂದ ಜ.29ರವರೆಗೆ ರಾಜ್ಯದಲ್ಲಿ ಮನೆ ಮನೆಗೆ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ಮುಂದಾಗಿದ್ದು ಅಭಿಯಾನದ ಸಂಚಾಲಕರಾಗಿ ಡಾ.ಅಶ್ವತ್ಥ್ ನಾರಾಯಣ ನೇಮಕಗೊಂಡಿದ್ದಾರೆ.

Karnataka Assembly Election 2023: ತಮ್ಮ ಸಾಧನೆ ತಿಳಿಸಲು ಮನೆ ಮನೆಗೆ ಸಂಪರ್ಕ ಅಭಿಯಾನಕ್ಕೆ ಮುಂದಾದ ಬಿಜೆಪಿ
ಬಿಜೆಪಿ ಚಿಹ್ನೆ
TV9 Web
| Edited By: |

Updated on:Dec 29, 2022 | 8:54 AM

Share

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಕೇವಲ ಮೂರು-ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಬಿಜೆಪಿ ಕೂಡ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಕುರಿತಾಗಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ರಾಜ್ಯ ಬಿಜೆಪಿ ಮುಂದಾಗಿದೆ.

ಜ.21ರಿಂದ ಜ.29ರವರೆಗೆ ರಾಜ್ಯದಲ್ಲಿ ಮನೆ ಮನೆಗೆ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ಮುಂದಾಗಿದ್ದು ಅಭಿಯಾನದ ಸಂಚಾಲಕರಾಗಿ ಡಾ.ಅಶ್ವತ್ಥ್ ನಾರಾಯಣ ನೇಮಕಗೊಂಡಿದ್ದಾರೆ. ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಸಚಿವ ಡಾ‌.ಅಶ್ವತ್ಥ್ ನಾರಾಯಣ, ಎಂಎಲ್ಸಿ ಡಿ.ಎಸ್.ಅರುಣ್, ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಭಾಗಿಯಾಗಿದ್ದರು.

2 ಕೋಟಿ ಮನೆಗಳ ಸಂಪರ್ಕ, 2 ಕೋಟಿ ವಾಹನಗಳ ಮೇಲೆ ಸ್ಟಿಕ್ಕರ್, ಜನವರಿಯಲ್ಲಿ 50 ಸಾವಿರ ಸ್ಥಳಗಳಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಜೋಡಣೆಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಬೂತ್ ಮಟ್ಟದಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಗುರುತಿಸಿ ಡಬಲ್ ಎಂಜಿನ್ ಸರ್ಕಾರದ ಯೋಜನೆಗಳನ್ನ ನಿರೂಪಿಸಲು ಸೂಚಿಸಲಾಗಿದೆ. ಜ.7, 8ರಂದು ಜಿಲ್ಲಾ ಕೇಂದ್ರ, ಜ.12, 13ರಂದು ಮಂಡಲ ಮಟ್ಟದಲ್ಲಿ, ಜನವರಿ 17, 18, 19ರಂದು ಬೂತ್ ಮಟ್ಟದಲ್ಲಿ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೂಚಿಸಿದ್ದಾರೆ.

ಇದನ್ನೂ ಓದಿ: Covid Alert: ಚೀನಾದಿಂದ ಬರುವ ಪ್ರಯಾಣಿಕರಿಗೆ ಅಮೆರಿಕದಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯ

ಬೆಂಗಳೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ

ಕೇಂದ್ರ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ವಿಚಾರಕ್ಕೆ ಸಂಬಂಧಿಸಿ ಡಿ.30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಹಕಾರ ವಲಯದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಕಾರ್ಯಕ್ರಮ ಇದಾಗಿದ್ದು ಸಮಾವೇಶದಲ್ಲಿ ಯಶಸ್ವಿನಿ ಯೋಜನೆಗೆ ಅಮಿತ್ ಶಾ ಮರು ಚಾಲನೆ ನೀಡಲಿದ್ದಾರೆ. ಈಗಾಗಲೇ ಯಶಸ್ವಿನಿ ಯೋಜನೆಗೆ 20 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸುವಿಕೆ & ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡುವ ಬಗ್ಗೆ ಭಾಷಣದಲ್ಲಿ ಅಮಿತ್ ಶಾ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ಸುಮಾರು 5,700 VSSಗಳಿಗೆ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನವನ್ನು ಅಮಿತ್ ಶಾ ಪರಿಶೀಲಿಸಲಿದ್ದಾರೆ. ಡಿ.31ರಂದು ಮಲ್ಲೇಶ್ವರಂನ ಸೌಹಾರ್ದ ಫೇಡರೇಶನ್‍ಗೆ ಭೇಟಿ ನೀಡಿ ಸೌಹಾರ್ದ ಸಹಕಾರಿಗಳ ಸಭೆ ನಡೆಸಲಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:53 am, Thu, 29 December 22

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ