ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರೌಡಿಶೀಟರ್ ಭಾಗಿಯಾಗಿದ್ದಾನೆ. ಶಿವಾಜಿನಗರ ವಾರ್ಡ್ ಮಾಜಿ ಕಾರ್ಪೊರೇಟರ್ ಫರೀದಾ ಪತಿ, ರೌಡಿಶೀಟರ್ ಇಶ್ತಿಯಾಕ್ ಅಹ್ಮದ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ನಡೆದಿದ್ದ ಸಭೆಯಲ್ಲಿ ಕಾಣಿಸಿಕೊಂಡಿದ್ದಾನೆ.
ಇನ್ನು ಹಿರಿಯ ನಾಯಕರಾದ ಸಲೀಂ ಅಹ್ಮದ್, ಬಿ.ಕೆ.ಹರಿಪ್ರಸಾದ್ ಸಮ್ಮುಖದಲ್ಲಿಯೇ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರೌಡಿಶೀಟರ್ ಇಶ್ತಿಯಾಕ್ ಭಾಗಿಯಾಗಿದ್ದಾನೆ. ಇಶ್ತಿಯಾಕ್ ಐಎಂಎ ಪ್ರಕರಣದಲ್ಲಿ ಬಂಧಿತನಾಗಿದ್ದ.
ಈತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 48ಕ್ಕೂ ಹೆಚ್ಚು ಕೇಸ್‌ಗಳಿವೆ. ಮನ್ಸೂರ್ ಖಾನ್ ನಿಂದ 2 ಕೋಟಿ ಲಂಚ ಪಡೆದ ಆರೋಪವಿದೆ. ಹಾಗೂ 1993ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ.
IMA ಹಗರಣ: ಸಕ್ಷಮ ಪ್ರಾಧಿಕಾರದಿಂದ ರೋಷನ್ ಬೇಗ್ ಆಸ್ತಿ ಜಪ್ತಿಗೆ ಚಿಂತನೆ- ಕೋರ್ಟ್ಗೆ ಮಾಹಿತಿ