ಹಾಡಹಗಲೇ ಸಿನಿಮಾ ಸ್ಟೈಲ್‌ನಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ
ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೇ ಚೆಲ್ಲಿದೆ ರಕ್ತ. ನಗರದ ಮಧ್ಯ ಭಾಗದಲ್ಲಿಯೇ ಹಾಡ ಹಗಲೇ ನೂರಾರು ಜನರ ಎದುರಲ್ಲೇ ವ್ಯಕ್ತಿಯೊಬ್ಬನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಹೌದು ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ಛೋಟಾ ಮುಂಬೈ ಹುಬ್ಬಳ್ಳಿ ಮತ್ತೇ ಈಗ ವೈಲೆಂಟ್ ಆಗಿದೆ. ನಗರದ ಹಳೆ ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿರುವ ಆಲ್ ತಾಜ್ ಹೋಟೆಲ್ ಮುಂದೆ ಧಾರವಾಡದ ರೌಡಿ ಶೀಟರ್ ಇರ್ಫಾನ್ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಇರ್ಫಾನ್ ಮೇಲೆ ಸುತ್ತುವರಿದು ದಾಳಿ ಮಾಡಿರುವ ದುಷ್ಕರ್ಮಿಗಳು […]
ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೇ ಚೆಲ್ಲಿದೆ ರಕ್ತ. ನಗರದ ಮಧ್ಯ ಭಾಗದಲ್ಲಿಯೇ ಹಾಡ ಹಗಲೇ ನೂರಾರು ಜನರ ಎದುರಲ್ಲೇ ವ್ಯಕ್ತಿಯೊಬ್ಬನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಹೌದು ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ಛೋಟಾ ಮುಂಬೈ ಹುಬ್ಬಳ್ಳಿ ಮತ್ತೇ ಈಗ ವೈಲೆಂಟ್ ಆಗಿದೆ. ನಗರದ ಹಳೆ ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿರುವ ಆಲ್ ತಾಜ್ ಹೋಟೆಲ್ ಮುಂದೆ ಧಾರವಾಡದ ರೌಡಿ ಶೀಟರ್ ಇರ್ಫಾನ್ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಇರ್ಫಾನ್ ಮೇಲೆ ಸುತ್ತುವರಿದು ದಾಳಿ ಮಾಡಿರುವ ದುಷ್ಕರ್ಮಿಗಳು ಗುಂಡಿನ ಮಳೆಯನ್ನೇ ಸುರಿಸಿದ್ದಾರೆ. ಪರಿಣಾಮ ತೀವ್ರವಾಗಿ ಗಾಯೊಂಡ ಇರ್ಫಾನ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಾಯಗೊಂಡು ಬಿದ್ದಿದ್ದ ಇರ್ಫಾನ್‌ನ್ನು ಸ್ಥಳೀಯರು ಮತ್ತು ಪೊಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಇರ್ಫಾನ್ ಕೊನೆಯುಸಿರೆಳೆದಿದ್ದಾನೆ. ಬೈಕ್ ಮೇಲೆ ಬಂದು ಸುತ್ತುವರಿದು ಗುಂಡಿನ ದಾಳಿ ಮಾಡಿದ ದುಷ್ಕರ್ಮಿಗಳ ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Published On - 8:05 pm, Thu, 6 August 20