ಟ್ರಂಪ್ ಬೂಟಾಟಿಕೆ ಮತ್ತು ದೌರ್ಜನ್ಯ ಖಿನ್ನತೆಗೆ ದೂಡಿದೆ: ಮಿಶೆಲ್ ಒಬಾಮ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೂಟಾಟಿಕೆ ಮತ್ತು ಜನಾಂಗೀಯ ಅಸಹನೆಯಿಂದಾಗಿ ತಾನು ಕೆಳಸ್ತರದ ಖಿನ್ನತೆ ಹಾಗೂ ಹತಾಷೆಯನ್ನು ಅನುಭವಿಸುತ್ತಿರುವುದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಪತ್ನಿ ಮಿಶೆಲ್ ಒಬಾಮಾ ಹೇಳಿದ್ದಾರೆ. ದಿ ಮಿಶೆಲ್ ಒಬಾಮ ಪಾಡ್ಕಾಸ್ಟನಲ್ಲಿ ಪಾದಾರ್ಪಣೆ ಮಾಡಿ ಅಮೆರಿಕದ ಖ್ಯಾತ ಪತ್ರಕರ್ತೆ ಮಿಶೆಲ್ ನೊರಿಸ್ಅವರೊಂದಿಗೆ ಮಾತಾಡಿದ ಮಿಶೆಲ್, ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಕಗ್ಗೊಲೆ ಹಾಗೂ ಜನಾಂಗೀಯ ಘರ್ಷಣೆಗಳಿಗೆ ಟ್ರಂಪ್ ಆಡಳಿತದ ಪ್ರತಿಕ್ರಿಯೆ ಆತಂಕಕಾರಿ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಕಳವಳಕಾರಿಯಾಗಿದೆಯೆಂದು ಹೇಳಿದರು. ತಾನು ಅನುಭವಿಸುತ್ತಿರುವ […]
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೂಟಾಟಿಕೆ ಮತ್ತು ಜನಾಂಗೀಯ ಅಸಹನೆಯಿಂದಾಗಿ ತಾನು ಕೆಳಸ್ತರದ ಖಿನ್ನತೆ ಹಾಗೂ ಹತಾಷೆಯನ್ನು ಅನುಭವಿಸುತ್ತಿರುವುದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಪತ್ನಿ ಮಿಶೆಲ್ ಒಬಾಮಾ ಹೇಳಿದ್ದಾರೆ.
ದಿ ಮಿಶೆಲ್ ಒಬಾಮ ಪಾಡ್ಕಾಸ್ಟನಲ್ಲಿ ಪಾದಾರ್ಪಣೆ ಮಾಡಿ ಅಮೆರಿಕದ ಖ್ಯಾತ ಪತ್ರಕರ್ತೆ ಮಿಶೆಲ್ ನೊರಿಸ್ಅವರೊಂದಿಗೆ ಮಾತಾಡಿದ ಮಿಶೆಲ್, ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಕಗ್ಗೊಲೆ ಹಾಗೂ ಜನಾಂಗೀಯ ಘರ್ಷಣೆಗಳಿಗೆ ಟ್ರಂಪ್ ಆಡಳಿತದ ಪ್ರತಿಕ್ರಿಯೆ ಆತಂಕಕಾರಿ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಕಳವಳಕಾರಿಯಾಗಿದೆಯೆಂದು ಹೇಳಿದರು. ತಾನು ಅನುಭವಿಸುತ್ತಿರುವ ಖಿನ್ನತೆ ಹಾಗೂ ಒತ್ತಡದಿಂದ ಹೊರಬರಲು ವ್ಯಾಯಾಮದ ಮೊರೆ ಹೋಗಿರುವುದಾಗಿ ಮಿಶೆಲ್ ಹೇಳಿದರು.
ಪಾಡ್ಕಾಸ್ಟ್ನ ಮೊದಲ ಎಪಿಸೋಡ್ನಲ್ಲಿ ಪತಿ ಬರಾಕ್ ಒಬಾಮ ಅವರೊಂದಿಗಿನ ಸಂವಾದ ಪ್ರಸ್ತುತಪಡಿಸಿದ ಮಿಶೆಲ್ ಮುಂಬರುವ ಸರಣಿಗಳಲ್ಲಿ, ತನ್ನ ತಾಯಿ, ಸಹೋದರರು, ಸ್ನೇಹಿತರು ಹಾಗೂ ಕಾನನ್ ಒಬ್ರೀನ್ ಅವರೊಂದಿಗಿನ ಮಾತುಕತೆಗಳನ್ನು ತೋರಿಸಲಿದ್ದಾರೆ.