
ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದಲ್ಲಿ ಮತದಾನದ ಭರಾಟೆ ಜೋರಾಗಿದೆ. ಆದರೆ ಮತಗಟ್ಟೆಯಲ್ಲಿ ಮತದಾರರಿಗೆ ನೀಡುತ್ತಿರುವ ತೆಳು ರಬ್ಬರ್ ಗ್ಲೌಸ್ಗಳನ್ನು ಮತದಾನದ ಬಳಿಕ ಜನ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಮತದಾನಕ್ಕೆ ಕೊಟ್ಟ ಗ್ಲೌಸ್ ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾರೆ.
ಇನ್ನು ಕೆಲವು ಮತಗಟ್ಟೆಗಳಲ್ಲಿ ಗ್ಲೌಸ್ ಕೊಡಲು ಕಂಜೂಸ್ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಕೇವಲ ಸ್ಯಾನಿಟೈಸ್ ಮಾಡಿ ಮತದಾನಕ್ಕೆ ಅವಕಾಶ ನೀಡುತ್ತಿದ್ದಾರೆ. ಇನ್ನು ಕೆಲವೆಡೆ ಕೈ ಗ್ಲೌಸ್ ಡಿಸ್ಪೋಸ್ ಮಾಡಲು ವ್ಯವಸ್ಥೆಯೇ ಇಲ್ಲ. ಮತದಾನದ ಮಾಡಿದ ಬಳಿಕ ಬಳಸಿದ ಗ್ಲೌಸನ್ನು ಬಿಸಾಕಲು ಕಸದ ಬುಟ್ಟಿಯ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ರಸ್ತೆಗಳಲ್ಲಿ ಅಲ್ಲಲ್ಲಿ ಜನ ಎಸೆಯುತ್ತಿದ್ದಾರೆ. ಬೂತ್ 141, 141/A ನಲ್ಲಿ ಕಸದ ಬುಟ್ಟಿ ವ್ಯವಸ್ಥೆ ಇಲ್ಲ. ಆದರೆ 143, 153 ನಲ್ಲಿ ಕಸದ ಬುಟ್ಟಿಯ ವ್ಯವಸ್ಥೆ ಮಾಡಲಾಗಿದೆ.