ವೋಟ್ ಹಾಕುವವರಿಗೆ ಫ್ರೀ ಆಟೋ ಸರ್ವೀಸ್.. ಎಲ್ಲಿ?
ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಕಳೆದ ಎರಡು ಚುನಾವಣೆಗಳಿಂದಲೂ ಆರೀಫ್ರಿಂದ ಈ ಸೇವೆ ವಾರ್ಡ್-37 ಯಶವಂತಪುರದಲ್ಲಿ ಸೇವೆ ನೀಡುತ್ತಿರುವ ಆರೀಫ್ ಆಟೋ ಹಿಂಭಾಗದಲ್ಲಿ ಕಡ್ಡಾಯವಾಗಿ ಮತದಾನ ಮಾಡುವವರಿಗೆ ಮತಗಟ್ಟೆವರೆಗೂ ಉಚಿತ ಸೇವೆ ಅಂತ ಬೋರ್ಡ್ ಹಾಕಿಕೊಂಡು ಆಟೋ ಓಡಿಸ್ತಿದ್ದಾರೆ. ಬೆಳಿಗ್ಗೆ ಮತದಾನ ಶುರುವಾದಾಗಿನಿಂದಲೂ […]

ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ಕಳೆದ ಎರಡು ಚುನಾವಣೆಗಳಿಂದಲೂ ಆರೀಫ್ರಿಂದ ಈ ಸೇವೆ ವಾರ್ಡ್-37 ಯಶವಂತಪುರದಲ್ಲಿ ಸೇವೆ ನೀಡುತ್ತಿರುವ ಆರೀಫ್ ಆಟೋ ಹಿಂಭಾಗದಲ್ಲಿ ಕಡ್ಡಾಯವಾಗಿ ಮತದಾನ ಮಾಡುವವರಿಗೆ ಮತಗಟ್ಟೆವರೆಗೂ ಉಚಿತ ಸೇವೆ ಅಂತ ಬೋರ್ಡ್ ಹಾಕಿಕೊಂಡು ಆಟೋ ಓಡಿಸ್ತಿದ್ದಾರೆ.
ಬೆಳಿಗ್ಗೆ ಮತದಾನ ಶುರುವಾದಾಗಿನಿಂದಲೂ ಈ ಸೇವೆಯಲ್ಲಿ ನಿರತರಾಗಿದ್ದು, ಈಗಾಗಲೇ ಅನೇಕರಿಗೆ ಉಚಿತ ಡ್ರಾಪ್ ಮಾಡಿದ್ದಾರೆ. ಅಲ್ಲದೆ ಆರೀಫ್ ಕಳೆದ ಎರಡು ಚುನಾವಣೆಗಳಿಂದಲೂ ಇದೇ ರೀತಿಯ ಸೇವೆ ನೀಡಿಕೊಂಡು ಬಂದಿದ್ದಾರೆ. ಯಾರೇ ಕಾಲ್ ಮಾಡಿದ್ರು ಮನೆ ಬಾಗಿಲಿಗೆ ತೆರಳಿ ಪಿಕ್ ಮಾಡ್ತಾರಂತೆ.
Published On - 9:48 am, Tue, 3 November 20




