AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ದೇವರಕೊಂಡ-ರಶ್ಮಿಕಾ ಮದುವೆಯಲ್ಲಿ ಹಲವು ವಿಶೇಷತೆಗಳು

Vijay Deverakonda-Rashmika Mandanna wedding: ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದ ರಶ್ಮಿಕಾ-ವಿಜಯ್ ಜೋಡಿ ಇದೀಗ ತಮ್ಮ ಪ್ರೀತಿಗೆ ಮದುವೆಯ ಮೊಹರು ಒತ್ತುತ್ತಿದೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26 ರಂದು ವಿವಾಹ ಆಗಲಿದ್ದಾರೆ. ಇವರ ವಿವಾಹವು ಉದಯಪುರದ ಅತ್ಯಂತ ಖಾಸಗಿ ಮತ್ತು ಐಶಾರಾಮಿ ರೆಸಾರ್ಟ್​​ನಲ್ಲಿ ನಡೆಯುತ್ತಿದೆ. ಕೆಲ ದಿನಗಳ ಮುಂಚೆಯೇ ಈ ಜೋಡಿ ಮತ್ತು ಅವರ ಆಪ್ತರು, ಕುಟುಂಬದವರು ರೆಸಾರ್ಟ್ ತಲುಪಿದ್ದು ಮದುವೆ ಕಾರ್ಯ ಆರಂಭವಾಗಿದೆ. ಇವರ ಮದುವೆಯಲ್ಲಿ ಕೆಲವು ವಿಶೇಷತೆಗಳು ಇರಲಿವೆ.

ವಿಜಯ್ ದೇವರಕೊಂಡ-ರಶ್ಮಿಕಾ ಮದುವೆಯಲ್ಲಿ ಹಲವು ವಿಶೇಷತೆಗಳು
Vijay Deverakonda Rashmika Mandanna
ಮಂಜುನಾಥ ಸಿ.
|

Updated on: Feb 24, 2026 | 5:23 PM

Share

ವಿಜಯ್ ದೇವರಕೊಂಡ (Vijay Deverakonda) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ತಮ್ಮ ಪ್ರೀತಿಗೆ ಮದುವೆಯ ಮೊಹರು ಒತ್ತುತ್ತಿದೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26 ರಂದು ವಿವಾಹ ಆಗಲಿದ್ದಾರೆ. ಇವರ ವಿವಾಹವು ಉದಯಪುರದ ಅತ್ಯಂತ ಖಾಸಗಿ ಮತ್ತು ಐಶಾರಾಮಿ ರೆಸಾರ್ಟ್​​ನಲ್ಲಿ ನಡೆಯುತ್ತಿದೆ. ಕೆಲ ದಿನಗಳ ಮುಂಚೆಯೇ ಈ ಜೋಡಿ ಮತ್ತು ಅವರ ಆಪ್ತರು, ಕುಟುಂಬದವರು ರೆಸಾರ್ಟ್ ತಲುಪಿದ್ದು ಮದುವೆ ಕಾರ್ಯ ಆರಂಭವಾಗಿದೆ. ಇವರ ಮದುವೆಯಲ್ಲಿ ಕೆಲವು ವಿಶೇಷತೆಗಳು ಇರಲಿವೆ.

ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಹಲವು ಸಂಪ್ರದಾಯಗಳ ಮಿಶ್ರಣ ಆಗಿರಲಿದೆ. ಇವರ ಮದುವೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಸಂಪ್ರದಾಯಗಳ ಮಿಳಿತವಾಗಿರಲಿದೆ. ಉತ್ತರ ಭಾರತದ ಮದುವೆಗಳಂತೆ ಹಳದಿ, ಮೆಹಂದಿ, ಸಂಗೀತ್​​ಗಳನ್ನು ಆಚರಣೆ ಮಾಡಲಾಗುತ್ತಿದೆ. ಮದುವೆಗೆ ಮುಂಚೆ ಎರಡೂ ಕುಟುಂಬದವರನ್ನು ಒಟ್ಟಿಗೆ ಸೇರಿಸಿ ಹಲವು ಆಟಗಳನ್ನು ಸಹ ಆಡಿಸಲಾಗುತ್ತಿದೆ. ಇದರಿಂದ ಎರಡೂ ಕುಟುಂಬದವರ ನಡುವೆ ಬೆಸುಗೆ ಹೆಚ್ಚುವಂತೆ ಮಾಡುವ ಯೋಜನೆ ಇದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26 ರಂದು ನಡೆಯಲಿದ್ದು, ಈ ಮದುವೆ ಸಹ ತೆಲಂಗಾಣ ಮತ್ತು ಕೊಡವ ಸಂಸ್ಕೃತಿಯಂತೆ ನಡೆಯಲಿದೆ. ವಿಜಯ್ ದೇವರಕೊಂಡ ತೆಲಂಗಾಣದ ಪದ್ಮಸಾಲಿ ಸಮುದಾಯಕ್ಕೆ ಸೇರಿದವರು ಎನ್ನಲಾಗುತ್ತಿದ್ದು, ಅವರ ಸಮುದಾಯಕ್ಕೆ ಸೇರಿದ ಸಂಪ್ರದಾಯ ಮತ್ತು ರಶ್ಮಿಕಾ ಮಂದಣ್ಣ ಕೊಡವತಿ ಆಗಿದ್ದು, ಅವರ ಕೊಡವ ಸಮುದಾಯದ ಆಚರಣೆಗಳೆರಡನ್ನೂ ಸೇರಿಸಿ ಮದುವೆ ಮಾಡಲಾಗುತ್ತಿರುವುದು ವಿಶೇಷ. ಹಾಗಾಗಿ ಈ ಮದುವೆ ಸಂಪ್ರದಾಯಗಳ ಮಿಶ್ರಣ ಆಗಿರಲಿದೆ.

ಇದನ್ನೂ ಓದಿ:ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವು ಭಾರಿ ಅದ್ಧೂರಿಯಾಗಿ ನಡೆಯುತ್ತಿದ್ದ ರಾಜಸ್ಥಾನದ ಉದಯಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿರುವ ಈ ಐಷಾರಾಮಿ ರೆಸಾರ್ಟ್​​ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಈ ರೆಸಾರ್ಟ್​​ ಬರೋಬ್ಬರಿ 117 ಖಾಸಗಿ ವಿಲ್ಲಾಗಳು, ನದಿ-ಕೊಳ, ಖಾಸಗಿ ಹೆಲಿಪ್ಯಾಡ್ ಹೊಂದಿದೆ. ಮದುವೆ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಅವರ ಕುಟುಂಬದವರು ಅತ್ಯಾಪ್ತ ಸಂಬಂಧಿಗಳು ಮತ್ತು ರಶ್ಮಿಕಾ ಮಂದಣ್ಣ ಅವರ ಕುಟುಂಬದವರು ಮತ್ತು ಅತ್ಯಾಪ್ತ ಸಂಬಂಧಿಗಳು ಹಾಗೂ ಕೆಲವೇ ಕೆಲವು ಸ್ನೇಹಿತರಷ್ಟೆ ಭಾಗಿ ಆಗಿದ್ದಾರೆ. ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜನೆ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us