ಭಾವಮೈದುನನನ್ನ ರಕ್ಷಿಸಲು ಹೋದ ಭಾವನೂ ನೀರಿನಲ್ಲಿ ಮುಳುಗಿ ಸಾವು
ಮೈಸೂರು: ನೀರಿನಲ್ಲಿ ಮುಳುಗುತ್ತಿರುವ ಭಾವಮೈದುನನ್ನ ರಕ್ಷಿಸಲು ಹೋದ ಭಾವ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಸನ್ನ (25) ಮತ್ತು ನಿಂಗರಾಜು (35) ಮೃತ ದುರ್ದೈವಿಗಳು. ಕೆರೆಗೆ ಹಾರಿದ್ದ ಭಾಮೈದುನನ್ನು ರಕ್ಷಿಸಲು ಹೋದ ಭಾವ, ಬಾಮೈದ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಹೊಸಳ್ಳಿ ಕೆರೆಯಲ್ಲಿ ನಿನ್ನೆ ಸಂಜೆ ನಡೆಯಿದೆ. ಪ್ರಸನ್ನ ತನ್ನ ತಂದೆಯ ಜೊತೆ ಜಗಳ ಮಾಡಿಕೊಂಡು ಕುಪಿತನಾಗಿ ಕೆರೆಗೆ ಹಾರಿದ್ದ. ಬಾಮೈದ ಪ್ರಸನ್ನ ಆತ್ಮಹತ್ಯೆಗೆ ಯತ್ನಸಿದಾಗ ರಕ್ಷಿಸಲು ಬಾವ ನಿಂಗರಾಜು ಮುಂದಾಗಿದ್ದಾರೆ. […]

ಮೈಸೂರು: ನೀರಿನಲ್ಲಿ ಮುಳುಗುತ್ತಿರುವ ಭಾವಮೈದುನನ್ನ ರಕ್ಷಿಸಲು ಹೋದ ಭಾವ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಸನ್ನ (25) ಮತ್ತು ನಿಂಗರಾಜು (35) ಮೃತ ದುರ್ದೈವಿಗಳು.
ಕೆರೆಗೆ ಹಾರಿದ್ದ ಭಾಮೈದುನನ್ನು ರಕ್ಷಿಸಲು ಹೋದ ಭಾವ, ಬಾಮೈದ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಹೊಸಳ್ಳಿ ಕೆರೆಯಲ್ಲಿ ನಿನ್ನೆ ಸಂಜೆ ನಡೆಯಿದೆ.
ಪ್ರಸನ್ನ ತನ್ನ ತಂದೆಯ ಜೊತೆ ಜಗಳ ಮಾಡಿಕೊಂಡು ಕುಪಿತನಾಗಿ ಕೆರೆಗೆ ಹಾರಿದ್ದ. ಬಾಮೈದ ಪ್ರಸನ್ನ ಆತ್ಮಹತ್ಯೆಗೆ ಯತ್ನಸಿದಾಗ ರಕ್ಷಿಸಲು ಬಾವ ನಿಂಗರಾಜು ಮುಂದಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುರಿತ ಈಜುಪಟುಗಳು ಕೆರೆಯಿಂದ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.
Published On - 9:53 am, Tue, 3 November 20




