ಅಧಿಕಾರಿಗಳ ಬೇಜವಾಬ್ದಾರಿ, ಖಜಾನೆಯಲ್ಲೇ ಕೊಳೀತಿದೆ ಪರಿಹಾರ ಕಾಮಗಾರಿ ಹಣ

|

Updated on: Mar 02, 2020 | 10:13 AM

ರಾಯಚೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನೆರೆ ಪರಿಹಾರ ಕಾಮಗಾರಿಗೆ ಎಂದು ಬಿಡುಗಡೆ ಆದ ಹಣ ಖಜಾನೆಯಲ್ಲೇ ಉಳಿದುಕೊಂಡಿದೆ. ಪ್ರವಾಹದಿಂದ ಇಡೀ ಉತ್ತರ ಕರ್ನಾಟಕ ಜಿಲ್ಲೆಗಳು ಮುಳುಗಿ ಹೋಗಿದ್ದವು. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ನೀಡಿದ್ದ ಹಣ ಬಳಕೆಯಾಗದೆ ಖಜಾನೆಯಲ್ಲೇ ಕೊಳಿತಿದೆ. ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ 447 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದ್ರೆ ಅಧಿಕಾರಿಗಳು ಯಾವುದೇ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳದೆ ಕುಳಿತಿದ್ದಾರೆ. ನೆರೆಪಿಡೀತ ಗ್ರಾಮಸ್ಥರು ಮೂಲ ಸೌಕರ್ಯದಿಂದ ವಂಚಿತರಾಗೆ ಬದುಕುತ್ತಿದ್ದಾರೆ. […]

ಅಧಿಕಾರಿಗಳ ಬೇಜವಾಬ್ದಾರಿ, ಖಜಾನೆಯಲ್ಲೇ ಕೊಳೀತಿದೆ ಪರಿಹಾರ ಕಾಮಗಾರಿ ಹಣ
Follow us on

ರಾಯಚೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನೆರೆ ಪರಿಹಾರ ಕಾಮಗಾರಿಗೆ ಎಂದು ಬಿಡುಗಡೆ ಆದ ಹಣ ಖಜಾನೆಯಲ್ಲೇ ಉಳಿದುಕೊಂಡಿದೆ. ಪ್ರವಾಹದಿಂದ ಇಡೀ ಉತ್ತರ ಕರ್ನಾಟಕ ಜಿಲ್ಲೆಗಳು ಮುಳುಗಿ ಹೋಗಿದ್ದವು.

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ನೀಡಿದ್ದ ಹಣ ಬಳಕೆಯಾಗದೆ ಖಜಾನೆಯಲ್ಲೇ ಕೊಳಿತಿದೆ. ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ 447 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದ್ರೆ ಅಧಿಕಾರಿಗಳು ಯಾವುದೇ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳದೆ ಕುಳಿತಿದ್ದಾರೆ. ನೆರೆಪಿಡೀತ ಗ್ರಾಮಸ್ಥರು ಮೂಲ ಸೌಕರ್ಯದಿಂದ ವಂಚಿತರಾಗೆ ಬದುಕುತ್ತಿದ್ದಾರೆ.

ಖಜಾನೆಯಲ್ಲಿ ಒಟ್ಟು 447 ಕೋಟಿ ರೂ ನೆರೆ ಪರಿಹಾರವಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲೂ ಈ ಹಣ ಬಳಕೆಯಾಗಿಲ್ಲ. ರಾಯಚೂರು ಜಿಲ್ಲೆಗೆ 9.55 ಕೋಟಿ ರೂಪಾಯಿ ಪರಿಹಾರ, ಯಾದಗಿರಿ ಜಿಲ್ಲೆಗೆ 9.39 ಕೋಟಿ ರೂಪಾಯಿ ಪರಿಹಾರ, ಕೊಪ್ಪಳ ಜಿಲ್ಲೆಗೆ 11.72 ಕೋಟಿ ರೂಪಾಯಿ ಪರಿಹಾರ, ಕಲಬುರಗಿ ಜಿಲ್ಲೆಗೆ 13.36 ಕೋಟಿ ರೂಪಾಯಿ ಪರಿಹಾರ, ಬಳ್ಳಾರಿ ಜಿಲ್ಲೆಗೆ 5.10 ಕೋಟಿ ರೂ. ಪರಿಹಾರ ನೀಡಲಾಗಿದೆ.

ಆದ್ರೆ ಆಯಾ ಜಿಲ್ಲಾ ಪಂಚಾಯತ ಖಜಾನೆಗಳಲ್ಲಿಯೇ ಹಣ ಉಳಿದುಕೊಂಡಿದೆ. ಹೀಗಾಗಿ ನೆರೆಸಂತ್ರಸ್ತರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಹಣ ಕೊಟ್ರು ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಲು ಹಣವನ್ನು ಬಳಕೆ ಮಾಡದೇ ಇರೋದಕ್ಕೆ ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.‌

Published On - 10:12 am, Mon, 2 March 20