AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ, ರಣಕಾಳಗಕ್ಕೆ ಅಣಿಯಾದ ಕಾಂಗ್ರೆಸ್

ಬೆಂಗಳೂರು: ಎದುರಾಳಿಯನ್ನ ಹಣಿಬೇಕು ಅಂದ್ರೆ, ಕೆಡವಿ ಮಣ್ಣು ಮುಕ್ಕಿಸಬೇಕು ಅಂದ್ರೆ ಆತನ ತಾಕತ್ ಏನು. ಆತನ ಪ್ಲಸ್ ಮೈನಸ್ ಏನು ಅನ್ನೋದನ್ನ ಚೆನ್ನಾಗಿ ತಿಳ್ಕೊಬೇಕು. ಅದಕ್ಕೆ ತಕ್ಕನಾಗೆ ಯುದ್ಧ ತಂತ್ರ ರೂಪಿಸಬೇಕು. ಸದ್ಯ ಇದೇ ತಂತ್ರವನ್ನ ಕಾಂಗ್ರೆಸ್, ಬಿಜೆಪಿ ವಿರುದ್ಧ ಬಳಸೋಕೆ ಸಿದ್ಧವಾಗಿದೆ. ಇಂದು ನಡೆಯೋ ಅಧಿವೇಶನದಲ್ಲಿ ಸರ್ಕಾರವನ್ನ ಹೆಜ್ಜೆ ಹೆಜ್ಜೆಗೂ ತಿವಿಯೋಕೆ ಟಗರು ಪಡೆ ಭಾರಿ ತಂತ್ರಗಳನ್ನೇ ಮಾಡಿದೆ. ಇದ್ರ ಮಧ್ಯೆ ಕೈ ಪಾಳಯಕ್ಕೆ ಸಿಕ್ಕ ಅದೊಂದು ಅಸ್ತ್ರ ಪ್ರತಿಪಕ್ಷದ ಬಲ ಹೆಚ್ಚಿಸಿದೆ. ಇದನ್ನ ವಾರ್ನಿಂಗ್ […]

ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ, ರಣಕಾಳಗಕ್ಕೆ ಅಣಿಯಾದ ಕಾಂಗ್ರೆಸ್
ಸಂಗ್ರಹ ಚಿತ್ರ
ಸಾಧು ಶ್ರೀನಾಥ್​
|

Updated on: Mar 02, 2020 | 7:26 AM

Share

ಬೆಂಗಳೂರು: ಎದುರಾಳಿಯನ್ನ ಹಣಿಬೇಕು ಅಂದ್ರೆ, ಕೆಡವಿ ಮಣ್ಣು ಮುಕ್ಕಿಸಬೇಕು ಅಂದ್ರೆ ಆತನ ತಾಕತ್ ಏನು. ಆತನ ಪ್ಲಸ್ ಮೈನಸ್ ಏನು ಅನ್ನೋದನ್ನ ಚೆನ್ನಾಗಿ ತಿಳ್ಕೊಬೇಕು. ಅದಕ್ಕೆ ತಕ್ಕನಾಗೆ ಯುದ್ಧ ತಂತ್ರ ರೂಪಿಸಬೇಕು. ಸದ್ಯ ಇದೇ ತಂತ್ರವನ್ನ ಕಾಂಗ್ರೆಸ್, ಬಿಜೆಪಿ ವಿರುದ್ಧ ಬಳಸೋಕೆ ಸಿದ್ಧವಾಗಿದೆ. ಇಂದು ನಡೆಯೋ ಅಧಿವೇಶನದಲ್ಲಿ ಸರ್ಕಾರವನ್ನ ಹೆಜ್ಜೆ ಹೆಜ್ಜೆಗೂ ತಿವಿಯೋಕೆ ಟಗರು ಪಡೆ ಭಾರಿ ತಂತ್ರಗಳನ್ನೇ ಮಾಡಿದೆ. ಇದ್ರ ಮಧ್ಯೆ ಕೈ ಪಾಳಯಕ್ಕೆ ಸಿಕ್ಕ ಅದೊಂದು ಅಸ್ತ್ರ ಪ್ರತಿಪಕ್ಷದ ಬಲ ಹೆಚ್ಚಿಸಿದೆ.

ಇದನ್ನ ವಾರ್ನಿಂಗ್ ಅಂತಾ ಅಂದ್ಕೊಳ್ಳಿ, ಇಲ್ಲಾ ಚಾಲೆಂಜ್ ಅಂತಾನಾದ್ರೂ ಅಂದ್ಕೊಳ್ಳಿ. ನಾವಂತೂ ಫೈಟ್​ಗೆ ರೆಡಿ. ಇದು ಸಿದ್ದರಾಮಯ್ಯ ಕಾಲ್ಕೆರೆದು ಗುಡುಗಿರುವ ವೈಖರಿ. ಹೌದು, ಬಜೆಟ್ ಅಧಿವೇಶನ ಅನ್ನೋ ರಣಕಾಳಗದ ಅಖಾಡಕ್ಕೆ ಧುಮುಕಲು ರೆಡಿಯಾಗಿರುವ ಕಾಂಗ್ರೆಸ್ ಪಾಳಯದ ರಣೋತ್ಸಾಹ ಇಮ್ಮಡಿಗೊಂಡಿದೆ. ಮಂಗಳೂರು ಗೋಲಿಬಾರ್, ಶಾಹೀನ್ ಶಾಲೆ, ಸಿಎಎ ಹೋರಾಟದ ವಿಚಾರಕ್ಕೆ ಈಗಾಗಲೇ ಬಿಜೆಪಿಗೆ ಬಿಸಿ ಮುಟ್ಟಿಸಿರೋ ಟಗರು ಪಡೆಗೆ ಈಗ ದೊಡ್ಡ ಬ್ರಹ್ಮಾಸ್ತ್ರವೇ ಸಿಕ್ಕಿದೆ. ಆ ಅಸ್ತ್ರವೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟಿರೋ ವಿವಾದಿತ ಹೇಳಿಕೆ.

ಬಿಜೆಪಿ ಕಟ್ಟಿಹಾಕಲು ‘ಕೈ’ ಪಡೆಗೆ ‘ದೊರೆ’ ಅಸ್ತ್ರ: ಹೌದು, ಅದ್ಯಾವಾಗ ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನ ಏಜೆಂಟ್ ಅಂದ್ರೋ, ವಿವಾದದ ಕಿಡಿ ಹೊತ್ತಿದೆ. ರಾಜ್ಯಾದ್ಯಂತ ದೊರೆಸ್ವಾಮಿ ವಿರುದ್ಧ ಪ್ರತಿಭಟನೆ ನಡೀತಿವೆ. ಸ್ವತಂತ್ರ ಹೋರಾಟಗಾರರ ಬಗ್ಗೆ ಬಿಜೆಪಿಗೆ ಗೌರವ ಇಲ್ಲ ಅಂತಾ ಸ್ವತಃ ಸಿದ್ದರಾಮಯ್ಯನವರೇ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಇದೇ ವೇಳೆ, ಸಿದ್ದರಾಮಯ್ಯ ಬಿಜೆಪಿ ಕಟ್ಟಿಹಾಕಲು ರೆಡಿಮಾಡಿರೋ ಅಸ್ತ್ರದ ಹಿಂಟ್ ಕೂಡಾ ರಿವೀಲ್ ಆಗಿತ್ತು.

ಯತ್ನಾಳ್ ಹೆಗಲಿಗೆ ಗನ್. ಗುರಿ ಬಿಜೆಪಿ ಪಡೆ ಮೇಲೆ.! ಹೌದು ಮೊದಲೇ ಬಿಜೆಪಿಯನ್ನ ಕಟ್ಟಿಹಾಕಲು ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪಾಳಯಕ್ಕೆ ಈಗ ಯತ್ನಾಳ್ ಹೇಳಿಕೆಯೇ ಅಸ್ತ್ರವಾಗಿ ಸಿಕ್ಕಿದ್ದು, ಇಂದಿನಿಂದ ಆರಂಭವಾಗಲಿರುವ ಎರಡನೇ ಸುತ್ತಿನ ಬಜೆಟ್ ಅಧಿವೇಶನದಲ್ಲಿ ಇದೇ ವಿಚಾರಕ್ಕೆ ದೊಡ್ಡ ಹಂಗಾಮ ಸೃಷ್ಟಿಸಲು ಪ್ಲ್ಯಾನ್ ಮಾಡ್ಕೊಂಡಿದೆ. ಅಧಿವೇಶನ ನಡೆಯೋಕೆ ಬಿಡಲ್ಲ ಅನ್ನೋ ಎಚ್ಚರಿಕೆ ಸಂದೇಶವೂ ಹೊರ ಬಿದ್ದಿದೆ.

ಯತ್ನಾಳ್ ಪರ ಬಿಜೆಪಿ ನಾಯಕರ ಭರ್ಜರಿ ಬ್ಯಾಟಿಂಗ್​..! ಒಂದೆಂಡೆ ಯತ್ನಾಳ್ ಹೇಳಿಕೆಯನ್ನೇ ಇಟ್ಕೊಂಡು ಕಾಂಗ್ರೆಸ್ ಇಂದಿನ ಅಧಿವೇಶನದಲ್ಲಿ ಬಿಜೆಪಿಯನ್ನ ಕಟ್ಟಿಹಾಕಲು ನೋಡ್ತಿದ್ರೆ, ಇತ್ತ ಬಿಜೆಪಿಗರೂ ಏನ್ ಸುಮ್ನೆ ಕೂತಿಲ್ಲ. ಯತ್ನಾಳ್ ಮಾತನ್ನ ಸಮರ್ಥಿಸಿಕೊಂಡಿರೋ ಡಿಸಿಎಂ ಅಶ್ವತ್ಥ್ ನಾರಾಯಣ್, ಯತ್ನಾಳ್ ಸಂವಿಧಾನ ವಿರೋಧವಾಗಿ ಮಾತನಾಡಿದ್ರೆ ಆ ಬಗ್ಗೆ ಪ್ರಸ್ತಾಪ ಮಾಡ್ಲಿ ಎಂದಿದ್ದಾರೆ.

ಆ ಮೂಲಕ ಉತ್ತರ ಕೊಡಲು ತಾವು ರೆಡಿ ಅನ್ನೋ ಸಂದೇಶ ರವಾನಿಸಿದ್ದಾರೆ. ಇನ್ನು ದಾವಣಗೆರೆಯಲ್ಲಿ ಮಾತನಾಡಿರುವ ಶಾಸಕ ರೇಣುಕಾಚಾರ್ಯ ದೊರೆಸ್ವಾಮಿಗೆ ಅವಮಾನ ಆದ್ರೆ, ಚರ್ಚೆ ಮಾಡ್ಲಿ, ಆದ್ರೆ ಅದನ್ನ ಬಿಟ್ಟು ಅಧಿವೇಶನ ನಡೆಯಲು ಬಿಡಲ್ಲ ಅಂತಾ ಜನರಿಗೆ ಅನ್ಯಾಯ ಮಾಡ್ತೀರಾ ಅಂತಾ ಪ್ರಶ್ನಿಸಿದ್ದಾರೆ.

ಇನ್ನು ಯತ್ನಾಳ್ ಹೇಳಿಕೆಯನ್ನ ಸಮರ್ಥಿಸಿಕೊಂಡಿರೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೊದ್ಲು ದೊರೆಸ್ವಾಮಿ ಸಾರ್ವಕರ್ ಬಗ್ಗೆ ಹಗುರವಾಗಿ ಮಾತನಾಡೋದನ್ನ ಬಿಡ್ಲಿ ಎಂದಿದ್ದಾರೆ. ಹೀಗೆ ಯತ್ನಾಳ್ ಬೆನ್ನಿಗೆ ನಿಂತಿರುವ ಬಿಜೆಪಿ ನಾಯಕರಿಗೆ ಸೈಲೆಂಟ್ ಆಗೇ ಪಂಚ್ ಕೊಟ್ಟಿರುವ ಮಾಜಿ ಸಚಿವ ಡಿಕೆಶಿವಕುಮಾರ್, ಬಿಜೆಪಿಯವರು ಸಂಸ್ಕೃತಿಯೇ ಅಂಥಾದ್ದು ಎಂದಿದ್ದಾರೆ.

ಒಂದೆಡೆ ಯತ್ನಾಳ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಲು ಸಿದ್ಧರಿಲ್ಲ. ಇನ್ನೊಂದೆಡೆ ಬಿಜೆಪಿ ನಾಯಕರು ಯತ್ನಾಳ್ ಹೇಳಿಕೆಯನ್ನ ಸಮರ್ಥಿಸಿಕೊಳ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಇದೇ ವಿಚಾರವನ್ನ ಇಟ್ಕೊಂಡು ಸರ್ಕಾರವನ್ನ ಹಣ್ಣುಗಾಯಿ ನೀರುಗಾಯಿ ಮಾಡಲು ಸಜ್ಜಾಗಿದೆ.

ಪ್ರತಿಪಕ್ಷಗಳ ‘ಕೈ’ಗೆ ದೊರೆ ಅಸ್ತ್ರ..! ಯತ್ನಾಳ್ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್, ಕ್ಷಮೆ ಕೋರುವ ತನಕ ಕಲಾಪಕ್ಕೆ ಅಡ್ಡಿಪಡಿಸಲು ನಿರ್ಣಯ ಮಾಡಿಕೊಂಡಿದೆ. ಅಲ್ದೆ ಇದೇ ವಿಚಾರವಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್​ನಲ್ಲಿ ಕೋಲಾಹಲ ಸೃಷ್ಟಿಸಲೂ ಪ್ಲ್ಯಾನ್ ರೂಪಿಸಿಕೊಂಡಿದೆ.

ಅಂದಹಾಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ಕೊಡಲಿದ್ದಾರೆ. ಆದ್ರೆ ಸಿಎಂ ಉತ್ತರಕ್ಕೂ ಮೊದಲೇ ಯತ್ನಾಳ್ ಹೇಳಿಕೆ ವಿಚಾರಕ್ಕೆ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ಪಟ್ಟು ಹಿಡಿದು ಗದ್ದಲು ಎಬ್ಬಿಸೋದು ಪಕ್ಕಾ ಆಗಿದೆ. ಇನ್ನೊಂದೆಡೆ ಕುಮಾರಸ್ವಾಮಿ ಸಾಲಮನ್ನಾ ಯೋಜನೆಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ ಅನ್ನೋ ಆರೋಪವನ್ನೇ ಅಸ್ತ್ರವನ್ನಾಗಿಕೊಂಡಿರುವ ಜೆಡಿಎಸ್, ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದೆ.

ಇದ್ರ ಜೊತೆಗೆ ನೆರೆ ಮತ್ತು ಬರ ಪರಿಹಾರ ಕಾರ್ಯದಲ್ಲಿ ಆಗಿರುವ ವಿಳಂಬ, ಹದಗೆಟ್ಟ ಆರ್ಥಿಕ ಸ್ಥಿತಿ, ಕೇಂದ್ರದಿಂದ ಬಾಕಿ ಇರುವ ಮತ್ತು ಕಡಿತ ಆಗಿರುವ ಅನುದಾನ ವಿಚಾರ ಇಟ್ಕೊಂಡು ಸರ್ಕಾರಕ್ಕೆ ಬಿಸಿಮುಟ್ಟಿಸಲು ಪ್ರತಿಪಕ್ಷಗಳ ಪಡೆ ಸಜ್ಜಾಗಿದೆ. ಇನ್ನು ಅರಣ್ಯ ಕಾಯಿದೆ ಅಡಿ ತನಿಖೆ ಎದುರಿಸುತ್ತಿರುವ ಆನಂದ್ ಸಿಂಗ್​ಗೆ ಅರಣ್ಯ ಖಾತೆ ನೀಡಿರುವುದು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ದಾಖಲಾಗಿರುವ ಪ್ರಕರಣಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳನ್ನು ಅಧಿವೇಶನಕ್ಕೆ ನಿಷೇಧ ಮಾಡಿರುವುದು ಸೇರಿದಂತೆ ಸಾಕಷ್ಟು ವಿಚಾರಗಳು ಕಲಾಪದ ಕಾವನ್ನು ಏರಿಸಲಿದೆ

ಇದೆಲ್ಲದರ ಮಧ್ಯೆ ಎಲ್ಲರ ಕಣ್ಣೂ ಮಾರ್ಚ್ 5ರಂದು ಸಿಎಂ ಮಂಡನೆ ಮಾಡಲಿರುವ ಬಜೆಟ್ ಮೇಲೆ ಇದ್ದರೂ, ಈ ಸುದೀರ್ಘ ಅಧಿವೇಶನ ನಡೆಸುವುದು ಸರಕಾರಕ್ಕೆ ಸುಲಭವೇನೂ ಅಲ್ಲ. ಈ ಅಡೆ ತಡೆಗಳನ್ನು ಆಡಳಿತ ಪಕ್ಷ ಹೇಗೆ ನಿಭಾಯಿಸುತ್ತದೆ ? ವಿಪಕ್ಷಗಳು ಸರಕಾರವನ್ನು ಹೇಗೆ ಅಡಕತ್ತರಿಗೆ ಸಿಲುಕಿಸುತ್ತವೆ? ಕಾದು ನೋಡಬೇಕು

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ