AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹಾಕಿದ್ದ ಕಣ್ಣೀರಿಗೆ ಶಕ್ತಿದೇವತೆ ಉತ್ತರ ಕೊಟ್ಟಿದ್ದಾಳೆ: ವಿಶ್ವನಾಥ್ ಅನರ್ಹತೆ ತೀರ್ಪಿಗೆ ಸಾ.ರಾ.ಮಹೇಶ್​ ಪ್ರತಿಕ್ರಿಯೆ

ನಮ್ಮಿಬ್ಬರ ಮಧ್ಯೆ ಆಣೆ-ಪ್ರಮಾಣ ನಡೆದು ಸರಿಯಾಗಿ ಒಂದೇ ವರ್ಷಕ್ಕೆ ಈ ಅನರ್ಹತೆ ತೀರ್ಮಾನ ಬಂದಿದೆ. ಸತ್ಯ ಯಾವುದು ಎಂಬುದು ಗೊತ್ತಾಗಿದೆ. ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು ಕೇಳಿಕೊಂಡಿದ್ದೆ ಎಂದು ಸಾ.ರಾ.ಮಹೇಶ್​ ಹೇಳಿದ್ದಾರೆ.

ನಾನು ಹಾಕಿದ್ದ ಕಣ್ಣೀರಿಗೆ ಶಕ್ತಿದೇವತೆ ಉತ್ತರ ಕೊಟ್ಟಿದ್ದಾಳೆ: ವಿಶ್ವನಾಥ್ ಅನರ್ಹತೆ ತೀರ್ಪಿಗೆ ಸಾ.ರಾ.ಮಹೇಶ್​ ಪ್ರತಿಕ್ರಿಯೆ
ಸಾ.ರಾ.ಮಹೇಶ್​ ಮತ್ತು ಎಚ್​. ವಿಶ್ವನಾಥ್​
Lakshmi Hegde
|

Updated on:Dec 01, 2020 | 11:06 AM

Share

ಮೈಸೂರು: ಈ ಬರಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕ್ಯಾಬಿನೆಟ್​ನಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾಯುತ್ತಿದ್ದ ಎಚ್​.ವಿಶ್ವನಾಥ್​ಗೆ ಅನರ್ಹತೆ ಅಡ್ಡಿಯಾಗಿದೆ. ಮೈತ್ರಿಸರ್ಕಾರ ಪತನಕ್ಕೆ ಕಾರಣರಾಗಿದ್ದ ಎಚ್​.ವಿಶ್ವನಾಥ್​ ಉಪಚುನಾವಣೆಯಲ್ಲಿ ಸೋತಿದ್ದರು. ಸಾಂವಿಧಾನಿಕವಾಗಿ ಮರು ಆಯ್ಕೆ ಆಗದ ಕಾರಣ ಅವರು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ನಿನ್ನೆ ಆದೇಶ ನೀಡಿದ ಬೆನ್ನಲ್ಲೇ, ಶಾಸಕ ಸಾ.ರಾ.ಮಹೇಶ್​ ಮತ್ತೆ ಎಚ್​.ವಿಶ್ವನಾಥ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ಸಾ.ರಾ.ಮಹೇಶ್​, ನಾನು ಮತ್ತು ನನ್ನ ಕಾರ್ಯಕರ್ತರು ಬಿಟ್ಟನಿಟ್ಟುಸಿರಿನ ಪರಿಣಾಮ ಇಂದು ವಿಶ್ವನಾಥ್​ಗೆ ಶಿಕ್ಷೆಯಾಗಿದೆ. ತಪ್ಪು ಮಾಡಿದವರಿಗೆ ನ್ಯಾಯದೇವತೆಯೇ ಶಿಕ್ಷೆ ನೀಡಿದ್ದಾಳೆ ಎಂದು ಹೇಳಿದ್ದಾರೆ.

ನಮ್ಮಿಬ್ಬರ ಮಧ್ಯೆ ಆಣೆ-ಪ್ರಮಾಣ ನಡೆದು ಸರಿಯಾಗಿ ಒಂದೇ ವರ್ಷಕ್ಕೆ ಈ ಅನರ್ಹತೆ ತೀರ್ಮಾನ ಬಂದಿದೆ. ಸತ್ಯ ಯಾವುದು ಎಂಬುದು ಗೊತ್ತಾಗಿದೆ. ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು ಕೇಳಿಕೊಂಡಿದ್ದೆ. ತಪ್ಪು ಮಾಡಿದರೂ ಭಂಡತನದಿಂದ ಶಕ್ತಿ ದೇವತೆ ಎದುರು ಬಂದು ಕುಳಿತರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಹಾಗೇ ನಮ್ಮಂಥ ರಾಜಕಾರಣಿಗಳಿಗೆ ಒಂದು ಪಾಠವೂ ಹೌದು ಎಂದ ಸಾ.ರಾ.ಮಹೇಶ್, ಉಳಿದ 16ಮಂದಿಗೆ ಏನೂ ಆಗುವುದಿಲ್ಲ. ಆದರೆ ವಿಶ್ವನಾಥ್ ವಿರುದ್ಧ ಮಾತ್ರ ಅನರ್ಹತೆಯ ತೀರ್ಪು ಬರುತ್ತದೆ ಎಂದರೆ, ಅವರು ದೇವರ ಎದುರು ಹೇಗೆ ನಡೆದುಕೊಂಡರು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ತಾರಕಕ್ಕೆ ಏರಿತ್ತು ಜಟಾಪಟಿ ಮೈತ್ರಿ ಸರ್ಕಾರ ಪತನವಾದ ನಂತರ ಎಚ್​.ವಿಶ್ವನಾಥ್​ ಮತ್ತು ಸಾ.ರಾ.ಮಹೇಶ್ ನಡುವೆ ಜಟಾಪಟಿ ತಾರಕಕ್ಕೆ ಏರಿತ್ತು. ಹುಣಸೂರು ಶಾಸಕ ಎಚ್​.ವಿಶ್ವನಾಥ್​ ₹ 25 ಕೋಟಿ ರೂಪಾಯಿಗೆ ತಮ್ಮನ್ನು ಮಾರಿಕೊಂಡು ರಾಜೀನಾಮೆ ನೀಡಿದ್ದಾರೆ ಎಂದು ಸಾ.ರಾ.ಮಹೇಶ್ ಆರೋಪಿಸಿದ್ದರು.

ಅದೆಷ್ಟು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು ಎಂದರೆ ಇಬ್ಬರೂ ಮುಖಂಡರು ಆಣೆ ಪ್ರಮಾಣದವರೆಗೆ ಹೋಗಿದ್ದರು. ನಾನು 25 ಕೋಟಿ ರೂ.ತೆಗೆದುಕೊಂಡಿದ್ದು ನಿಜವೇ ಆದರೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ಎದುರು ಬಂದು ಆಣೆ ಮಾಡಿ ಎಂದು ವಿಶ್ವನಾಥ್​ ಸವಾಲು ಎಸೆದಿದ್ದರೆ, ಅದಕ್ಕೆ ಪ್ರತಿಯಾಗಿ ಸಾ.ರಾ.ಮಹೇಶ್​ ಪ್ರತಿಸವಾಲು ಎಸೆದಿದ್ದರು.

ಹಾಗೇ ಇಬ್ಬರೂ ಚಾಮುಂಡಿಬೆಟ್ಟಕ್ಕೆ ಹೋಗಿದ್ದರೂ ವಿಶ್ವನಾಥ್​ ದೇವಿಯೆದುರು ಪ್ರಮಾಣ ಮಾಡಿರಲಿಲ್ಲ. ಆದರೆ ಸಾ.ರಾ. ಮಹೇಶ್​ ದೇವಾಲಯಕ್ಕೆ ಹೋಗಿ, ವಿಶ್ವನಾಥ್​ 25 ಕೋಟಿ ರೂ.ಪಡೆದಿದ್ದು ಸತ್ಯ ಎಂದು ದೇವಿಗೆ ನಮಸ್ಕರಿಸಿ ಪ್ರಮಾಣ ಮಾಡಿದ್ದರು.

ಇದನ್ನೂ ಓದಿ: H. ವಿಶ್ವನಾಥ್​ಗೆ ಬಿಗ್​ ಶಾಕ್​! R. ಶಂಕರ್, MTB ನಾಗರಾಜ್​ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

Published On - 10:56 am, Tue, 1 December 20

ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್