ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ.. ಯುವಕರ ಸಲಿಂಗ ಮದುವೆ: ವಿರೋಧ, ಟೀಕೆ ವ್ಯಕ್ತ

|

Updated on: Oct 07, 2020 | 1:52 PM

ಕೊಡಗು: ಸಲಿಂಗ ಮದುವೆಯನ್ನು ಅನೇಕ ದೇಶಗಳು ಒಪ್ಪಿಕೊಂಡಿವೆ. ಇದೀಗ ನಮ್ಮ ಕೊಡಗಿನ ಕುವರನಿಂದ ಇತಂಹ ಅಪರೂಪದ ಮದುವೆಯಾಗಿದೆ. ಕೊಡಗಿನ ಯುವಕ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬ ಇಬ್ಬರು ಯುವಕರು ಪರಸ್ಪರ ಪ್ರೀತಿಸಿ, ಸಲಿಂಗ ಮದುವೆಯಾಗಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 26 ರಂದು ಇವರ ಮದುವೆ ಸಮಾರಂಭ ನೆರವೇರಿದೆ. ಕಳೆದ ಹತ್ತು ವರ್ಷದಿಂದ ವಿದೇಶದಲ್ಲಿರುವ ಶರತ್ ತನ್ನ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು, ಕೊಡಗಿನ ವಾಲಗದ ಮೂಲಕ ವಿಜೃಂಭಣೆಯಿಂದ ಸಲಿಂಗ ವಿವಾಹವಾಗಿದ್ದಾರೆ. […]

ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ.. ಯುವಕರ ಸಲಿಂಗ ಮದುವೆ: ವಿರೋಧ, ಟೀಕೆ ವ್ಯಕ್ತ
Follow us on

ಕೊಡಗು: ಸಲಿಂಗ ಮದುವೆಯನ್ನು ಅನೇಕ ದೇಶಗಳು ಒಪ್ಪಿಕೊಂಡಿವೆ. ಇದೀಗ ನಮ್ಮ ಕೊಡಗಿನ ಕುವರನಿಂದ ಇತಂಹ ಅಪರೂಪದ ಮದುವೆಯಾಗಿದೆ. ಕೊಡಗಿನ ಯುವಕ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬ ಇಬ್ಬರು ಯುವಕರು ಪರಸ್ಪರ ಪ್ರೀತಿಸಿ, ಸಲಿಂಗ ಮದುವೆಯಾಗಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 26 ರಂದು ಇವರ ಮದುವೆ ಸಮಾರಂಭ ನೆರವೇರಿದೆ. ಕಳೆದ ಹತ್ತು ವರ್ಷದಿಂದ ವಿದೇಶದಲ್ಲಿರುವ ಶರತ್ ತನ್ನ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು, ಕೊಡಗಿನ ವಾಲಗದ ಮೂಲಕ ವಿಜೃಂಭಣೆಯಿಂದ ಸಲಿಂಗ ವಿವಾಹವಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಸಲಿಂಗ ವಿವಾಹಕ್ಕೆ ವಿರೋಧಗಳು, ಟೀಕೆಗಳು ವ್ಯಕ್ತವಾಗಿವೆ.