ಬೆಂಗಳೂರಿಗೆ ಕಾಡುತ್ತಿದೆ ICU ಕೊರತೆ, ಮುಂದೆ ಇದೆ ಕಂಟಕ..
ಬೆಂಗಳೂರು: ಕೊರೊನಾ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕೊರೊನಾ ಸೋಂಕಿತರಿಗೆ ICU ಕೊರತೆ ಉಂಟಾಗಿದೆ. ಅಡ್ಮಿಟ್ ಆಗುತ್ತಿರುವ ಪ್ರತೀ ಸೋಂಕಿತರಿಗೆ ICU ಗಳ ಅವಶ್ಯತೆ ಬೀಳುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಕಷ್ಟವಾಗುತ್ತಿದೆ. ವಾತಾವರಣ ಬದಲಾದ ಹಿನ್ನೆಲೆ ನ್ಯೂಮೋನಿಯಾ ಹೆಚ್ಚಳವಾಗಿದೆ. ನ್ಯೂಮೋನಿಯಾ ರೋಗಿಗಳೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರಿಗೆ ICUಗಳಲ್ಲಿ ಬೆಡ್‌ಗಳ ಸಮಸ್ಯೆ ಉಂಟಾಗಿದೆ. ICU ಅಲಭ್ಯತೆಯಿಂದ ಸಾವಿನ ಸಂಖ್ಯೆ ಹೆಚ್ಚುವ ಆತಂಕ ವ್ಯಕ್ತವಾಗಿದೆ. ಮುಂದೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ತಜ್ಞರು ಅಭಿಪ್ರಾಯ […]
ಬೆಂಗಳೂರು: ಕೊರೊನಾ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕೊರೊನಾ ಸೋಂಕಿತರಿಗೆ ICU ಕೊರತೆ ಉಂಟಾಗಿದೆ. ಅಡ್ಮಿಟ್ ಆಗುತ್ತಿರುವ ಪ್ರತೀ ಸೋಂಕಿತರಿಗೆ ICU ಗಳ ಅವಶ್ಯತೆ ಬೀಳುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಕಷ್ಟವಾಗುತ್ತಿದೆ.
ವಾತಾವರಣ ಬದಲಾದ ಹಿನ್ನೆಲೆ ನ್ಯೂಮೋನಿಯಾ ಹೆಚ್ಚಳವಾಗಿದೆ. ನ್ಯೂಮೋನಿಯಾ ರೋಗಿಗಳೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರಿಗೆ ICUಗಳಲ್ಲಿ ಬೆಡ್‌ಗಳ ಸಮಸ್ಯೆ ಉಂಟಾಗಿದೆ. ICU ಅಲಭ್ಯತೆಯಿಂದ ಸಾವಿನ ಸಂಖ್ಯೆ ಹೆಚ್ಚುವ ಆತಂಕ ವ್ಯಕ್ತವಾಗಿದೆ. ಮುಂದೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ಮುಂದೆ ಮಹಾಮಾರಿಯ ಅಸಲಿ ಆರ್ಭಟ ಶುರುವಾಗಲಿದೆ. ನೀವೂ ನಿರ್ಲಕ್ಷ್ಯ ಮಾಡಿದರೇ ಪ್ರಾಣಕ್ಕೆ ಕುತ್ತು ಗ್ಯಾರಂಟಿ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗಲಿದೆ. ICU ಬೆಡ್ ಅರೆಂಜ್ ಮಾಡಲು ಆರೋಗ್ಯ ಇಲಾಖೆಗೆ ಮತ್ತೆ ಟೆನ್ಶನ್ ಶುರುವಾಗಲಿದೆ.